ಮಂಗಳವಾರ, ಮೇ 17, 2022
27 °C

ನೀರಿನ ಹಕ್ಕು ಸಾರ್ವತ್ರಿಕ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕುಡಿಯುವ ನೀರನ್ನು ಪಡೆಯುವ ಹಕ್ಕನ್ನು ಸಾರ್ವತ್ರಿಕರಣಗೊಳಿಸಬೇಕು  ಎಂದು ಆಗ್ರಹಿಸಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಶುಕ್ರವಾರ  ನಗರದಲ್ಲಿ ಪ್ರತಿಭಟನೆ ನಡೆಸಿತು. ಆಸ್ತಿತ್ವದಲ್ಲಿರುವ ನಗರ ಕುಡಿಯುವ ನೀರು ಮತ್ತು ಒಳಚರಂಡಿ ನೀತಿಯನ್ನುಕೂಡಲೇ ರದ್ದುಗೊಳಿಸಬೇಕು. ಸಮಸ್ತ ನಾಗರಿಕರ ಸಮಾಲೋಚನೆ-ಭಾಗವಹಿಸುವಿಕೆಯ ಮೂಲಕ ಸೂಕ್ತ ಹೊಸ ಕುಡಿಯುವ ನೀರಿನ ಸಮಗ್ರ ನೀತಿಯನ್ನು ರೂಪಿಸಬೇಕು.

 

ಖಾಸಗಿಕರಣದ ಎಲ್ಲ ಪ್ರಯತ್ನಗಳನ್ನು ಹಾಗೂ ತಂತ್ರಗಳನ್ನು ಕೈಬಿಟ್ಟು ನೀರು ಸರಬರಾಜು ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ನಿಭಾಯಿಸಬೇಕು. ಹಣ ಕೊಡುವವರಿಗೆ ಮಾತ್ರ ಕುಡಿಯುವ ನೀರು ಎಂಬ ನೀತಿಯನ್ನು ಕೈಬಿಡಬೇಕು ಹಾಗೂ ಫೆ.28ರಂದು ರಾಜ್ಯಕ್ಕೆ ಬರುತ್ತಿರುವ ಅಮೇರಿಕಾ ಕಂಪೆನಿಯೊಂದಿಗೆ ಯಾವುದೇ ಮಾತುಕತೆಗೆ ಮುಂದಾಗದೇ ಅವರ ಭೇಟಿಯನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಈಗಾಗಲೇ ಬಹುರಾಷ್ಟ್ರೀಯ ಕಂಪೆನಿಗಳಿಗೆ  ವಹಿಸಿರುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಗುಲ್ಬರ್ಗ ಮತ್ತು ಮೈಸೂರು ನಗರಗಳ ನೀರಿನ ಸರಬರಾಜು ಗುತ್ತಿಗೆಯನ್ನು ರದ್ದುಗೊಳಿಸಿ ಸರ್ಕಾರವೇ ವಹಿಸಿಕೊಳ್ಳಬೇಕುಎಂದು ಆಗ್ರಹಿಸಿದರು. ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಅಲ್ಲಮಪ್ರಭು ನಿಂಬರ್ಗಾ, ಬಾಬುರಾವ ದಂಡಿನಕರ, ಸಂತೋಷ ಮೇಲ್ಮನಿ, ಶಿವಕುಮಾರ ದೊಡ್ಡಮನಿ, ಹಣಮಂತ ಇಟಗಿ, ಸಿದ್ಧೋದನ ಪಟ್ಟೇದಾರ, ಭಾರತಿ ಬಾಯಿ ಕಾಂಬಳೆ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.