ಶುಕ್ರವಾರ, ಮೇ 14, 2021
25 °C

ಸಾಮಾಜಿಕ ಸಾಮರಸ್ಯ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: `ಸಂತರ, ಶರಣರ ಸಂದೇಶಗಳು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಅವರ ಬದುಕು ಸಾಮಾಜಿಕ ಸಾಮರಸ್ಯಕ್ಕೆ ಕಾಣಿಕೆ ನೀಡಿವೆ~ ಎಂದು ಮುಗಳನಾಗಾವಿ ಅಭಿನವ ಶ್ರೀಸಿದ್ಧಲಿಂಗ ಶಿವಾಚಾರ್ಯರು ಪ್ರತಿಪಾದಿಸಿದ್ದಾರೆ. ಇಲ್ಲಿಗೆ ಸಮೀಪದ ಶಂಕರವಾಡಿ ಗ್ರಾಮದ ಶ್ರೀಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಹತ್ತು ದಿನಗಳ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.`ಮಾನವಜನ್ಮ ಉದಾತ್ತವಾದದ್ದು. ಅದನ್ನು ಸಮಪರ್ಕಕವಾಗಿ, ಬಳಸಿಕೊಳ್ಳಿ. ವಿಶೇಷವಾಗಿ ಯುವಜನಾಂಗ ಉತ್ತಮ ಬದುಕು ಸಾಗಿಸುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ~ ಎಂದರು.ಗದುಗಿನ ಪಂ.ಸಿದ್ದೇಶ್ವರ ಶಾಸ್ತ್ರಿ ಬಳೂಟಗಿ, ಹಾರಕೂಡ ಶ್ರೀಚೆನ್ನಬಸವ ಶಿವಯೋಗಿಗಳ ಪುರಾಣ ಹೇಳಿದರು.

ಗುರುಶಾಂತಯ್ಯ ಗವಾಯಿ ವಚನ ಸಂಗೀತ ನಡೆಸಿಕೊಟ್ಟರು. ಮೌನೇಶ ಬಡಿಗೇರ ತಬಲಾ ಸಾಥ್ ನೀಡಿದರು.ಹಿರಿಯರಾದ ಸೋಮೇಶ್ವರ ಸ್ವಾಮಿ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರ ಪಾಟೀಲ, ಕಾರ್ಯದರ್ಶಿ ವೀರಭದ್ರಪ್ಪ ಯಳಮಾಲ, ಬಸವರಾಜ ಬಿರಾದಾರ, ಶಾಂತಪ್ಪ ಮಾಲಿ ಪಾಟೀಲ, ಗೋವಿಂದಪ್ಪ ದುಗುಂಡ, ಶಂಕರ ಬಿರಾದಾರ, ಸುಭಾಷ ಪಾಟೀಲ, ಶಂಕರಗೌಡ ಮಾಲಿ ಪಾಟೀಲ, ನಿಂಗಣಗೌಡ ಪಾಟೀಲ ಮತ್ತಿತರರು ಕಾರ‌್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.