ಸೋಮವಾರ, ಆಗಸ್ಟ್ 26, 2019
21 °C

ಭಾರತ ಬೌಲಿಂಗ್ ಕೋಚ್ ಸ್ಥಾನಕ್ಕೆ ದೊಡ್ಡಗಣೇಶ್ ಅರ್ಜಿ

Published:
Updated:
Prajavani

ಬೆಂಗಳೂರು: ಹಿರಿಯ ಕ್ರಿಕೆಟಿಗ ದೊಡ್ಡಗಣೇಶ್ ಅವರು ಭಾರತ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದೇ 19ರಂದು ಮುಂಬೈನಲ್ಲಿ ಕ್ರಿಕೆಟ್ ಸಲಹಾ ಸಮಿತಿಯು ನಡೆಸಲಿರುವ ಸಂದರ್ಶನಕ್ಕೆ ಅವರು ಹಾಜರಾಗಲಿದ್ದಾರೆ.

ಬೆಂಗಳೂರಿನ ದೊಡ್ಡಗಣೇಶ್ ಅವರು ಭಾರತ ತಂಡದ ಪರ ನಾಲ್ಕು ಟೆಸ್ಟ್, ಒಂದು ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದಾರೆ. 104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಮಧ್ಯಮವೇಗಿ ದೊಡ್ಡಗಣೇಶ್ ಅವರ ಖಾತೆಯಲ್ಲಿ 365 ವಿಕೆಟ್‌ಗಳು ಇವೆ.  ಅವರು ಕೋಚ್ ಮತ್ತು  ಕರ್ನಾಟಕ ಸೀನಿಯರ್ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಚೆಗೆ ಅವರು ಗೋವಾ ರಣಜಿ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ರವಿಶಾಸ್ತ್ರಿ, ರಾಬಿನ್ ಸಿಂಗ್, ಲಾಲ್‌ಚಂದ್ ರಜಪೂತ್ ಮತ್ತು ಟಾಮ್‌ ಮೂಡಿ ಸೇರಿದಂತೆ ಆರು ಜನ ರೇಸ್‌ನಲ್ಲಿದ್ದಾರೆ.

ಕಪಿಲ್‌ದೇವ್, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಇರುವ ಸಮಿತಿಯು ಕೋಚ್ ಆಯ್ಕೆಗೆ ಸಂದರ್ಶನ ನಡೆಸಲಿದೆ.

Post Comments (+)