ಗುರುವಾರ , ಏಪ್ರಿಲ್ 2, 2020
19 °C

ಅಪರೂಪದ ಸಿಂಗಪುರ ‘ಸೀ ಫುಡ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜ ಪಾನ್‌, ಥಾಯ್ಲೆಂಡ್‌, ಇಂಡೊನೇಷ್ಯಾ, ಸಿಂಗಪುರ ಸೇರಿದಂತೆ ಪೆಸಿಫಿಕ್‌ ರಾಷ್ಟ್ರಗಳ ವಿಭಿನ್ನ ರುಚಿಯ 30 ಬಗೆಯ ಸಮುದ್ರ ಆಹಾರ ಸವಿಯುವ ಅಪರೂಪದ ಅವಕಾಶವನ್ನು ಹಲಸೂರು ರಸ್ತೆಯ ಕಾನ್‌ರಾಡ್‌ ಹೋಟೆಲ್‌ನಲ್ಲಿರುವ ಮಿಕುಸು ರೆಸ್ಟೋರೆಂಟ್‌ ನಗರದ ಆಹಾರ ಪ್ರಿಯರಿಗೆ ಒದಗಿಸಿದೆ.  

ಜೂನ್‌ 7ರಿಂದ ಆರಂಭವಾಗಿರುವ ‘ಸಿಂಗಪುರ ಆಹಾರ ಉತ್ಸವ’ದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಶೆಫ್‌ ಲಿವ್‌ ಸೂನ್‌ ಲಿವ್‌ ಮತ್ತು ದೇವೇಂದ್ರ ಸಿಂಗ್‌ ರಾವತ್‌ ಜೋಡಿ ಸಾಂಪ್ರದಾಯಿಕ ಸಿಂಗಪುರ ಖಾದ್ಯಗಳನ್ನು ಉಣ ಬಡಿಸುತ್ತಿದೆ.  ಸಿಂಗಪುರದ ಸಾಂಪ್ರದಾಯಿಕ ರುಚಿಯನ್ನು ಹಾಗೆಯೇ ಉಳಿಸಿಕೊಂಡು ಖಾದ್ಯಗಳಿಗೆ ಜಾಗತಿಕ ಸ್ಪರ್ಶ ನೀಡುವಲ್ಲಿ ಲಿವ್‌ ಎತ್ತಿದ ಕೈ. ಮೀನು, ಸಿಗಡಿ ಮೀನು, ಚಿಕನ್‌ ವಿಂಗ್ಸ್, ಚಿಕನ್‌ ರೈಸ್‌, ಏಡಿ, ಹುರಿದ ಬೇಬಿ ಅಕ್ಟೋಪಸ್‌, ಮಶ್ರೂಮ್‌, ಕಟ್ಟಿಗೆಯಲ್ಲಿ ಸುಟ್ಟ ಬ್ಲಾಕ್‌ ಪೆಪ್ಪರ್‌ ದನದ ಮಾಂಸ ನಾಲಿಗೆ ಚಪಲ ತಣಿಸುತ್ತವೆ. 

ಚಿಲ್ಲಿ ಕ್ರ್ಯಾಬ್‌, ಕ್ರಿಸ್ಪಿ ಮಶ್ರೂಮ್‌, ಸೂಪ್‌ ಹಾಂಗೋಶಾವ್, ಪೀಯೋನಿ ಕ್ರ್ಯಾಬ್ ಫ್ರೀಟ್ಟೆರ್ಸ, ಮಾರಿನೆಟೆಡ್ ಬೇಬಿ ಅಕ್ಟೋಪಸ್, ಏಶಿಯನ್ ವೆಜಿಟೆಬಲ್ ರೈಸ್ ಪೆಪ್ಪರ್ ರೋಲ್, ಟ್ಯಾಮರಿಂಡ್‌ ಸಿಬಾಸ್, ಸ್ಟರ್‌ ಪ್ರೈಡ್ ಸ್ವೀಟ್‌ ಅಂಡ್ ಸೋರ್ ಚಿಕನ್, ಪ್ರೈಡ್ ಎಗ್ ಪ್ಲಾಂಟ್ ವಿಥ್ ಸ್ನೋವ್‌ ಅಂಡ್ ಆರೆಂಜ್ ಸಾಸ್, ಹೊಕ್ಕೇನ್‌ ಮೀ, ವೆಜಿಟೆಬಲ್ ಬ್ರೈಸಡ್ ನೂಡಲ್ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತವೆ. ಜೂನ್ 20ರ ವರೆಗೆ ಉತ್ಸವ ನಡೆಯಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು