ಆ್ಯಪಲ್‌ ಮೊಬೈಲ್‌ಗೂ, ಹಣ್ಣಿಗೂ ವ್ಯತ್ಯಾಸ ತಿಳಿಯದ ಸುದ್ದಿ ನಿರೂಪಕಿ

ಭಾನುವಾರ, ಜೂಲೈ 21, 2019
22 °C

ಆ್ಯಪಲ್‌ ಮೊಬೈಲ್‌ಗೂ, ಹಣ್ಣಿಗೂ ವ್ಯತ್ಯಾಸ ತಿಳಿಯದ ಸುದ್ದಿ ನಿರೂಪಕಿ

Published:
Updated:

ಇಸ್ಲಾಮಾಬಾದ್‌: ಆ್ಯಪಲ್‌ ಕಂಪನಿಯನ್ನು ಹಣ್ಣು ಎಂದು ಭಾವಿಸಿಕೊಂಡ ಪಾಕಿಸ್ತಾನದ ಸುದ್ದಿ ವಾಹಿನಿಯ ನಿರೂಪಕಿಯೊಬ್ಬರು ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ. 

ಗುರುವಾರ ಸಂಜೆ ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ಚರ್ಚೆಯೊಂದು ನಡೆಯುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿ ದೇಶದ ಆರ್ಥ ವ್ಯವಸ್ಥೆಯನ್ನು ಆ್ಯಪಲ್‌ ಕಂಪನಿಯ ವಹಿವಾಟಿನೊಂದಿಗೆ ಹೋಲಿಸಿದರು. ‘ಪಾಕಿಸ್ತಾನದ ಒಟ್ಟಾರೆ ಬಜೆಟ್‌ಗಿಂತಲೂ ಆ್ಯಪಲ್‌ನ ವಹಿವಾಟು ಹೆಚ್ಚಿದೆ,’ ಎಂದು ಅವರು ಹೇಳಿದರು. 

ಈ ವೇಳೆ ಮಧ್ಯ ಮಾತನಾಡಿದ ನಿರೂಪಕಿ, ‘ಹೌದು, ನನಗೂ ಗೊತ್ತಾಯಿತು. ಆಪಲ್‌ಗಳ ವ್ಯಾಪಾರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲಿ ಹಲವಾರು ಪ್ರಬೇಧಗಳಿವೆ,’ ಎಂದು ಹೇಳಿದರು. ಆಗ ಸಂಪನ್ಮೂಲ ವ್ಯಕ್ತಿ ‘ನಾನು ಆ್ಯಪಲ್‌ ಮೊಬೈಲ್‌ ಕಂಪನಿಯ ಬಗ್ಗೆ ಮಾತನಾಡುತ್ತಿದ್ದೇನೆ. ಹಣ್ಣಿನ ಬಗ್ಗೆ ಅಲ್ಲ,’ ಎಂದು ಆ್ಯಂಕರ್‌ ಅನ್ನು ಎಚ್ಚರಿಸಿದರು. 

ಈ ಸಂಭಾಷಣೆಯ ವಿಡಿಯೋವನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಜುಲೈ 4ರಂದು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್‌ ಆಗಿದೆ. ಅಲ್ಲದೆ, ನಿರೂಪಕಿ ಮೂದಲಿಕೆಗೆ ಒಳಾಗಿದ್ದಾರೆ. ಚರ್ಚೆಯ ವಿಷಯವನ್ನು ಗ್ರಹಿಸಿಕೊಳ್ಳುವಷ್ಟೂ ಬುದ್ಧಿಮತ್ತೆ ಇಲ್ಲದ ನಿರೂಪಕಿ ಎಂದು ಹೀಗಳಿಕೆಗೆ ಗುರಿಯಾಗಿದ್ದಾರೆ. 

‘ಇದೇನು ಸುದ್ದಿ ವಾಹಿನಿಯೋ ಅಥವಾ ಹಾಸ್ಯ ವಾಹಿನಿಯೋ?’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 12

  Happy
 • 9

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !