ಮಂಗಳವಾರ, ನವೆಂಬರ್ 19, 2019
21 °C

ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಪ್ರಭಾಸ್‌

Published:
Updated:
Prajavani

ಮೊದಲವಾರದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಅಭಿನಯದ ‘ಸಾಹೋ’ ಸಿನಿಮಾ ಬಳಿಕ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು.

ಎರಡನೇ ವಾರದ ನಂತರ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿರುವುದು ‘ಸಾಹೋ’ ತಂಡಕ್ಕೆ ಮನದಟ್ಟಾಗಿದೆ. ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕ ಸುಜಿತ್‌ ರೆಡ್ಡಿ ಕೂಡ ಭಾವನಾತ್ಮಕ ಪೋಸ್ಟ್ ಹಾಕಿದ್ದರು. ಬಾಲಿವುಡ್‌ನಲ್ಲಿ ತಮ್ಮ ಮೊದಲ ಸಿನಿಮಾ ಬಿಡುಗಡೆಯಾಗಿದೆ. ಯುವಜನರು ಹರಸಿ ಎಂದು ಅವರು ಕೇಳಿಕೊಂಡಿದ್ದರು. ಈಗ ಪ್ರಭಾಸ್‌ ಸಿನಿಮಾ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಚಿತ್ರದ ಕುರಿತು ಬರೆದಿದ್ದಾರೆ.

‘ಅಭಿಮಾನಿಗಳ ಪ್ರೀತಿ ದೊಡ್ಡದು. ಯಾವುದೇ ನಿರ್ಬಂಧವಿಲ್ಲದೆ ಅವರು ನಮಗೆ ಪ್ರೀತಿ ಕೊಟ್ಟಿದ್ದಾರೆ. ಸಾಹೋ ಸಿನಿಮಾವನ್ನು ಸಾಕಷ್ಟು ಜನರು ನೋಡಿದ್ದಾರೆ. ಇದಕ್ಕೆ ಮೊದಲ ವಾರವೇ ಸಾಕ್ಷಿ. ಮುಂದೆಯೂ ಅದೇ ಪ್ರೀತಿ ಇರಲಿ’ ಎಂದು ಟ್ವೀಟಿಸಿದ್ದಾರೆ.

ಪ್ರತಿಕ್ರಿಯಿಸಿ (+)