ಭಾನುವಾರ, ಆಗಸ್ಟ್ 25, 2019
20 °C

ಡೇವಿಸ್‌ ಕಪ್‌ ಪಂದ್ಯ ಸ್ಥಳಾಂತರಿಸಲು ಮನವಿ

Published:
Updated:

ನವದೆಹಲಿ: ಸುರಕ್ಷತೆ ಹಿನ್ನೆಲೆಯಲ್ಲಿ ಭಾರತ ಟೆನಿಸ್‌ ತಂಡದ ಆಟಗಾರರು, ಪಾಕಿಸ್ತಾನ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ಸ್ಥಳಾಂತರಿಸಬೇಕೆಂದು ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಭಾರತ, ಏಷ್ಯ– ಒಷಾನಿಯಾ ವಲಯದ ಒಂದನ ಗುಂಪಿನ ಪಂದ್ಯವನ್ನು ಸೆಪ್ಟೆಂಬರ್‌ 14 ಮತ್ತು 15ರಂದು ಆಡಬೇಕಾಗಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡ ಭಾರತದ ನಿಲು ವಿನ ನಂತರ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹಳಸಿದೆ.

‘ಭಾರತ ತಂಡದ ನಾಯಕ ಮಹೇಶ್‌ ಭೂಪತಿ ನನ್ನ ಜೊತೆ ಮಾತನಾಡಿದ್ದಾರೆ. ಇಂಥ ಸಂದರ್ಭ ಗಳಲ್ಲಿ ಪಾಲ್ಗೊಳ್ಳುವುದು ತುಂಬಾ ಕಳವಳಕಾರಿ. ಬೇರೆ ಕಡೆ ಆಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಬಯಸಿದ್ದಾರೆ’ ಎಂದು ಎಐಟಿಎ ಕಾರ್ಯದರ್ಶಿ ಹಿರಣ್ಮೊಯ್‌ ಚಟರ್ಜಿ ತಿಳಿಸಿದ್ದಾರೆ. ಪಾಕಿಸ್ತಾನದ ಭದ್ರತಾ ವ್ಯವಸ್ಥೆ ಬಗ್ಗೆ ತೃಪ್ತಿ ಹೊಂದಿರುವುದಾಗಿ ಐಟಿಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

Post Comments (+)