ಸಿನಿಮಾಕ್ಕಾಗಿ ಸನ್ನಿ ಹೊಸ ಭಾಷೆ ಕಲಿಕೆ

ಭಾನುವಾರ, ಜೂಲೈ 21, 2019
22 °C
ಸನ್ನಿ

ಸಿನಿಮಾಕ್ಕಾಗಿ ಸನ್ನಿ ಹೊಸ ಭಾಷೆ ಕಲಿಕೆ

Published:
Updated:
Prajavani

ಕೋಕೊ ಕೋಲಾ‘ ಕಾಮಿಡಿ ಮತ್ತು ಹಾರರ್‌ ಚಿತ್ರಕ್ಕಾಗಿ ಹಾಲಿವುಡ್‌ ನಟಿ ಮತ್ತು ರೂಪದರ್ಶಿ ಸನ್ನಿ ಲಿಯೋನ್‌ ಉತ್ತರ ಪ್ರದೇಶದ ನೆಲದ ಸೊಗಡಿನ ಹಿಂದಿ ಕಲಿಯುತ್ತಿದ್ದಾರೆ. ಮಹೇಂದ್ರ ಧಾರಿವಾಲಾ ನಿರ್ಮಾಣದ ಚಿತ್ರ ಮುಂದಿನ ತಿಂಗಳ ಅಂತ್ಯಕ್ಕೆ ಸೆ‌ಟ್ಟೇರಲಿದೆ. 

ಕಥೆ ಪೂರ್ಣ ಉತ್ತರ ಪ್ರದೇಶದಲ್ಲಿ ನಡೆಯುವುದರಿಂದ ಸನ್ನಿ ಲಿಯೋನ್‌ಗೆ ಸ್ಥಳೀಯ ಶೈಲಿಯಲ್ಲಿ ಹಿಂದಿ ಮಾತನಾಡುವ ಪಾಠ ಆರಂಭಿಸಲಾಗಿದೆ. ಉಳಿದೆಡೆ ಮಾತನಾಡುವ ಹಿಂದಿಗಿಂತ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮಾತನಾಡುವ ಹಿಂದಿ ತುಸು ವಿಭಿನ್ನ. ಗ್ರಾಮ್ಯ ಭಾಷೆಯ ಸೊಗಸೇ ಬೆರೆ. ಭೋಜಪುರಿ, ಡೋಂಗ್ರಿ ಶೈಲಿಯ ಹಿಂದಿ ಮಾತನಾಡಲು ಬಾಲಿವುಡ್‌ ನಟ, ನಟಿಯರೇ ಕಷ್ಟ ಪಡುತ್ತಿರುವಾಗ ಸನ್ನಿ ಲಿಯೋನ್‌ ಹೊಸ ಸಾಹಸ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.     

ಸ್ಥಳೀಯ ಹಿಂದಿ ಸೊಗಡು ತುಸು ಕಷ್ಟವಾದರೂ ಎಂಜಾಯ್‌ ಮಾಡುತ್ತ ಕಲಿಯುತ್ತಿರುವುದಾಗಿ ಸನ್ನಿ ಹೇಳಿದ್ದಾರೆ. ರಂಗೀಲಾ ಮತ್ತು ವೀರಮಹಾದೇವಿ ಚಿತ್ರಗಳ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿರುವ ಸನ್ನಿ ಅಲ್ಲಿಯ ಭಾಷೆ, ಸಂಸ್ಖೃತಿಯನ್ನು ಮೆಚ್ಚಿಕೊಂಡಿದ್ದಾರೆ.

‘ಹೊಸ ಭಾಷೆ, ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿ ಬಗ್ಗೆ ತಿಳಿದುಕೊಳ್ಳುವುದು ಮೊದಲಿನಿಂದಲೂ ನನಗೆ ಅಚ್ಚುಮೆಚ್ಚು. ಅದು ನನಗೆ ಹೆಚ್ಚು ಕಷ್ಟವಾಗದು. ಅದನ್ನು ಹೆಚ್ಚು ಇಷ್ಟಪಡುತ್ತೇನೆ’ ಎನ್ನುವುದು ಸನ್ನಿ ವಿವರಣೆ. 

ಹಿಂದಿಯನ್ನು ಇಂಗ್ಲಿಷ್‌ ಶೈಲಿಯಲ್ಲಿ ಮಾತನಾಡುವ ಸನ್ನಿ ಬಾಯಲ್ಲಿ ಉತ್ತರ ಪ್ರದೇಶದ ಸ್ಥಳೀಯ ಭಾಷೆ ತೆರೆಯ ಮೇಲೆ ಯಾವ ರೀತಿ ಹೊರಹೊಮ್ಮುತ್ತದೆ ಎಂದು ನೋಡಲು ಪ್ರೇಕ್ಷಕರು ಚಿತ್ರ ಬಿಡುಗಡೆಯಾಗುವವರೆಗೂ ಕಾಯಬೇಕಷ್ಟೇ! →→v

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !