ಸೋಮವಾರ, ಸೆಪ್ಟೆಂಬರ್ 20, 2021
25 °C

₹ 2000 ಲಂಚ ಕೇಳಿದ್ದ ಭೂ ಮಾಪನ ಅಧಿಕಾರಿ ಎಸಿಬಿ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಭೂ ಮಾಪನ ಮಾಡಲು ₹ 2000 ಲಂಚ ಕೇಳಿದ್ದ ಭೂಮಾಪನ ಇಲಾಖೆಯ ಸಿಬ್ಬಂದಿಯೊಬ್ಬ ಸೋಮವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಮುದ್ದೇಬಿಹಾಳ ಪಟ್ಟಣದ ಭೂ ಮಾಪನ ಇಲಾಖೆಯಿಂದ ಸರ್ವೇ ಮಾಡಲು ಲೈಸೆಸ್ಸ್‌ ಪಡೆದಿರುವ ದೇವಾನಂದ ರಾಠೋಡ, ಕೆಲಸ ಮಾಡಲು ತಾಲ್ಲೂಕಿನ ತುಂಬಗಿ ಗ್ರಾಮದ ಪಾಡುರಂಗ ರಾಠೋಡ ಅವರಿಗೆ ₹ 2000 ಲಂಚ ಕೇಳಿದ್ದ. ಈ ಹಣವನ್ನು ಪಡೆಯುವಾಗ ಎಸಿಬಿ ದಳದ ಜಿಲ್ಲಾ ಡಿ.ಎಸ್.ಪಿ.ರಘು ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾನೆ. ಪಿಎಸ್ಐ ಎಸ್.ಆರ್.ಗಣಾಚಾರಿ ಹಾಗೂ ಎಸಿಬಿ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು