ನನ್ನ ತಂದೆ ಆರ್.ಎ.ಮಂಜುನಾಥ್, ಶಾರದಾ ವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಅವರೇ ನನಗೆ ಸ್ಫೂರ್ತಿ ಹಾಗೂ ರೋಲ್ ಮಾಡೆಲ್. ಅವರಿಂದ ಬಹಳಷ್ಟು ಒಳ್ಳೆಯ ಗುಣಗಳನ್ನು ಕಲಿತಿದ್ದೇನೆ. ನಾನು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಂಡ ನಂತರ ಪಾಠ ಮಾಡುವ ಕಲೆಯನ್ನು ಅವರಿಂದ ಕರಗತ ಮಾಡಿಕೊಂಡೆ. ಬಹಳ ಶಿಸ್ತಿನ ವ್ಯಕ್ತಿ. ಬೇರೆಯವರಿಗೆ ಸಹಾಯ ಮಾಡುವ ಗುಣವಿದೆ.