ಶುಕ್ರವಾರ, ಜೂನ್ 18, 2021
28 °C

ಧರೆಗುರುಳಿದ ದ್ರಾಕ್ಷಿ : ರೂ. 25 ಲಕ್ಷ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಣ್ಣಿನ ಭಾರ ತಾಳದೆ ದ್ರಾಕ್ಷಿ ಗಿಡಗಳು ಧರೆಗುರುಳಿರುವ ಪರಿಣಾಮ ಸುಮಾರು ರೂ. 25 ಲಕ್ಷ ಮೊತ್ತದ ಬೆಳೆ ಹಾನಿಯಾಗಿರುವ ಘಟನೆ ತಾಲ್ಲೂಕಿನ ಮುತ್ಯಾನ ಬಬಲಾದ ಗ್ರಾಮದಲ್ಲಿ ಈಚೆಗೆ ಸಂಭವಿಸಿದೆ.ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ  ಶ್ರೀ ಗುರು ಚನ್ನಬಸವೇಶ್ವರ ಮಠದ ಪೀಠಾಧಿಪತಿ ಗುರುಪಾದಲಿಂಗ ಸ್ವಾಮೀಜಿಗೆ ಸೇರಿದ ಜಮೀನಿನಲ್ಲಿ ಬೆಳೆದ (8 ಎಕರೆ) ದ್ರಾಕ್ಷಿ ಬೆಳೆ ಹಾನಿಯಾಗಿದೆ. ದ್ರಾಕ್ಷಿ ಹಾಕಿದ ಹಂದರದ ವೈರ್ ಕಡಿದು ಹೋಗಿರುವುದರಿಂದ ಗಿಡಗಳೆಲ್ಲ ಧರೆಗುರುಳಿವೆ. ಆಸರೆಯಾಗಿ ನಿಂತಿದ್ದ ಕಬ್ಬಿಣದ ಪಟ್ಟಿಗಳು ಮಣಿದು ನೆಲಕ್ಕೊರಗಿವೆ.ಇನ್ನೇನು ಇಳುವರಿ ಪಡೆದುಕೊಂಡು ಕೈತುಂಬಾ ಹಣ ಸಂಪಾದನೆ ಮಾಡಬಹುದು ಎಂಬ ಕನಸು ಕಮರಿ ಹೋಗಿದೆ. ಹೀಗಾಗಿ `ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ~ ಎನ್ನುವಂತಾಗಿದೆ. ನೆಲ್ಲಕ್ಕುರುಳಿದ ಹಣ್ಣುಗಳನ್ನು  `ಮನೂಕಾ~ ಮಾಡುವ ಪ್ರಕ್ರಿಯೆ ತರಾತುರಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದರೂ ಹಾನಿ ಪ್ರಮಾಣ ತಗ್ಗಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.ಸುದ್ದಿ ತಿಳಿಯುತ್ತಿದ್ದಂತಯೇ ಸುತ್ತಲಿನ ಗ್ರಾಮದ ಭಕ್ತಾದಿಗಳು ಬಂದು ಹಣ್ಣುಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡು ಬಂದಿತು. ಸರ್ಕಾರ ತಕ್ಷಣವೇ ನೆರವಿಗೆ ಬರಬೇಕು ಎಂದು ಭಕ್ತಾದಿಗಳು ಆಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.