ಮೂಡುಬಿದಿರೆ (ದಕ್ಷಿಣ ಕನ್ನಡ): ಅಮೋಘ ಓಟ ಪ್ರದರ್ಶಿಸಿದ ತಮಿಳುನಾಡಿನ ಭಾರತಿಯಾರ್ ವಿಶ್ವವಿದ್ಯಾಲಯದ ಸ್ಯಾಮ್ ವಸಂತ್, ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಪುರುಷರ 100 ಮೀಟರ್ಸ್ ಓಟದಲ್ಲಿ ದಾಖಲೆ ಬರೆದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯಗಳ ವಿವಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಸಿರುವ ಕೂಟದ ಸೆಮಿಫೈನಲ್ನಲ್ಲಿ 10.39 ಸೆಕೆಂಡುಗಳಲ್ಲಿ ಸ್ಯಾಮ್ ಮೊದಲಿಗರಾದರು. ಮಂಗಳೂರು ವಿವಿಯ ಏಲಕ್ಯದಾಸನ್ 2018ರಲ್ಲಿ 10.41 ಸೆಕೆಂಡುಗಳ ಸಾಧನೆ ಮಾಡಿದ್ದರು.

ಫೈನಲ್ನಲ್ಲಿ ಸ್ಯಾಮ್ ವಸಂತ್ 10.44 ಸೆಕೆಂಡು ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತನ್ನಿತ್ತರು. ಮಂಗಳೂರು ವಿವಿಯ ವಿಭಾಸ್ಕರ್ ಬೆಳ್ಳಿ ಪದಕ ಗೆದ್ದುಕೊಂಡರು.

ಕೂಟದ ವೇಗದ ಓಟಗಾರ್ತಿಯಾಗಿ ಮದ್ರಾಸ್ ವಿವಿಯ ಪ್ರತಿಭಾ ಸೆಲ್ವರಾಜ್ ಮೂಡಿಬಂದರು. ಎಸ್ಆರ್ಎಂ ತಾಂತ್ರಿಕ ಸಂಸ್ಥೆಯ ಸುದರ್ಶಿನಿ ಅವರ ಪೈಪೋಟಿ ಮೀರಿದ ಪ್ರತಿಭಾ 11.74 ಸೆಕೆಂಡುಗಳಲ್ಲಿ ಗುರಿಮುಟ್ಟಿ ಚಿನ್ನ ಗೆದ್ದರು.

ಸುದೀಪ್ ‘ಎತ್ತರ’ದ ಸಾಧನೆ:

ಕುವೆಂಪು ವಿವಿ ವಿದ್ಯಾರ್ಥಿ ಸುದೀಪ್ ದಿನದ ಕೊನೆಯ ಫೈನಲ್, ಪುರುಷರ ಹೈಜಂಪ್ನಲ್ಲಿ ಚಿನ್ನ ಗೆದ್ದರು. ಪುರುಷ ಮತ್ತು ಮಹಿಳೆಯರ 400 ಮೀ ಹರ್ಡಲ್ಸ್ನ ಬೆಳ್ಳಿ ಮಂಗಳೂರು ವಿವಿ ಪಾಲಾಯಿತು. ಮಹಿಳೆಯರ ವಿಭಾಗದಲ್ಲಿ ದೀಕ್ಷಿತಾ ಗೌಡ ಬೆಳ್ಳಿ ಹಾಗೂ ಪುರುಷರ ವಿಭಾಗದಲ್ಲಿ ಆರ್ಯನ್ ಪ್ರಜ್ವಲ್ ಕಶ್ಯಪ್ ಮಿಂಚಿದರು.

2ನೇ ದಿನದ ಫಲಿತಾಂಶಗಳು

ಪುರುಷರು: 100 ಮೀ: ಸ್ಯಾಮ್ ವಸಂತ್ (ಭಾರತಿಯಾರ್)–1. ಕಾಲ:10.44ಸೆ, ವಿಭಾಸ್ಕರ್ (ಮಂಗಳೂರು)–2, ಗಿಟ್ಸನ್ ಧರ್ಮರಾಜ್ (ಮದ್ರಾಸ್)–3; 400 ಮೀ ಹರ್ಡಲ್ಸ್: ಮಹೇಂದ್ರನ್ (ಮದ್ರಾಸ್)–1. ಕಾಲ: 51.35ಸೆ, ಆರ್ಯನ್ ಪ್ರಜ್ವಲ್ ಕಶ್ಯಪ್ (ಮಂಗಳೂರು)–2, ಕಾರ್ತಿಕ್ ರಾಜ (ಮನೋನ್ಮಣಿಯನ್)–3; 800 ಮೀ: ಸಂಕೇತ್ (ಎಂ.ಡಿ ರೋಹ್ಟಕ್)–1. ಕಾಲ: 1ನಿ 48.95ಸೆ, ದೊರೆ ಪ್ರಥಮೇಶ್ ಅಮರೀಶ್ (ಮಂಗಳೂರು)–2, ಅಮಿತ್ ಕುಮಾರ್ (ಛತ್ರಪತಿ ಸಾಹು)–3; 20 ಕಿಮೀ ವೇಗ ನಡಿಗೆ: ವಿವ್ಹೇಂದ್ರ ಸಿಂಗ್ (ಆರ್ಐಎಂಟಿ)–1. ಕಾಲ: 1ತಾಸು 25ನಿ 50.07 ಸೆ, ಸರ್ವಜೀತ್ ಪಟೇಲ್ (ರಾಮ್ಮನೋಹರ್ ಲೋಹಿಯಾ)–2, ದಶರತ್ ನಿಂಗ ತಲವಾರ್ (ಬೆಂಗಳೂರು)–3; ಹೈಜಂಪ್: ಸುದೀಪ್ (ಕುವೆಂಪು)–1. ಎತ್ತರ: 2.11 ಮೀ, ಮಹಮ್ಮದ್ ಫಾಜಿಲ್ (ಮದ್ರಾಸ್)–2, ಆದಿತ್ಯ ರಘುವಂಶಿ (ಚಂಡೀಗಢ)–3; ಶಾಟ್ಪಟ್: ವರಿಂದರ್ ಸಿಂಗ್ (ಚಂಡೀಗಢ)–1. ದೂರ: 18.22ಮೀ, ಸಾವನ್ (ಚಂಡೀಗಢ)–2, ಅನಿಕೇತ್ (ಮಂಗಳೂರು)–2,

ಮಹಿಳೆಯರು: 100 ಮೀ: ಪ್ರತಿಭಾ ಸೆಲ್ವರಾಜ್ (ಮದ್ರಾಸ್)–1. ಕಾಲ: 11.74, ಶುಭದರ್ಶಿನಿ (ಎಸ್ಆರ್ಎಂ)–2, ತನಿಷಾ ರಾಘವ್ (ಡೆಲ್ಲಿ)–3; 800ಮೀ: ಅಂಜು (ಲವ್ಲಿ)–1. ಕಾಲ: 2ನಿ 8.43ಸೆ, ಅಂಜಲಿ (ಗುರುನಾನಕ್)–2, ಲಕ್ಷ್ಮಿಪ್ರಿಯಾ (ಕಳಿಂಗ)–3; 400 ಮೀ ಹರ್ಡಲ್ಸ್: ಡೆಲ್ನಾ ಫಿಲಿಪ್ (ಕ್ಯಾಲಿಕಟ್)–1. ಕಾಲ: 1ನಿ 0.12ಸೆ, ದೀಕ್ಷಿತಾ ರಾಮಗೌಡ (ಮಂಗಳೂರು)–2, ಮೇಘಾ ಮುನವಳ್ಳಿಮಠ (ಧಾರವಾಡ)–3; 20ಕಿಮೀ ವೇಗನಡಿಗೆ: ಚೌಧರಿ ಗಾಯತ್ ಗಣೇಶ್ (ಸಾವಿತ್ರಿಬಾಯಿ ಫುಲೆ)–1. ಕಾಲ: 1ತಾಸು 40ನಿ 15.41ಸೆ, ಬಲ್ಜೀತ್ ಕೌರ್ (ತಾಲವಾಡಿ)–2, ನಿಕಿತಾ ಲಾಂಬ (ಚಂಡೀಗಢ)–3; ಟ್ರಿಪಲ್ ಜಂಪ್: ಅಲೀನಾ ಸಜಿ (ಎಂ.ಜಿ ಕೋಟಯಂ)–1. ಅಂತರ: 12.79 ಮೀ, ಸಾಧನಾ ರವಿ (ಎಸ್ಆರ್ಎಂ)–2, ಪ್ರೀತಿ (ಮಹಾರಾಜ ಗಂಗಾಸಿಂಗ್)–3; ಡಿಸ್ಕಸ್ ಥ್ರೋ: ಸಾನಿಯಾ ಯಾದವ್ (ತಾಲವಾಡಿ)–1. ದೂರ: 53.45ಮೀ, ಪ್ರಿಯಾ (ಚಂಡೀಗಢ)–2, ಉಜ್ವಲಾ ಕೆ (ಗುರುನಾನಕ್)–3.

ವಿಶ್ವವಿದ್ಯಾಲಯದಲ್ಲಿ ನನ್ನ ಓಟ ಗಮನಿಸಿದ ಕೋಚ್ ಮುರುಗನ್ ‘ನಿನಗೆ ದಾಖಲೆ ಮಾಡಲು ಸಾಧ್ಯ’ ಎಂದಿದ್ದರು. ಅದು ಆತ್ಮವಿಶ್ವಾಸ ತುಂಬಿತು.
ಸ್ಯಾಮ್ ವಸಂತ್ 100 ಮೀ ಓಟದಲ್ಲಿ ದಾಖಲೆ ಬರೆದ ಅಥ್ಲೀಟ್

ಗಾಯದ ನಂತರ ಮೊದಲ ಪದಕ

100 ಮೀಟರ್ಸ್ ಓಟದಲ್ಲಿ ದಾಖಲೆವೀರನಿಗೆ ಸವಾಲೊಡ್ಡಿ ಬೆಳ್ಳಿ ಪದಕ ಗಳಿಸಿದ ಮಂಗಳೂರು ವಿವಿಯ ವಿಭಾಸ್ಕರ್ ಗಾಯದ ಸಮಸ್ಯೆ ಕಾಡಿದ ನಂತರ ಗೆದ್ದ ಮೊದಲ ಪದಕ. ಬಿಹಾರದ ಸಾರಂಗ್ ಜಿಲ್ಲೆಯವರಾದ ವಿಭಾಸ್ಕರ್ ಆಳ್ವಾಸ್ ಕಾಲೇಜಿನ ಮೊದಲ ವರ್ಷದ ಬಿಎ ವಿದ್ಯಾರ್ಥಿ. ‘2019ರಲ್ಲಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದ 100 ಮೀ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದೆ. ನಂತರ ಗಾಯಗೊಂಡೆ. 6 ವರ್ಷಗಳ ನಂತರ ಪದಕ ಗೆಲ್ಲಲು ಸಾಧ್ಯವಾಗಿರುವುದು ಖುಷಿ ತಂದಿದೆ’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.