ಏ.15ರಂದು ಜಂತರ್ ಮಂತರ್ ಬಳಿ ಧರಣಿ

7

ಏ.15ರಂದು ಜಂತರ್ ಮಂತರ್ ಬಳಿ ಧರಣಿ

Published:
Updated:

ಗುಲ್ಬರ್ಗ: ದೆಹಲಿ ನಾಯಕರಿಗೆ 371ನೇ ಕಲಂ ತಿದ್ದುಪಡಿ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಏ.15ರಂದು ಕನ್ನಡ ಸೇನೆ ಕರ್ನಾಟಕ ಸಂಘಟನೆಯ  500 ಕಾರ್ಯಕರ್ತರು ಜಂತರ್ ಮಂತರ್ ಬಳಿ ಧರಣಿ ಮಾಡುವುದಾಗಿ ಈಶಾನ್ಯ ಕರ್ನಾಟಕ ಘಟಕದ ಅಧ್ಯಕ್ಷ ಶಿವಶರಣಪ್ಪ ಖಣದಾಳ ತಿಳಿಸಿದರು.ಕಳೆದ ನಾಲ್ಕು ವರ್ಷಗಳಿಂದ ವಿವಿಧ ರೀತಿಯಲ್ಲಿ ಮನವಿ ಮಾಡಲಾಗಿದೆ. ವಿವಿಧ ಬಗೆಯಲ್ಲಿ ಹೋರಾಟ, ಪ್ರತಿಭಟನೆಗಳನ್ನೂ ಹಮ್ಮಿಕೊಳ್ಳಲಾಗಿದೆ. ಆದರೆ ಈವರೆಗೂ ಯಾವುದಕ್ಕೂ ಸ್ಪಂದಿಸಿಲ್ಲ. ಈ ವರ್ಷ ಲೋಕಸಭೆ ಚುನಾಣೆಯ ಸಂದರ್ಭದಲ್ಲಿ ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ ಈ ಬಗ್ಗೆ ಸಕಾರಾತ್ಮಕ ಮಾತುಗಳನ್ನಾಡಿದ್ದರು. ಅವೆಲ್ಲ ಈಗ ಸುಳ್ಳು ಅಶ್ವಾಸನೆ ಅಥವಾ ಮತಬ್ಯಾಂಕ್ ಆಗಿ ಪರಿವರ್ತಿಸಿಕೊಂಡ ಬಣ್ಣದ ಮಾತುಗಳಾಗಿದ್ದವೇ? ಎಂದು ಟೀಕಿಸಿದರು.ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳೆದ ವರ್ಷವೇ ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಈ ಭಾಗದ ಜನರ ಹೋರಾಟ ಹಾಗೂ ಚಳವಳಿಗಳನ್ನು ಬೇಕೆಂದೇ ಕಡೆಗಣಿಸುತ್ತಿದ್ದಾರೆ. ದಮನ ಮಾಡುವ ಯತ್ನದಲ್ಲಿದ್ದಾರೆ. ಜನಪರ ಹೋರಾಟಗಳು ಚಳವಳಿಯ ರೂಪ ಪಡೆಯದಂತೆ ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.ಸಂಘಟನೆಯು ಹಳ್ಳಿಯಿಂದ ರಾಜಧಾನಿಯವರೆಗೆ ಜಾಗೃತಿ ಸಂಕಲ್ಪ ಜಾಥಾವನ್ನು ಸಂಘಟಿಸಲಾಗಿತ್ತು. ಈಗ ದೆಹಲಿಯಲ್ಲಿಯೇ ಪ್ರತಿಭಟನೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ದೆಹಲಿ ಪೊಲೀಸರ ಅನುಮತಿಯನ್ನೂ ಪಡೆಯಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಂ.ಡಿ.ಪಾಟೀಲ, ಶಿವಲಿಂಗಪ್ಪ ಬಂಡಕ, ಸಂಗಮನಾಥ ಹಿರೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry