ಗುರುವಾರ , ಜನವರಿ 23, 2020
28 °C

24ರಂದು ಹೈ.ಕ ಬಂದ್‌ಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಜ. 24ರಂದು ಹೈದರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಬಂದ್ ಆಚರಿಸಲು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ನಿರ್ಧರಿಸಿದೆ.ಇಲ್ಲಿನ  ಕನ್ನಡ ಭವನದಲ್ಲಿ ನಡೆದ ಹೈ.ಕ. ಹೋರಾಟ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ ತಿಳಿಸಿದರು.ಹಿರಿಯ ನಾಯಕ ಶಿವರಾಮ ಮೋಘಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಬಿ.ಆರ್. ಪಾಟೀಲ, ದಯಾನಂದರಾವ್, ತಿಪ್ಪಣಪ್ಪ ಕಮಕನೂರ, ಬೀದರ್ ಜಿಲ್ಲೆಯ ಹೋರಾಟ ಸಮಿತಿ ಅಧ್ಯಕ್ಷ ಪಂಡಿತ ಚಿದ್ರಿ, ಎಚ್.ಎಸ್. ಪಾಟೀಲ, ಅಲ್ಲಂಪ್ರಭು ಬೆಟ್ಟದೂರ, ಹೈ.ಕ ಹೋರಾಟ ಸಮಿತಿಯ ಬಸವಂತರಾವ ಕುರಿ, ರಾಜಾಕ್ ಸಾಬ, ಶಿವಕುಮಾರ ಕುಕನೂರ, ಚಂದ್ರಶೇಖರ ತವನೂರ, ಬಾಬಾಖಾನ್, ಸಂತೋಷ ದೇಶಪಾಂಡೆ, ಅಸಲಂ, ಸಂಗಪ್ಪ ಭಾಲ್ಕೆ, ಶಂಕರರಾವ, ರಾಚಯ್ಯ ಸ್ವಾಮಿ, ಲಿಂಗಣ್ಣ ದೇಸಾಯಿ, ಚಂದ್ರಶೇಖರ ಹರಸೂರ, ಚಂದ್ರಶೇಖರ ಹಿರೇಮಠ, ಬಸವರಾಜ ಕುಮನೂರ, ಲಿಂಗಣ್ಣ ಸತ್ಯಂಪೇಟೆ ಮಾತನಾಡಿದರು.ಮನವಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ವಿದ್ಯಾರ್ಥಿಗಳು, ಯುವಕ, ಯುವತಿಯರು ಬಂದ್ ಆಚರಣೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ವೈಜನಾಥ ಪಾಟೀಲ ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)