ಭಾನುವಾರ, ನವೆಂಬರ್ 17, 2019
28 °C

ರಾಜ್ಯ ಪುರಸ್ಕಾರಕ್ಕೆ ಆಯ್ಕೆ

Published:
Updated:
Prajavani

ಹಾರೋಹಳ್ಳಿ (ಕನಕಪುರ): ಇಲ್ಲಿನ ಹಾರೋಹಳ್ಳಿ ಪ್ರಗತಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಪುನೀತ್‌ ಕುಮಾರ್‌.ಕೆ.ಆರ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿಭಾಗದಿಂದ ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನ. 4ರಿಂದ 8ರವರೆಗೆ ರಾಜ್ಯ ಪುರಸ್ಕಾರದ ಪರೀಕ್ಷೆ ನಡೆಯಲಿದ್ದು ಪರೀಕ್ಷೆ ತರಬೇತಿಗಾಗಿ ಕೋಡಿಹಳ್ಳಿ ಶಾರದ ಶಾಲೆಯಲ್ಲಿ 3 ದಿನಗಳ ತರಬೇತಿ ಕಾರ್ಯಗಾರ ನಡೆಯಿತು.

ಎರಡು ದಿನಗಳ ಕಾಲ ರಾಜ್ಯ ಪುರಸ್ಕಾರ ಆಯ್ಕೆ ಬಗ್ಗೆ ತರಬೇತಿ ನೀಡಿ ಕೊನೆಯ ದಿನ ಹೊಸದುರ್ಗ ರಾಮದೇವರ ಬೆಟ್ಟದಲ್ಲಿ ಟ್ರಕ್ಕಿಂಗ್‌ ಕಾರ್ಯಗಾರವನ್ನು ನಡೆಸಲಾಯಿತು.

ಕಾರ್ಯಾಗಾರವನ್ನು ಪಾಲ್ಗೊಂಡ ಪುನೀತ್‌ ಕುಮಾರ್‌ ರಾಜ್ಯ ಪುರಸ್ಕಾರದ ಆಯ್ಕೆಗೆ ಬೇಕಿರುವ ಎಲ್ಲ ಅಗತ್ಯ ತರಬೇತಿ ಮತ್ತು ಮಾಹಿತಿ ಪಡೆದುಕೊಂಡರು.

ಪ್ರತಿಕ್ರಿಯಿಸಿ (+)