ಬುಧವಾರ, ಮೇ 25, 2022
28 °C

ವಾಲ್ಮೀಕಿ ಸಮುದಾಯ ಸಂಘಟಿರಾಗಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಮಾನವ ಬದುಕಿಗೆ ಅವ ಶ್ಯಕವಾಗಿದ್ದು ಅಕ್ಷರದ ಬೆಳಕು. ತೀರಾ ಹಿಂದುಳಿದ ವಾಲ್ಮೀಕಿ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟಿತ ಹೋರಾಟದ ಬದುಕು ನಮ್ಮದಾಗಬೇಕು. ಮಹರ್ಷಿ ವಾಲ್ಮೀಕಿ ಯವರ ಆದರ್ಶತನದ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳ ಬೇಕು ಎಂದು ದಾವಣಗೆರೆ ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಂದಪುರಿ ಮಹಾಸ್ವಾಮೀಜಿ ಹೇಳಿದರು.ಶಹಾಪುರ ತಾಲ್ಲೂಕಿನ ಸಿರವಾಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಳ್ಳ ಲಾಗಿದ್ದ ವಾಲ್ಮೀಕಿ ಸಮುದಾಯದ ಸಮಾವೇಶವನ್ನು ಉದ್ಘಾಟಿಸಿ ಮಾತ ನಾಡುತ್ತಾ, ವಾಲ್ಮೀಕಿ ಜನಾಂಗದ ಪ್ರತಿಯೊಬ್ಬ ಮಗು ಶಿಕ್ಷಣದಿಂದ ವಂಚಿತಗೊಳ್ಳದೆ ನೋಡಿಕೊಳ್ಳ ಬೇಕಾದುದ್ದು ನಮ್ಮೆಲ್ಲರ ಹೊಣೆ ಗಾರಿಕೆಯ ಜೊತೆಗೆ ಕರ್ತವ್ಯವಾಗಿದೆ. ಯಾವ ಸಮಾಜ ಶಿಕ್ಷಣದಲ್ಲಿ ಪ್ರಗತಿ ಸಾಧಿಸುವುದು ಅಲ್ಲಿ ಸಮುದಾಯದ ಏಳ್ಗೆ ಸಾಧ್ಯವೆಂದು ಅವರು ಪ್ರತಿಪಾದಿ ಸಿದರು.ನಮ್ಮಲ್ಲಿನ ಕೀಳಿರಿಮೆ ಹಾಗೂ ಅಸೂಯೆ ಎಲ್ಲಿಯವರೆಗೆ ಹೋಗುವು ದಿಲ್ಲ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಾವು ಶಿಕ್ಷಣ ಪಡೆದರೆ ಸಾಲದು ನಮ್ಮ ಸಹೋದರರು ಮುಂದೆ ಬರಲು ಪ್ರಾಮಾಣಿಕ ಪ್ರಯತ್ನ ಮಾಡಿ ಅವರಿಗೆ ನೆರವಿನ ಅಭಯ ನೀಡಬೇಕು. ಸಮಾಜದ ಉನ್ನತಿಕರಣಕ್ಕೆ ಶ್ರಮಿಸುವುದು ಇಂದು ಅತಿ ಅವಶ್ಯಕವಾಗಿದೆ ಎಂದು ವಿಶೇಷ ಉಪನ್ಯಾಸ ನೀಡಿದ ವೆಂಕಣ್ಣಗೌಡ ಡೊಣ್ಣೆಗೌಡ ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ನೂತನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹನು ಮೇಗೌಡ ಮರಕಲ್, ಶಂಕರಗೌಡ ಪಾಟೀಲ್, ತಾಪಂ ಅಧ್ಯಕ್ಷೆ ಗೋವಿಂದಮ್ಮ, ಮಲ್ಲಪ್ಪ ಇಟಗಿ ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಮಾಜಿ. ಸಂಸದ ಎ.ವೆಂಕಟೇಶ ನಾಯಕ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ, ಬಿಜೆಪಿ ಮುಖಂಡರಾದ ಅಮಾತೆಪ್ಪ ಕಂದಕೂರ, ಗುರುಪಾಟೀಲ್, ರಾಜಾ ವೆಂಕಟಪ್ಪ ನಾಯಕ ವನದುರ್ಗ, ಹಣಮಂತರಾಯ ದೊರೆ, ಶೇಖರ ದೊರೆ ಕಕ್ಕಸಗೇರಾ,ಮೈಲಾರಪ್ಪ ಸಗರ, ರಾಮರಾವ್ ಕುಲಕರ್ಣಿ, ಬಿ.ಮಾನಪ್ಪ ನಾಯಕ, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಅಯ್ಯಪ್ಪ ವಾಲ್ಮೀಕಿ, ಭೀಮರಾಯ ಮಾಸ್ತರ, ನಿವೃತ್ತ ಪಿಎಸ್‌ಐ ತಮ್ಮಣ್ಣ ರಾಂ ಪೂರ, ಮಾನಪ್ಪ ಹೂಗಾರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆ ಮಲ್ಲಪ್ಪ ಹೊಸ್ಮನಿ, ಸ್ವಾಗತ ಮರೆಪ್ಪ ಪ್ಯಾಟಿ, ಶಂಕ್ರಣ್ಣ ದೇಸಾಯಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.