ಭಾನುವಾರ, ಆಗಸ್ಟ್ 25, 2019
21 °C

ದಾಭೋಲ್ಕರ್‌ ಹತ್ಯೆ: ಆಯುಧ ಪತ್ತೆಗೆ ಸಿದ್ಧತೆ

Published:
Updated:
Prajavani

ಮುಂಬೈ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಬಳಸಲಾದ ಆಯುಧ ಪತ್ತೆಗೆ, ವಿದೇಶಿ ತನಿಖಾ ಸಂಸ್ಥೆಯ ಸಹಾಯ ಪಡೆಯಲಾಗುತ್ತಿದೆ ಎಂದು ಕೇಂದ್ರ ತನಿಖಾ ದಳ(ಸಿಬಿಐ)ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಎಸ್‌.ಸಿ.ಧರ್ಮಾಧಿಕಾರಿ ಮತ್ತು ಜಿ.ಎಸ್.ಪಾಟೀಲ್‌ ಅವರಿದ್ದ ಪೀಠಕ್ಕೆ ಈ ಮಾಹಿತಿ ನೀಡಿದ ಸಿಬಿಐ ಕಾನ್ಸೂಲ್‌ ಅನಿಲ್‌ ಸಿಂಗ್‌, ‘ವಿದೇಶಿ ಸಂಸ್ಥೆಯ ತಜ್ಞರು ಭಾನುವಾರ ಆಗಮಿಸಲಿದ್ದಾರೆ. ಪ್ರಕ್ರಿಯೆ ಪೂರ್ಣಗೊಳ್ಳಲು 30 ದಿನವಾಗಲಿದೆ’ ಎಂದರು. ಆರೋಪಿಗಳು ಆಯುಧವನ್ನು ಸಮುದ್ರಕ್ಕೆ ಎಸೆದಿದ್ದರು.

Post Comments (+)