ಸೋಮವಾರ, ಅಕ್ಟೋಬರ್ 21, 2019
23 °C

ಇಂದಿನಿಂದ ಟೇಬಲ್‌ ಟೆನಿಸ್‌ ಟೂರ್ನಿ

Published:
Updated:

ಬೆಂಗಳೂರು: ‘ಜಯನಗರ ಟೇಬಲ್ ಟೆನಿಸ್ ಅಸೋಸಿಯೇಷನ್‌ ವತಿಯಿಂದ ಅ.10ರಿಂದ 13ರವರೆಗೆ ರಾಷ್ಟ್ರಮಟ್ಟದ ಟೇಬಲ್‌ ಟೆನಿಸ್‌ ಟೂರ್ನಿಯನ್ನು ಏರ್ಪಡಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಿ.ಆರ್‌.ಸತ್ಯನಾರಾಯಣ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಮ್ಮ ಸಂಘವು 50ವರ್ಷ ಪೂರೈಸಿರುವ ಅಂಗವಾಗಿ ಕೆನರಾ ಬ್ಯಾಂಕ್ ಹಾಗೂ ಬಿಎಂಎಸ್ ಎಂಜಿನಿಯರಿಂಗ್‌ ಕಾಲೇಜಿನ ಸಹ ಯೋಗದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. 450ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಜೇತ ರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಸ್ಥಳ–ಒಳಾಂಗಣ ಕ್ರೀಡಾಂಗಣ, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ ರಸ್ತೆ.

Post Comments (+)