ಬುಧವಾರ, ನವೆಂಬರ್ 20, 2019
21 °C

ಪಾಕ್‌ ಗುಣಗಾನ ಮಾಡಿದ ಪವಾರ್‌

Published:
Updated:
Prajavani

ಮುಂಬೈ: ಬಿಜೆಪಿಯನ್ನು ಟೀಕಿಸುವ ಭರದಲ್ಲಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಪಾಕಿಸ್ತಾನದ ಗುಣಗಾನ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಜನರು ಸಂತೋಷವಾಗಿಲ್ಲ, ಅವರ ದೇಶದಲ್ಲೇ ಅವರಿಗೆ ಅನ್ಯಾಯವಾಗುತ್ತಿದೆ ಎಂದೆಲ್ಲ ಇಲ್ಲಿ ಪ್ರಚಾರ ಮಾಡಲಾಗುತ್ತಿದೆ. ಪಾಕಿಸ್ತಾನದ ವಾಸ್ತವ ಸ್ಥಿತಿಅರಿಯದವರು ಮಾಡುವ ಇಂಥ ಟೀಕೆಗಳ ಹಿಂದೆ ರಾಜಕೀಯ ಲಾಭ ಪಡೆಯುವ ಉದ್ದೇಶವಿರುತ್ತದೆ. ಬಿಜೆಪಿಯವರು ಪಾಕ್ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದರು.

‘ನಾನು ಹಲವು ಬಾರಿ ಪಾಕಿಸ್ತಾನಕ್ಕೆ ಭೇಟಿನೀಡಿದ್ದೇನೆ. ಭಾರತದಿಂದ ಬರುವ ಎಲ್ಲರನ್ನೂ ಅವರು ತಮ್ಮ ಸಂಬಂಧಿ ಎಂಬಂತೆ ಉಪಚರಿಸುತ್ತಾರೆ’ ಎಂದು ಪವಾರ್‌ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)