ಗುರುವಾರ , ನವೆಂಬರ್ 14, 2019
22 °C

ನೌಕರರ ತುಟ್ಟಿಭತ್ಯೆ ಶೇ 4.75 ಹೆಚ್ಚಳ?

Published:
Updated:

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶೇ 4.75ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ.

ಮೂಲವೇತನದ ಶೇ 6.50ರಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆಯನ್ನು ನೌಕರರು ಪಡೆಯುತ್ತಿದ್ದು, ಇನ್ನು ಮುಂದೆ ಶೇ 11.25ರಷ್ಟು ಸಿಗಲಿದೆ. ಶುಕ್ರವಾರ ಅಧಿಕೃತ ಆದೇಶ ಹೊರಬೀಳಲಿದೆ. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಸಿಗಲಿದೆ.

ಪ್ರತಿಕ್ರಿಯಿಸಿ (+)