ಮಂಗಳವಾರ, ಅಕ್ಟೋಬರ್ 15, 2019
29 °C

ಐಸಿಎಗೆ ದೊಡ್ಡಗಣೇಶ್ ಸ್ಪರ್ಧೆ

Published:
Updated:
Prajavani

ಬೆಂಗಳೂರು: ಬಿಸಿಸಿಐನ ಭಾರತ ಕ್ರಿಕೆಟಿಗರ ಸಂಘಟನೆ (ಐಸಿಎ) ಪ್ರತಿನಿಧಿಗಳ ಚುನಾವಣೆಯಲ್ಲಿ ಕರ್ನಾಟಕದ ದೊಡ್ಡಗಣೇಶ್ ಮತ್ತು ಮಹಿಳಾ ವಿಭಾಗದಲ್ಲಿ ಶಾಂತಾ ರಂಗಸ್ವಾಮಿ ಅವರು ಸ್ಪರ್ಧೆಯಲ್ಲಿದ್ದಾರೆ.

ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರ ಸಂಘಟನೆ ಇದಾಗಿದೆ. ಪುರುಷರ ಪ್ರತಿನಿಧಿಗಳ ವಿಭಾಗದಲ್ಲಿ ನಾಲ್ವರ ಹೆಸರುಗಳು ಅಂತಿಮವಾಗಿವೆ. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಹಿರಿಯ ಕ್ರಿಕೆಟಿಗ ಅನ್ಷುಮನ್ ಗಾಯಕವಾಡ್, ದೊಡ್ಡಗಣೇಶ್, ಕೀರ್ತಿ ಆಜಾದ್ ಮತ್ತು ರಾಕೇಶ್ ಧ್ರುವೆ ಈ ಸ್ಪರ್ಧೆಯಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಅಮೃತಾ ಪಿ ಶಿಂಧೆ, ಸಿಟಿಎಂ ಸುಗುಣಾ, ಮಾನಾ ಎಸ್   ಮತ್ತು ಶಾಂತಾ ರಂಗಸ್ವಾಮಿ ಇದ್ಧಾರೆ.

ಇದೇ 11 ರಿಂದ 13ರವರೆಗೆ ಐಸಿಎ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Post Comments (+)