ಸಿನಿಮಾ, ಕ್ರೀಡೆ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳ ಮಹಾನ್ ಸಾಧಕರ ಜೀವನಚರಿತ್ರೆ ಆಧರಿಸಿ ಬಹಳಷ್ಟು ಸಿನಿಮಾಗಳು ಬಂದಿವೆ. ಒಂದಿಲ್ಲೊಂದು ಕಾರಣಕ್ಕೆ ವಿವಾದಕ್ಕೂ ಒಳಗಾಗಿವೆ. ಈ ನಡುವೆ 2014ರಲ್ಲಿ ತೆರೆ ಕಂಡ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರ ಬಯೋಪಿಕ್ ಸದ್ಯ ಚರ್ಚೆಯಲ್ಲಿದೆ.

ಆರು ಬಾರಿ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್, ಲಂಡನ್ ಒಲಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಅವರ ಜೀವನವನ್ನು ಆಧರಿಸಿದ ಚಿತ್ರ 2014ರಲ್ಲಿ ಮೂಡಿಬಂದಿತ್ತು. ಓಮಂಗ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಮೇರಿ ಕೋಮ್’ ಪಾತ್ರದಲ್ಲಿ ಮಿಂಚಿದ್ದರು.

ಬಾಕ್ಸ್ಆಫೀಸ್ ಹಿಟ್ ಎನಿಸಿಕೊಂಡಿರುವ ಈ ಸಿನಿಮಾದಲ್ಲಿ ಮೇರಿ ಕೋಮ್ ಅವರ ಬಾಕ್ಸಿಂಗ್ ಸಾಧನೆಯ ಹಾದಿ, ಪತಿಯ ಸಹಕಾರ, ಬಾಕ್ಸಿಂಗ್ ಜೀವನದಲ್ಲಿ ಅನುಭವಿಸಿದ ಅವಮಾನ, ಮದುವೆ, ಕುಟುಂಬ ಹೀಗೆ ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಸಿನಿಮಾದುದ್ದಕ್ಕೂ ಪತಿ–ಪತ್ನಿಯ ನಡುವಿನ ಅನ್ಯೋನತೆ ಬಗ್ಗೆ ತೋರಿಸಲಾಗಿತ್ತು.

ಆದರೆ, ಸಿನಿಮಾ ಬಿಡುಗಡೆಯಾಗಿ 12 ವರ್ಷ ಮುಗಿಯುತ್ತಲೇ ಮೇರಿ ಕೋಮ್ ತಮ್ಮ ಪತಿಯ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಬಯೋಪಿಕ್ನಲ್ಲಿ ಪ್ರಸ್ತಾಪಿಸಿದ ಅಂಶಗಳ ಸತ್ಯಾಸತ್ಯತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ. ಅಲ್ಲದೆ, ಬದುಕು ಯಾವ ಹಂತದಲ್ಲಿ ಎಂತಹ ತಿರುವು ಪಡೆಯುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಈ ವಿಚಾರ ಸಾಧಕರ ಬದುಕಿನ ಅರ್ಧ ದಾರಿಯಲ್ಲಿ ಬಯೋಪಿಕ್ ತಯಾರಿಸುವ ಔಚಿತ್ಯದ ಬಗ್ಗೆ ಚರ್ಚೆಗೂ ಎಡೆಮಾಡಿಕೊಟ್ಟಿದೆ.

'ಪತಿ ನನ್ನ ಹಣ ನುಂಗಿದ, ಅವರಿಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿದೆ, ಗಂಡಸಾಗಿ ದುಡಿಯದೇ ಮನೆಯಲ್ಲಿ ಬಿದ್ದಿರುತ್ತಿದ್ದರು' ಎಂದೆಲ್ಲ ಅನೇಕ ಆರೋಪಗಳನ್ನು ಕೋಮ್ ಮಾಡಿದ್ದಾರೆ.

ಹಿಂದೆ ಹೇಳಿದ್ದೆಲ್ಲಾ ಸುಳ್ಳಾ?:

2018ರಲ್ಲಿ ತಾರಾ ಶರ್ಮಾ ಶೋನಲ್ಲಿ ಪತಿ ಜೊತೆ ಭಾಗವಹಿಸಿದ್ದ ಮೇರಿ ಕೋಮ್, ತಮ್ಮ ಸಾಧನೆ ಹಿಂದೆ ತಮ್ಮ ಪತಿ ಇರುವುದಾಗಿ ಹೆಮ್ಮೆಯಿಂದ ಹೇಳಿದ್ದರು. ಬೆಂಬಲ ನೀಡುವ ಪತಿಯಿದ್ದರೆ ಎಲ್ಲಾ ಮಹಿಳೆಯರು ಸಾಧನೆ ಮಾಡಲು ಸಾಧ್ಯ ಎಂದೂ ನುಡಿದಿದ್ದರು.

2026 ಜನವರಿ 10ರಂದು ಪ್ರಸಾರವಾದ 'ಆಪ್ ಕಿ ಅದಾಲತ್" ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮೇರಿ ಕೋಮ್, ಹಿಂದಿನ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾರೆ. ವರ್ಷವಿಡೀ ಮನೆಯಲ್ಲಿಯೇ ಬಿದ್ದಿರುವ ನನ್ನ ಪತಿ, ನಾನು ದುಡಿದ ಹಣವನ್ನೆಲ್ಲ ಖಾಲಿ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಹಾಗಾದರೆ ಮೇರಿ ಕೋಮ್ ತಮ್ಮ ಹಿಂದಿನ ಸಂದರ್ಶನದಲ್ಲಿ ಹೇಳಿದ್ದೆಲ್ಲ ಸುಳ್ಳಾ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳದ್ದು. ಅಲ್ಲದೆ ಬಯೋಪಿಕ್ ಎಷ್ಟರಮಟ್ಟಿಗೆ ಸತ್ಯಾಂಶಗಳಿಂದ ಕೂಡಿದೆ ಎಂಬ ಪ್ರಶ್ನೆಯನ್ನೂ ಕೋಮ್ ಆರೋಪ ಹುಟ್ಟುಹಾಕಿದೆ.

ಇನ್ನೊಂದು ಕಡೆ ಮೇರಿ ಕೋಮ್ ಪತಿ ಒನ್ಲರ್ ಕರೋಂಗ್ ಕೂಡ ಪತ್ನಿ ಬಗ್ಗೆ ಪತ್ಯಾರೋಪ ಮಾಡುತ್ತಿದ್ದಾರೆ. ಜ್ಯೂನಿಯರ್ ಬಾಕ್ಸರ್ನೊಂದಿಗೆ ಕೋಮ್ ಸಂಬಂಧ ಇಟ್ಟುಕೊಂಡಿದ್ದರು. ನಂತರ ಬೇರೊಬ್ಬನ ಜೊತೆ ಸಂಬಂಧ ಬೆಳೆಸಿದ್ದರು ಎಂದು ಆರೋಪಿಸಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಏನೇ ನಡೆದಿದ್ದರೂ ಅದನ್ನು ಖಾಸಗಿಯಾಗಿಯೇ ನಿರ್ವಹಿಸಬೇಕಿತ್ತು ಎನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.

ಸ್ಟ್ಯಾಂಡ್ಅಪ್ ಕಾಮಿಡಿಯನ್ ಸಮಯ್ ರೈನಾ ಅವರು ತಮ್ಮ ಶೋನಲ್ಲಿ, 'ಬದುಕಿರುವ ಸಾಧಕರ ಬಯೋಪಿಕ್ ಮಾಡಬಾರದು' ಎಂದು ಹೇಳಿದ್ದರು. ಮೇರಿ ಕೋಮ್ ವಿಚಾರದಲ್ಲಿ ಆ ಮಾತು ಹೆಚ್ಚು ಅನ್ವಯಿಸಿದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.