ಸೋಮವಾರ, ಸೆಪ್ಟೆಂಬರ್ 16, 2019
22 °C

ಅಡವಿ ಶಂಕರಲಿಂಗ ದೇವರ ಜಾತ್ರೆ ಇಂದು

Published:
Updated:

ವಿಜಯಪುರ: ನಗರದ ಹೊರ ವಲಯದಲ್ಲಿರುವ ಅಡವಿ ಶಂಕರಲಿಂಗ ದೇವರ ಜಾತ್ರಾ ಮಹೋತ್ಸವ, ಪ್ರತಿ ವರ್ಷದಂತೆ ಈ ವರ್ಷವೂ ಮೇ 10ರ ಶುಕ್ರವಾರ ವಿಜೃಂಭಣೆಯಿಂದ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 5ರಿಂದ 7ಗಂಟೆವರೆಗೆ ಅಡವಿ ಶಂಕರಲಿಂಗ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ, 8 ಗಂಟೆಗೆ ಪಲ್ಲಕ್ಕಿಯಲ್ಲಿ ಕಳಸದ ಮೆರವಣಿಗೆ ಜರುಗಲಿದೆ.

ಬೆಳಿಗ್ಗೆ 10 ಗಂಟೆಗೆ ಜೋರಾಪುರ ಪೇಟೆಯ ಬಣಗಾರ ಗಲ್ಲಿಯಲ್ಲಿರುವ ಶಂಕರಲಿಂಗ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ ಅಡವಿ ಶಂಕರಲಿಂಗ ದೇವಸ್ಥಾನದವರೆಗೆ ಮೆರವಣಿಗೆ, ಮಧ್ಯಾಹ್ನ 1 ಗಂಟೆಗೆ ಮಹಾ ಪ್ರಸಾದ ನಡೆಯಲಿದೆ.

ಸಂಜೆ 5 ಗಂಟೆಗೆ ಅಡವಿ ಶಂಕರಲಿಂಗ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ ಜೋರಾಪುರ ಪೇಟೆಯ ಶಂಕರಲಿಂಗ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ನಂತರ ಮಂಗಳಾರತಿಯೊಂದಿಗೆ ಜಾತ್ರೆ ಮುಕ್ತಾಯವಾಗುವುದು ಎಂದು ಜಾತ್ರಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Post Comments (+)