ಭಾನುವಾರ, ಜೂನ್ 20, 2021
23 °C

ದ್ವಿತೀಯ ಗಾಳಿಪಟ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಮಹಾ ಮಹಿಮಾ ಪುರುಷ ಹಾರಕೂಡ ಚನ್ನಬಸವ ಶಿವಯೋಗಿಗಳ 61ನೇ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಗಾಳಿಪಟ ಉತ್ಸವವನ್ನು ಸಂಸ್ಥಾನ ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.ಇಲ್ಲಿನ ಪಂಚಲಿಂಗೇಶ್ವರ ಬುಗ್ಗಿ ಬಳಿಯ ತೇರ್ ಮೈದಾನದಲ್ಲಿ ನಡೆದ ಉತ್ಸದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯ ಮಾತೃ ಮಂದಿರ ಪ್ರೌಢ ಶಾಲೆ ಮತ್ತು ಶರಣಬಸವೇಶ್ವರ ವಿದ್ಯಾ ಮಂದಿರ, ಹಾರಕೂಡ ವನ್ನಬಸವೇಶ್ವರ ಶಾಲೆಯ ನೂರಾರು ಮಕ್ಕಳು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಜೀತ ಬಾಬುರಾವ್ ಪಾಟೀಲ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇವಣಸಿದ್ದಪ್ಪ ಮಜ್ಜಗಿ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಷ್ ಸೀಳಿನ್, ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರು, ಬಸವರಾಜ ಸುಂಕದ್, ಚನ್ನಬಸಪ್ಪ ನಾವದಗಿ, ಜೈ ಕರವೇ ಅಧ್ಯಕ್ಷ ಸಂತೋಷ ಗಡಂತಿ, ಸಂತೋಷ ಕಡಗದ್, ಸಂತೋಷ ಸೀಳಿನ್, ಮೌಲಾನಾ ಪಟೇಲ್, ಶರಣಬಸಪ್ಪ, ಬಸವರಾಜ ದೇಗಲಮಡಿ, ಶಂಕರಗೌಡ ಅಲ್ಲಾಪುರ, ಮಹಾಂತಯ್ಯ ಸ್ವಾಮಿ, ಮಹಾಂತೇಶ ಬೀರನಹಳ್ಳಿ ಮುಂತಾದವರು ಇದ್ದರು. 60ನೇ ಜಾತ್ರಾ ಮಹೋತ್ಸವದಿಂದ ಗಾಳಿಪಟ ಉತ್ಸವ ಆರಂಭವಾಗಿದ್ದು, ಈ ಉತ್ಸವ ಎರಡನೇಯದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.