ಮಂಗಳವಾರ, ಜೂನ್ 22, 2021
28 °C

ಸತ್ಯ ಹೇಳಲಾಗದಂಥ ಪರಿಸ್ಥಿತಿ ಇದೆ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನರೇಂದ್ರ ಮೋದಿ ಮಾತ್ರ ದೇಶಭಕ್ತ. ಅವರಿಂದಲೇ ದೇಶ ಉಳಿಯುತ್ತದೆ ಎಂದು ಬಿಂಬಿಸಲಾಗಿದೆ. ಪುಲ್ವಾಮ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುವಂತಿಲ್ಲ. ಸತ್ಯ ಹೇಳಲಾಗದಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.

‘ಐದು ವರ್ಷಗಳಲ್ಲಿ ಜಿಡಿಪಿ ಪಾತಾಳಕ್ಕಿಳಿದಿದೆ. ರೂಪಾಯಿ ಮೌಲ್ಯ ಕುಸಿದಿದೆ. ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಿರುದ್ಯೋಗ ಸಮಸ್ಯೆ ದೊಡ್ಡದಾಗಿ ಬೆಳೆದಿದೆ. ರೈತರ ಸಮಸ್ಯೆಗಳು ಬಗೆಹರಿದಿಲ್ಲ. ಇಷ್ಟಾದರೂ ಮೋದಿ ಸರ್ಕಾರವನ್ನು ಮಾಧ್ಯಮದವರೂ ಸೇರಿ ಇಡೀ ದೇಶದ ಜನರು ಹಾಡಿ ಹೊಗಳಿದ್ದಾರೆ’ ಎಂದರು.

‘ಬರೀ ಭಾಷಣ ಮಾಡುತ್ತಾ, ಸುಳ್ಳು ಹೇಳುತ್ತಾ, ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಮೋದಿ ಕಾಲ ಕಳೆದರು. ಮಾಧ್ಯಮದವರೂ ಸೇರಿದಂತೆ ಎಲ್ಲರನ್ನೂ ನಂಬಿಸಿದರು’ ಎಂದು ಆರೋಪಿಸಿದರು.

‘ಪುಲ್ವಾಮ ಪ್ರಕರಣದ ವಿಚಾರದಲ್ಲಿ ದಾರಿ ತಪ್ಪಿಸಿದರು. ಸೈನಿಕರ ಸಾವು ತಪ್ಪಿಸಬಹುದಿತ್ತು. ಬೇಹುಗಾರಿಕೆ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇದನ್ನು ನಾವು ಪ್ರಶ್ನೆ ಮಾಡಬಾರದೇ? ಸಂವಿಧಾನದಲ್ಲಿ ನಮಗೆ ಪ್ರಶ್ನೆ ಮಾಡುವ ಹಕ್ಕಿಲ್ಲವೇ?’ ಎಂದು ಕೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು