ಗಂದಗೆ ಪೆನಲ್‌ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ

ಭಾನುವಾರ, ಜೂಲೈ 21, 2019
27 °C
ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಚುನಾವಣೆ

ಗಂದಗೆ ಪೆನಲ್‌ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ

Published:
Updated:
Prajavani

ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿಗೆ ನಡೆದ ಚುನಾವಣೆಯಲ್ಲಿ ರಾಜೇಂದ್ರಕುಮಾರ ಗಂದಗೆ ಪೆನಲ್‌ನಿಂದ ಆಯ್ಕೆಯಾದ 50 ಜನ ನಿರ್ದೇಶಕರಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ನಗರದ ಎಂ.ಎಸ್. ಪಾಟೀಲ ಫಂಕ್ಷನ್ ಹಾಲ್‌ನಲ್ಲಿ ನಡೆಯಿತು.

ಚುನಾವಣಾಧಿಕಾರಿ ವೀರಪ್ಪ ಪಸಾರ್ಗಿ ಅವರ ನೇತೃತ್ವದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.

ರಾಜಕುಮಾರ ಹೊಸದೊಡ್ಡೆ ಮಾತನಾಡಿ, ‘ಜಿಲ್ಲಾ ಕಾರ್ಯಕಾರಿಣಿ ಸಮಿತಿಯ 62 ಸ್ಥಾನಗಳಲ್ಲಿ ಗಂದಗೆ ಪೆನಾಲ್‌ನ 50 ಮಂದಿ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಇದೇ 11 ರಂದು ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲೂ ಗಂದಗೆ ಪೆನಲ್ ಗೆಲುವು ಸಾಧಿಸಲಿದೆ’ ಎಂದು ತಿಳಿಸಿದರು.

ಉಪನ್ಯಾಸಕ ರಾಜಶೇಖರ ಮಂಗಲಗಿ ಮಾತನಾಡಿ, ‘ಕಳೆದ ಅವಧಿಯಲ್ಲಿ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ ಗಂದಗೆ ಹಾಗೂ ತಂಡದ ಕಾರ್ಯವನ್ನು ಮೆಚ್ಚಿ ನೌಕರರು ಚುನಾವಣೆಯಲ್ಲಿ ಪೆನಲ್‌ಗೆ ಬಹುಮತ ನೀಡಿದ್ದಾರೆ’ ಎಂದು ಹೇಳಿದರು.

ಭಾಲ್ಕಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಮಾತನಾಡಿ, ‘ಗಂದಗೆ ಅವರ ತಂಡದಿಂದ ಸರ್ಕಾರಿ ನೌಕರರ ಅನೇಕ ಸಮಸ್ಯೆಗಳು ಪರಿಹಾರವಾಗಿವೆ. ಜಿಲ್ಲೆಯ ನೌಕರರಿಗೆ ತೀವ್ರ ಕಾಯಿಲೆಗಳ ಸಂದರ್ಭದಲ್ಲಿ ಹೈದರಾಬಾದ್ ಹಾಗೂ ಸೋಲಾಪುರದ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸರ್ಕಾರ ಆದೇಶ ಹೊರಡಿಸಿರುವುದರಿಂದ ಅನುಕೂಲವಾಗಿದೆ’ ಎಂದು ಹೇಳಿದರು.

ಔರಾದ್ ಹಾಗೂ ಭಾಲ್ಕಿ ತಾಲ್ಲೂಕು ಘಟಕಗಳ ನೂತನ ಅಧ್ಯಕ್ಷರಾದ ಶಿವಕುಮಾರ ಘಾಟೆ ಹಾಗೂ ರಾಜಪ್ಪ ಪಾಟೀಲ ಅವರು ಗಂದಗೆ ಪೆನಲ್‌ಗೆ ಬೆಂಬಲ ಘೋಷಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರಕುಮಾರ ಗಂದಗೆ, ‘ಬರುವ ದಿನಗಳಲ್ಲಿ ಜಿಲ್ಲೆಯ ನೌಕರರ ಹಿತರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಪ್ರಕಾಶ ಮಡಿವಾಳ, ಸುಧಾಕಾರ(ಜಿಲ್ಲಾ ಆಸ್ಪತ್ರೆ) ವಿಜಯಕುಮಾರ(ಕೃಷಿ), ಸಿದ್ದಪ್ಪ ಪಾಟೀಲ(ಪಶು ಸಂಗೋಪನೆ), ಪ್ರದೀಪ ಅಂಗಡಿ, ಬಿ.ಸಂತೋಷ (ಕಂದಾಯ), ಸಿದ್ದಮ್ಮ (ಆಹಾರ), ಶರಣಯ್ಯ ಮಠಪತಿ(ಸಾಂಖ್ಯಿಕ) ರಾಜೇಂದ್ರಕುಮಾರ ಗಂದಗೆ(ವಾಣಿಜ್ಯ), ಸಂಗಮೇಶ (ಸಹಕಾರ), ಜಗದೇವಿ(ಲೆಕ್ಕ ಪರಿಶೋಧನೆ), ನೀಲಕಂಠ ಬೀರಗೆ(ಜಿ.ಪಂ), ಅನೀಲಕುಮಾರ ಪೊದ್ದಾರ(ಅಬಕಾರಿ), ಅಶೋಕಕುಮಾರ(ಮಹಿಳಾ), ಎಂ.ಡಿ.ನದೀಮ್ ಉರ್‌ಹೆಮಾನ(ಮೀನುಗಾರಿಕೆ), ವೀರಯ್ಯ ಪೂಜಾರಿ (ಅರಣ್ಯ), ಅಶೋಕ ರಡ್ಡಿ, ಅಬ್ದುಲ್ ಸತ್ತಾರ್‌, ಓಂಕಾರ(ಆರೋಗ್ಯ), ಡಾ.ವೈಶಾಲಿ(ಆಯುಷ್), ಕಾಶೀನಾಥ ಸ್ವಾಮಿ(ತೋಟಗಾರಿಕೆ), ರಾಜಕುಮಾರ ಪಾಟೀಲ(ಕೈಗಾರಿಕೆ), ಪ್ರಭುಲಿಂಗ, ಮನೋಹರ(ಪ್ರಾಥಮಿಕ ಶಿಕ್ಷಣ), ಶಿವಕುಮಾರ ಬಾವಗೆ(ಪ್ರೌಢಶಿಕ್ಷಣ), ರಾಜಶೇಖರ ಮಂಗಲಗಿ(ಪದವಿಪೂರ್ವ ಶಿಕ್ಷಣ) ರಾಜಕುಮಾರ ಹೊಸದೊಡ್ಡೆ (ಪದವಿ), ಬಕ್ಕಪ್ಪ(ತಾಂತ್ರಿಕ), ಬಿ.ಎಂ.ಲಿಂಗರಾಜು(ಗಣಿ), ಸಂಗಮೇಶ(ಪೊಲೀಸ್‌), ಅರವಿಂದ ಗಂದಗೆ(ಭೂ ದಾಖಲೆ), ಸಂತೋಷಕುಮಾರ ಬಿರಾದಾರ(ಕಾರಾಗೃಹ), ಚಂದ್ರಕಾಂತ ಶಕಾರಿ(ಮುದ್ರಾಂಕ), ಸತೀಶ ಪಾಟೀಲ (ಖಜಾನೆ), ರೇಣುಕಾ(ಕಾರ್ಮಿಕ), ಸಾವಿತ್ರಮ್ಮ (ಧಾರ್ಮಿಕ), ದಿಲೀಪಕುಮಾರ, ನೀಲಕಂಠ ಪಿ.ಎಸ್.(ನ್ಯಾಯಾಂಗ), ರೂಪಾದೇವಿ(ಪಿ.ಎಂ.ಜಿ.ಎಸ್.ವೈ) ಮಾಣಿಕರಾವ್‌ ಪಾಟೀಲ (ತಾ.ಪಂ), ರಮೇಶ (ಔಷಧ), ರಮೇಶ ಎಲ್.(ನಗರಸಭೆ), ಗಣಪತಿ(ಕಾರಂಜಾ) ಮತ್ತಿತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಹಿರಿಯರಾದ ಬಸವರಾಜ ಸ್ವಾಮಿ, ಬಸವರಾಜ ಜಕ್ಕಾ, ಉಮೇಶ ಪಾಟೀಲ, ಶಿವಶಂಕರ ವಡ್ಡಿ, ರಾಜಕುಮಾರ ಬಿರಾದಾರ, ಗಂಗಾಧರ ಕೋರಿ, ರಾಜೇಂದ್ರ ಉದಗೀರೆ, ಸುನೀಲಕುಮಾರ, ಅಮಜದ್‌ಖಾನ್‌, ರಮೇಶ ಹೂಗಾರ, ಸೋಮನಾಥ ಹಾವಶೆಟ್ಟಿ, ಸ್ಟೀಲ್ಲಾರಾಣಿ, ವಿಜಯಲಕ್ಷ್ಮಿ, ಅಬ್ದುಲ್ ಖಲೀಲ್ ಉಪಸ್ಥಿತರಿದ್ದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಸಿದ್ದಮ್ಮ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !