ನವಿ ಮುಂಬೈ: ಹರ್ಲೀನ್ ಡಿಯೋಲ್ (ಔಟಾಗದೇ 64;39ಎ, 4x12) ಅವರ ಅರ್ಧಶತಕದ ಬಲದಿಂದ ಯು.ಪಿ ವಾರಿಯರ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ನ ಹಾಲಿ ಆವೃತ್ತಿಯಲ್ಲಿ ಮೊದಲ ಗೆಲುವು ದಾಖಲಿಸಿತು.

ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡವು ಏಳು ವಿಕೆಟ್ಗಳಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು. ಸತತ ಮೂರು ಪಂದ್ಯಗಳನ್ನು ಸೋತಿದ್ದ ಮೆಗ್ ಲ್ಯಾನಿಂಗ್ ಪಡೆ ಕೊನೆಗೂ ಗೆಲುವಿನ ಹಳಿಗೆ ಮರಳಿತು.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮುಂಬೈ ತಂಡವು ಅನುಭವಿ ಬ್ಯಾಟರ್ ನ್ಯಾಟ್ ಶಿವರ್ ಬ್ರಂಟ್ (65, 43 ಎಸೆತ) ಅವರ ಬಿರುಸಿನ ಅರ್ಧಶತಕದ ನೆರವಿನಿಂದ 5 ವಿಕೆಟ್ಗೆ 161 ರನ್ಗಳ ಸವಾಲಿನ ಮೊತ್ತ ಗಳಿಸಿತ್ತು. ಗುರಿಯನ್ನು ಬೆನ್ನಟ್ಟಿದ ವಾರಿಯರ್ಸ್ 11 ಎಸೆತಗಳು ಬಾಕಿ ಇರುವಂತೆ 3 ವಿಕೆಟ್ಗೆ 162 ರನ್ ಗಳಿಸಿ ಸಂಭ್ರಮಿಸಿತು. ಲ್ಯಾನಿಂಗ್ (25;26ಎ) ಮತ್ತು ಕಿರಣ್ ನವಗಿರೆ (10) ಮೊದಲ ವಿಕೆಟ್ಗೆ 42 ರನ್ ಸೇರಿಸಿದರು. ನಂತರದ ಮೂರು ರನ್ಗಳ ಅಂತರದಲ್ಲಿ ಅವರಿಬ್ಬರ ವಿಕೆಟ್ಗಳು ಶಿವರ್ ಬ್ರಂಟ್ ಪಾಲಾದವು.

ಫೋಬಿ ಲಿಚ್ಫೀಲ್ಡ್ (25;22ಎ) ಮತ್ತು ಹರ್ಲೀನ್ ಅವರು ಮೂರನೇ ವಿಕೆಟ್ಗೆ 73 (49ಎ) ರನ್ ಸೇರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಲಿಚ್ಫೀಲ್ಡ್ ನಿರ್ಗಮನದ ಬಳಿಕ ಹರ್ಲೀನ್ ಅವರನ್ನು ಸೇರಿಕೊಂಡ ಕ್ಲೊಯೆ ಟ್ರಯಾನ್ (ಔಟಾಗದೇ 27;11ಎ) ಅವರು ಗೆಲುವಿನ ಔಪಚಾರ ಪೂರೈಸಿದರು.

ಇದಕ್ಕೂ ಮುನ್ನ ಮುಂಬೈ ತಂಡದ ಆರಂಭ ಆಟಗಾರ್ತಿಯರಾದ ಅಮನ್ಜೋತ್ ಕೌರ್ (36, 33 ಎಸೆತ) ಮತ್ತು ಜಿ. ಕಮಲಿನಿ (5, 12ಎ) ಅವರು ಉತ್ತಮ ಆರಂಭ ನೀಡಲು ವಿಫಲರಾದರು. ತಂಡ 10 ಓವರುಗಳಲ್ಲಿ 2 ವಿಕೆಟ್ಗೆ 54 ರನ್ ಗಳಿಸಿ ಪರದಾಡುತ್ತಿದ್ದ ಹಂತದಲ್ಲಿ ಶಿವರ್ ಬ್ರಂಟ್ ನೆರವಿಗೆ ಬಂದರು. ಕೊನೆಯ 10 ಓವರುಗಳಲ್ಲಿ ತಂಡ 107 ರನ್ ಬಾಚಿಕೊಂಡಿತು.

ಶಿವರ್ ಬ್ರಂಟ್ ಅವರಿಗೆ ನಿಕೋಲಾ ಕ್ಯಾರಿ (ಔಟಾಗದೇ 32, 20ಎ, 4x5) ಉತ್ತಮ ಬೆಂಬಲ ನೀಡಿದರು. ನಾಲ್ಕನೇ ವಿಕೆಟ್ಗೆ ಅಮೂಲ್ಯ 85 ರನ್ (45 ಎಸೆತ) ಸೇರಿಸಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಸಂಕ್ಷಿಪ್ತ ಸ್ಕೋರು:

ಮುಂಬೈ ಇಂಡಿಯನ್ಸ್: 20 ಓವರುಗಳಲ್ಲಿ 5ಕ್ಕೆ 161 (ಅಮನ್ಜೋತ್ ಕೌರ್ 38, ನ್ಯಾಟ್ ಶಿವರ್–ಬ್ರಂಟ್ 65, ನಿಕೋಲಾ ಕ್ಯಾರಿ ಔಟಾಗದೇ 32; ಶಿಖಾ ಪಾಂಡೆ 25ಕ್ಕೆ1, ಸೋಫಿ ಎಕ್ಲೆಸ್ಟೋನ್ 26ಕ್ಕೆ1).

ಯುಪಿ ವಾರಿಯರ್ಸ್: 18.1 ಓವರ್ಗಳಲ್ಲಿ 3 ವಿಕೆಟ್ಗೆ 162 (ಮೆಗ್ ಲ್ಯಾನಿಂಗ್ 25, ಫೋಬಿ ಲಿಚ್ಫೀಲ್ಡ್ 25, ಹರ್ಲೀನ್ ಡಿಯೋಲ್ ಔಟಾಗದೇ 64, ಕ್ರೊಯೆ ಟ್ರಯಾನ್ ಔಟಾಗದೇ 27; ನ್ಯಾಟ್ ಶಿವರ್ ಬ್ರಂಟ್ 28ಕ್ಕೆ 2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.