ಭಾನುವಾರ, ಡಿಸೆಂಬರ್ 8, 2019
22 °C

ಕಾನೂನಿಗಿಂತ ಜಾಗೃತಿ ಹೆಚ್ಚು ಪರಿಣಾಮಕಾರಿ

Published:
Updated:

ಹಣ ದ್ವಿಗುಣಗೊಳಿಸುವ ಆಮಿಷ ತೋರಿ, ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಸಂಗ್ರಹಿಸಿ ನಾಪತ್ತೆಯಾಗುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹಗರಣ ಬಯಲಿಗೆ ಬಂದಾಗ ಕಾಟಾಚಾರಕ್ಕೆ ಎನ್ನುವಂತೆ ತನಿಖಾ ಸಮಿತಿ ರಚಿಸಿ ಕೈತೊಳೆದುಕೊಳ್ಳಲಾಗುತ್ತದೆ. ಆ ಸಮಿತಿಯು ತನಿಖೆ ನಡೆಸಿ, ಮೋಸ ಹೋದವರಿಗೆ ನ್ಯಾಯ ಕೊಡಿಸುವಷ್ಟರಲ್ಲಿ ದಶಕಗಳೇ ಕಳೆಯುತ್ತವೆ. ಹೀಗಾಗಿ ಇಂತಹ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನ್ಯಾಯ ದೊರಕಿದ ನಿದರ್ಶನಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ವಿಚಾರಗಳಲ್ಲಿ ಕಾನೂನಿನ ಕ್ರಮಕ್ಕಿಂತ ಹೆಚ್ಚಾಗಿ ಸಾರ್ವಜನಿಕರೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ, ಅವರನ್ನು ಮೋಸಗೊಳಿಸುವವರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ.

–ಸಂತೋಷ್ ಹ. ರಾಯ್ಕರ್, ಬೆಂಗಳೂರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು