ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಎ.ಪಿ.ರಂಗನಾಥ್ ಆತಂಕ

7

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಎ.ಪಿ.ರಂಗನಾಥ್ ಆತಂಕ

Published:
Updated:
Prajavani

ಬೆಂಗಳೂರು: ‘ನ್ಯಾಯಾಂಗಕ್ಕೆ ಕೇಂದ್ರ ಸರ್ಕಾರ ತೊಂದರೆ ಕೊಡುತ್ತಿದ್ದು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಆಕ್ಷೇಪ ವ್ಯಕ್ತಪಡಿಸಿದರು.

ಹಿರಿಯ ವಕೀಲ ಪಿ.ಶಿವಣ್ಣ ಬರೆದಿರುವ ‘ನ್ಯಾಯಾಂಗದ ನಕ್ಷತ್ರಗಳು’ ಪುಸ್ತಕ ಬಿಡುಗಡೆ ಸಮಾರಂಭ ಸೋಮವಾರ ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನ್ಯಾಯಾಂಗದಲ್ಲಿ ಹಸ್ತಕ್ಷೇಪ ಇರಬಾರದು. ಆದರೆ, ಇವತ್ತು, ಸ್ವತಂತ್ರ ಮತ್ತು ಹೊಣೆಗಾರಿಕೆಯುಳ್ಳ ನ್ಯಾಯಾಂಗ ಕಾಣುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿ ಆಗಿದ್ದ ಜಯಂತ್ ಪಟೇಲ್ ಅವರ ರಾಜೀನಾಮೆ ಪ್ರಕರಣವೇ ಈ ಮಾತಿಗೆ ಸಾಕ್ಷಿ‘ ಎಂದೂ ಅವರು ಉದಾಹರಿಸಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು, ‘ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಆಗುತ್ತಿಲ್ಲ. ಇದರಿಂದ ಕೇಸುಗಳ ವಿಲೇವಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಗಂಭಿರ ಚರ್ಚೆ ಮತ್ತು ಸಂವಾದ ಆಗಬೇಕು. ಅದಕ್ಕೆ ನನ್ನ ಎಲ್ಲ ಸಹಕಾರವಿದೆ’ ಎಂದರು.

’ರಾಜ್ಯ ಹೈಕೋರ್ಟ್‌ನಲ್ಲಿ ಈಗ ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆಗಿಂತಲೂ ಅರ್ಧದಷ್ಟು ಕಡಿಮೆ ನ್ಯಾಯಮೂರ್ತಿಗಳು ಇದ್ದಾರೆ. ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಹೈಕೋರ್ಟ್‌ನಿಂದ ಕೇಂದ್ರಕ್ಕೆ ಶಿಫಾರಸು ಪಟ್ಟಿ ರವಾನೆಯಾಗಿದ್ದರೂ ಅದು ನಿಶ್ಚಲವಾಗಿದೆ. ಈ ವಿಳಂಬಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಬೇಕು’ ಎಂದು ಹೇಳಿದರು.

ಇದೊಂಥರಾ ದೀಪಿಕಾ ಮದುವೆ ಸಮಾರಂಭ!

ಪಿ.ಶಿವಣ್ಣ ಮಾತನಾಡಿ, ‘ಈ ಪುಸ್ತಕ ಬಿಡುಗಡೆ ಸಮಾರಂಭ ಒಂಥರಾ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮದುವೆ ಆರತಕ್ಷತೆ ಇದ್ದಂತಿದೆ..!’ ಎಂದು ಬಣ್ಣಿಸಿದರು.

‘ಈಗಾಗಲೇ ಈ ಪುಸ್ತಕವನ್ನು ಪ್ರಕಾಶಕರಾದ ಸಪ್ನ ಬುಕ್ ಹೌಸ್‌ನವರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇದು ಪುನರ್ ಬಿಡುಗಡೆ‌. ದೀಪಿಕಾ ಇಟಲಿಯಲ್ಲಿ ಮದುವೆ ಮಾಡಿಕೊಂಡು ಭಾರತಕ್ಕೆ ಬಂದು ಆರತಕ್ಷತೆ ಮಾಡಿಕೊಂಡಂತಿ ಈ ಕಾರ್ಯಕ್ರಮ’ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !