ಭಾನುವಾರ, ಮೇ 16, 2021
26 °C

ಮೇವು ಮಾರಾಟಕ್ಕಿಗ ಬಲು ಬೇಡಿಕೆ

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಬರಗಾಲದಿಂದ ತತ್ತರಿಸಿರುವ ರೈತರಿಗೆ ಈಗ ಬೇಸಿಗೆ ಬಿಸಿಲು ಹೆಚ್ಚಾದಂತೆ ಜಾನುವಾರುಗಳ ಸಂರಕ್ಷಣೆ ಕಷ್ಟದಾಯಕವಾಗುತ್ತಿದೆ. ವರ್ಷವಿಡಿ ಸಾಕಿ ಸಲುಹಿದ ದನಕರುಗಳಿಗೆ ಹೊಟ್ಟೆ ತುಂಬಾ ಮೇವು ಒದುಗಿಸಲು ಮಾಲಿಕರು ಮಾರುಕಟ್ಟೆಯಲ್ಲಿ ದೊರೆಯುವ ಮೇವಿಗೆ ಬೆಳ್ಳಂಬೆಳಿಗ್ಗೆಯಿಂದ ಕಾಯುವ ಸ್ಥಿತಿ ಕಂಡುಬರುತ್ತಿದೆ.ಈಗ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ತಾಲ್ಲೂಕಿನ ಹಳ್ಳಿಸಲಗರ, ತಲಾಕುಣಿ, ಸಂಗೋಳಗಿ, ಜಿಡಗಾ, ಹೊಸಳ್ಳಿ ರೈತರು ತಾವು ಬೆಳೆದ ಮೆಕ್ಕೆಜೋಳದ ಮೇವು ಮತ್ತು ಹಸಿ ಮೇವುವನ್ನು ಜೀಪ್ ಮತ್ತು ಎತ್ತಿನ ಬಂಡೆಗಳಲ್ಲಿ ಹೊತ್ತು ತಂದು ಮಾರಾಟ ಮಾಡುತ್ತಿರುವುದು ಹೆಚ್ಚಾಗುತ್ತಿದೆ.ಒಂದು ಕಟ್ಟಿಗೆ 15ರಿಂದ 20 ರೂ.ಗಳ ಬೆಲೆ ನೀಡಿ ಖರೀದಿ ಮಾಡುತ್ತಿದ್ದಾರೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ತೊಗರೆ, ಸಜ್ಜೆ ಮತ್ತಿತರ ಬೆಳೆಗಳ ಹೊಟ್ಟು, ಕಳಕಿ ಕೂಡಿಹಾಕುವಲ್ಲಿ ಈ ಬಾರಿ ರೈತರಿಗೆ ಸಾಧ್ಯವಾಗಲಿಲ್ಲ. ಇನ್ನು ಜೋಳದ ಬೆಳೆಯ ಪ್ರಮಾಣವು ಅಷ್ಟಕಷ್ಟೆಯಾಗಿದ್ದರಿಂದ ಅನೇಕ ರೈತರು ಜೋಳದ ಕಳಕಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಪಟ್ಟಣದ ವ್ಯಾಪಾರಿಗಳು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಹಾಗೂ ದನ, ಎಮ್ಮೆ ಸಾಕಿದ ಗೌಳಿಗರು ಹಸಿ ಮೇವು ಖರೀದಿಸುತ್ತಿರುವುದರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ  ಹಾಲು ಕರೆಯುವ ಜಾನುವಾರುಗಳಿಗೆ ಒಂದಿಷ್ಟಾದರೂ ಹಸಿ ಮೇವು ನೀಡಿದರೆ ಮಾತ್ರ ಹೆಚ್ಚಿನ ಹಾಲು ಕೊಡುತ್ತವೆ ಎಂದು ಮಹಾವೀರ ವರ್ಧಮಾನೆ ಪತ್ರಿಕೆ ಮುಂದೆ ತಿಳಿಸಿದರು.ಅಂತರ್ಜಲದ ಪ್ರಮಾಣ ಕಡಿಮೆಯಾಗಿದ್ದರಿಂದ ಅನೇಕರ ಹೊಲ ಗದ್ದೆಗಳಲ್ಲಿ ಜಾನುವಾರುಗಳಿಗೆ ಮೇವು ಬೆಳೆಯಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರು ಸಹ ದೊರೆಯದ ಬೇಸಿಗೆಯಲ್ಲಿ ಮೇವಿನ ಬೆಲೆಗಿಂತ ದನಕರುಗಳು ಸಾಕಿದ್ದಕ್ಕೆ ಏನಾದರೂ ಮಾಡಿ ಅವುಗಳನ್ನು ಸಂರಕ್ಷಿಸಲು ಮೂಕ ಜೀವಿಗಳಿಗೆ ಒಂದಿಷ್ಟಾದರೂ ಮೇವು ಒದುಗಿಸುವುದು ಅವಶ್ಯಕವಾಗಿದೆ ಎಂದು ಸುಧೀರ ಹಿಪ್ಪರ್ಗಿ ಹೇಳಿದರು.ಬಿಸಿಲಿನ ಧಗೆ ತಾಳಲಾರದೆ ಅನೇಕ ಗ್ರಾಮಗಳಲ್ಲಿ ಜಾನುವಾರುಗಳಿಗೆ ರೋಗ ಹರಡಿರುವುದು  ಹೆಚ್ಚಾಗಿ ಕಂಡುಬರುತ್ತಿದೆ. ಅನೇಕ ಕಡೆ ಬೆಟ್ಟ-ಗುಡ್ಡ ಮತ್ತು ಹೊಲದ ಬದುವಿನಲ್ಲಿರುವ ಒಣಗಿದ ಹುಲ್ಲು ಮತ್ತು ಕಸ ಕಡ್ಡಿಗೆ ಬೆಂಕಿ ಇಡುತ್ತಿರುವುದರಿಂದ ಪ್ರಾಣಿಗಳಿಗೆ ಮೇಯಲು ಏನು ದೊರೆಯದ ಸ್ಥಿತಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಸರ್ಕಾರವು ಬರ ಘೋಷಿಸಿದರು. ಇನ್ನು ಸರ್ಕಾರದಿಂದ ಯಾವುದೆ ರೀತಿಯ ಬರ  ಕಾಮಗಾರಿ ನೆರವಿನಲ್ಲಿ ಜಾನುವಾರುಗಳಿಗೆ ಮೇವು ಸಂಗ್ರಹಣೆ ಮತ್ತು ವಿತರಣೆ ನಡೆಯದಿರುವುದು ಅನೇಕ ರೈತರಲ್ಲಿ ಆತಂಕ ಸೃಷ್ಟಿಸುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.