ಅರಣ್ಯೀಕರಣಕ್ಕಾಗಿ 7.30 ಲಕ್ಷ ಸಸಿ ಬೆಳೆಸುವಿಕೆ

ಬುಧವಾರ, ಜೂನ್ 26, 2019
25 °C
ಸಾಮಾಜಿಕ ಅರಣ್ಯ ಇಲಾಖೆಯ ಮೈಸೂರು ವಿಭಾಗದ 11 ನರ್ಸರಿಗಳಲ್ಲಿ ಹಸಿರಿನಿಂದ ಕಂಗೊಳಿಸುತ್ತಿವೆ ಸಸಿಗಳು

ಅರಣ್ಯೀಕರಣಕ್ಕಾಗಿ 7.30 ಲಕ್ಷ ಸಸಿ ಬೆಳೆಸುವಿಕೆ

Published:
Updated:
Prajavani

ಮೈಸೂರು: ಜಿಲ್ಲೆಯಲ್ಲಿ ಅರಣ್ಯೀಕರಣದ ಬೆಳವಣಿಗೆಗಾಗಿ ಸಾಮಾಜಿಕ ಅರಣ್ಯ ಇಲಾಖೆ 2019–20ನೇ ಸಾಲಿನಲ್ಲಿ ತನ್ನ 11 ನರ್ಸರಿಗಳಲ್ಲಿ ಒಟ್ಟು 7.30 ಲಕ್ಷ ಸಸಿಗಳನ್ನು ಬೆಳೆಸಿದೆ.

ಜೂನ್ ಆರಂಭಗೊಂಡ ಬೆನ್ನಿಗೆ ಜಿಲ್ಲೆಯಾದ್ಯಂಥಹ ವರ್ಷಧಾರೆಯೂ ಸುರಿಯುತ್ತಿದ್ದು; ಸಸಿ ನೆಡಲು ಸಕಾಲ. ಆಗಸ್ಟ್‌ ಅಂತ್ಯದವರೆಗೂ ರೈತರಿಗೆ, ಸಾರ್ವಜನಿಕರಿಗೆ, ಸಂಘ–ಸಂಸ್ಥೆಗಳ ಪದಾಧಿಕಾರಿಗಳಿಗೆ, ಸರ್ಕಾರಿ ಕಚೇರಿಗಳಿಗೆ, ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿತರಿಸಲಿಕ್ಕಾಗಿಯೇ 6 ಲಕ್ಷ ಸಸಿಗಳನ್ನು ಬೆಳೆಸಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಶೇ 18ರಿಂದ 19ರಷ್ಟು ಅರಣ್ಯವಿದೆ. ನಿಸರ್ಗದ ಸಮತೋಲನಕ್ಕಾಗಿ ಶೇ 33 ಅರಣ್ಯವಿರುವುದು ಕಡ್ಡಾಯ. ಜಿಲ್ಲೆಯ ವ್ಯಾಪ್ತಿಯಲ್ಲಿ ಶೇ 33ರ ಪ್ರಮಾಣದಲ್ಲಿ ಅರಣ್ಯ ಬೆಳೆಸಲಿಕ್ಕಾಗಿ ಇಲಾಖೆಯ ಮಾರ್ಗಸೂಚಿಯಂತೆ 1.30 ಲಕ್ಷ ಸಸಿಗಳನ್ನು ಬೆಳೆಸಿದ್ದು, ರಸ್ತೆ ಬದಿ, ಗುಂಡು ತೋಪು, ಗೋಮಾಳ, ಸರ್ಕಾರಿ ಭೂಮಿಯಲ್ಲಿ ಈ ಸಸಿಗಳನ್ನು ನೆಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ’ಪ್ರಜಾವಾಣಿ‘ಗೆ ತಿಳಿಸಿದರು.

ಸಸಿ ಬೆಳೆಸಲು ಪ್ರೋತ್ಸಾಹ ಧನ: ’ರೈತರಿಗೆ ತಮ್ಮ ಜಮೀನುಗಳಲ್ಲಿ ಸಸಿ ನೆಟ್ಟು ಬೆಳೆಸಲು, ರಿಯಾಯಿತಿ ದರದಲ್ಲಿ ಇಲಾಖೆಯ ನರ್ಸರಿಗಳಲ್ಲೇ ನೇರವಾಗಿ ಸಸಿ ಮಾರಾಟವನ್ನು ಆರಂಭಿಸಲಾಗಿದೆ. ಇದು ಆಯಾ ಭಾಗದ ರೈತರಿಗೆ ತುಂಬಾ ಅನುಕೂಲಕಾರಿಯಾಗಿದೆ‘ ಎಂದು ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪಿ.ಮಹದೇವ್ ಮಾಹಿತಿ ನೀಡಿದರು.

’ಒಂಬತ್ತು ಇಂಚು ಉದ್ದ, ಆರು ಇಂಚು ಅಗಲದ ಚೀಲಗಳಲ್ಲಿ ಬೆಳೆಸಿದ ಸಸಿಗೆ ಒಂದಕ್ಕೆ ₹ 1 ರಂತೆ, 12 ಇಂಚು ಉದ್ದ 8 ಇಂಚು ಅಗಲದ ಚೀಲಗಳಲ್ಲಿ ಬೆಳೆಸಿದ ಸಸಿಗೆ ಒಂದಕ್ಕೆ ₹ 3 ರಂತೆ ವಿತರಿಸಲಾಗುವುದು. ಪ್ರತಿ ರೈತರಿಗೆ 400 ಸಸಿ ವಿತರಿಸುತ್ತೇವೆ.‘

’ಏಳು ತಾಲ್ಲೂಕುಗಳಲ್ಲೂ ಸಸಿ ವಿತರಣೆ ನಡೆಯಲಿದ್ದು, ಈಗಾಗಲೇ ಪ್ರತಿ ತಾಲ್ಲೂಕಿನಲ್ಲೂ ಸಸಿಗೆ ಬೇಡಿಕೆ ಸಲ್ಲಿಸಿ ತಲಾ 500ರಿಂದ 700 ರೈತರು ಆಯಾ ವ್ಯಾಪ್ತಿಯ ನರ್ಸರಿಗಳಲ್ಲೇ, ಇಲಾಖೆಯ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ‘ ಎಂದು ಅವರು ತಿಳಿಸಿದರು.

’ನೋಂದಣಿ ಶುಲ್ಕ ₹ 10 ಇದೆ. ನೋಂದಣಿ ಸಮಯದಲ್ಲೇ ತಮ್ಮ ಆಧಾರ್‌ ಕಾರ್ಡ್‌, ಪಹಣಿ ಪತ್ರ (ಆರ್‌ಟಿಸಿ), ಬ್ಯಾಂಕ್‌ ಪಾಸ್‌ಬುಕ್‌, ಭಾವಚಿತ್ರ ಜತೆಗೆ ಮೊಬೈಲ್ ನಂಬರ್ ನೀಡಬೇಕು. ಕರಾರುವಕ್ಕಾಗಿ ನೋಂದಣಿ ಮಾಡಿಸಿದ ರೈತರಿಗೆ ಮೊದಲ ವರ್ಷ ಒಂದು ಸಸಿ ಬೆಳೆಸಲು ₹ 30, ಎರಡನೇ ವರ್ಷವೂ ₹ 30 ಪ್ರೋತ್ಸಾಹ ಧನ ನೀಡಿದರೆ; ಮೂರನೇ ವರ್ಷ ₹ 40 ನೀಡುತ್ತೇವೆ.

ಮೂರು ವರ್ಷದ ಅವಧಿ ಒಂದು ಸಸಿ ನೆಟ್ಟು ಬೆಳೆಸಲು ಮೂರು ಹಂತಗಳಲ್ಲಿ ₹ 100 ಪ್ರೋತ್ಸಾಹ ಧನ ನೀಡಲಿದ್ದು, ನೇರವಾಗಿ ರೈತನ ಖಾತೆಗೆ, ಆಯಾ ವಲಯದ ವಲಯ ಅರಣ್ಯ ಅಧಿಕಾರಿ ನೀಡುವ ಗಿಡದ ಸ್ಥಿತಿಗತಿಯ ವರದಿ ಆಧರಿಸಿ ಜಮೆ ಮಾಡಲಾಗುವುದು‘ ಎಂದು ಮಹದೇವ್‌ ’ಕರ್ನಾಟಕ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ‘ ಬಗ್ಗೆ ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !