ಭಾನುವಾರ, ಅಕ್ಟೋಬರ್ 20, 2019
28 °C

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಎಲ್ ಭೈರಪ್ಪ ಆಗ್ರಹ

Published:
Updated:
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಎಲ್ ಭೈರಪ್ಪ ಆಗ್ರಹ

ರಾಯಚೂರು: ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳನ್ನು ಪರಿಷ್ಕರಿಸುವುದು ಹಾಗೂ ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಇದೇ 2012-13ನೇ ಸಾಲಿನ ಆಯವ್ಯಯದಲ್ಲಿ ಅನುಷ್ಠಾನಗೊಳಿಸಬೇಕು. ಇಲ್ಲದೇ ಇದ್ದರೆ ದಂಡಂ ದಶಗುಣಂ ರೀತಿ ಹೋರಾಟವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನಡೆಸಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್ ಭೈರಪ್ಪ ಹೇಳಿದರು.ಇಲ್ಲಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗ ಮಟ್ಟದ ಸಮ್ಮೇಳನದಲ್ಲಿ `ವೇತನ ಪರಿಷ್ಕರಣೆ~ ಕುರಿತು ಗೊತ್ತುವಳಿ ಮಂಡನೆ ಸಂದರ್ಭದಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಸಂಘದ ಮನವಿ ಮೇರೆಗೆ ವೇತನ ಸಮಿತಿ ರಚನೆ ಹಾಗೂ ಶೇ 15 ಮಧ್ಯಂತರ ಪರಿಹಾರ ಘೋಷಣೆಯನ್ನು ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸದಾನಂದಗೌಡ ಅವರು ಮಾಡಿದ್ದರು. ಇದಕ್ಕೆ ಸಂಘವು ಅಭಿನಂದಿಸುತ್ತದೆ ಎಂದರು.1-4-2005ರಿಂದಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳಲ್ಲಿ ಅಗಾಧ ವ್ಯತ್ಯಾಸವಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಸಾಕಷ್ಟು ಅನ್ಯಾಯ ಆಗಿದೆ. ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.ಆದಾಗ್ಯೂ ಕೂಡಾ 1-4-2010ರಿಂದ ಅನ್ವಯಿಸುವಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಣೆ ಮಾಡಬೇಕು. ಇನ್ನಿತರ ಸೌಲಭ್ಯಗಳನ್ನು ಕೇಂದ್ರ ಮಾದರಿಯಲ್ಲಿ 2012-13ನೇ ಸಾಲಿನ ಆಯವ್ಯಯದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಗೊತ್ತುವಳಿ ಮಂಡಿಸಿದರು.

 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಲ್ ಭೈರಪ್ಪ, ಸಂಘದ ಗುಲ್ಬರ್ಗ ವಿಭಾಗೀಯ  ಉಪಾಧ್ಯಕ್ಷ ಎ ಬಾಲಸ್ವಾಮಿ ಕೊಡ್ಲಿ, ರಾಜ್ಯ ಉಪಾಧ್ಯಕ್ಷ ಶಂಭುಲಿಂಗನಗೌಡ,  ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಕೋಶಾಧ್ಯಕ್ಷ ಡಾ.ಚೌಡಯ್ಯ, ಗುಲ್ಬರ್ಗ ಜಿಲ್ಲೆ ಅಧ್ಯಕ್ಷ ಬಿ.ಎಸ್ ದೇಸಾಯಿ, ಬೀದರ್ ಜಿಲ್ಲೆ ಅಧ್ಯಕ್ಷ ಬಸವರಾಜ ಭರಶೆಟ್ಟಿ, ಬಾಗಲಕೋಟೆ ಜಿಲ್ಲೆ ಅಧ್ಯಕ್ಷ ಲಿಂಗಣ್ಣನವರ, ಬಳ್ಳಾರಿ ಜಿಲ್ಲೆ ಅಧ್ಯಕ್ಷ  ಚಂದ್ರಶೇಖರ ಹಾಗೂ ಇತರರು ವೇದಿಕೆಯಲ್ಲಿದ್ದರು. ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮೆಹಬೂಬ್ ಪಾಷಾ ಮೂಲಿಮನಿ ಪ್ರಾಸ್ತಾವಿಕ ಮಾತನಾಡಿದರು.

Post Comments (+)