ಅಂದು ಮಹಿಳಾ ಬ್ಯಾಂಡ್ನ ಮೊತ್ತಮೊದಲ ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಹೆಚ್ಚೇನೂ ನಿರೀಕ್ಷೆ ಇರಲಿಲ್ಲ. ‘ಹೆಣ್ಮಕ್ಕಳು ಹೇಗೆ ವಾದ್ಯಗಳನ್ನು ನುಡಿಸುತ್ತಾರೆ ನೋಡೋಣ’ ಎಂದುಕೊಂಡೇ ಅನಿವಾಸಿ ಕನ್ನಡಿಗರು ಬಂದಿದ್ದರು. ಆದರೆ, ಅದು ಸಾಮಾನ್ಯ ಸಂಗೀತ ಕಾರ್ಯಕ್ರಮವಷ್ಟೇ ಆಗಿರಲಿಲ್ಲ, ಸಂಗೀತದ ರಸದೌತಣವಾಗಿತ್ತು. ವಿದೇಶಿ ನೆಲದಲ್ಲಿ ಕನ್ನಡದ ಕಂಪನ್ನು ಸೂಸಿದ ಸೊಗಸಾದ ಕಾರ್ಯಕ್ರಮವಾಗಿತ್ತು. ಕಾರ್ಯಕ್ರಮ ನಡೆದ ಅಷ್ಟೂ ಹೊತ್ತು ಕೇಳುಗರು ಪ್ರತಿ ಹಾಡಿಗೂ ಹೆಜ್ಜೆ ಹಾಕಿದರು. ಪ್ರತಿ ಆಲಾಪಕ್ಕೂ ತಲೆದೂಗಿದರು, ಆಸ್ವಾದಿಸಿದರು, ಆನಂದಿಸಿದರು. ಅಲ್ಲಿಗೆ ಮಹಿಳಾ ಬ್ಯಾಂಡ್ಗೆ ಇದ್ದ ಅಳುಕು ಮಾಯವಾಯಿತು.

ಯಾವುದೇ ಸಂಗೀತ ಕಾರ್ಯಕ್ರಮದಲ್ಲಿ ವಾದ್ಯವೃಂದ ಪ್ರಮುಖ ಪಾತ್ರ ವಹಿಸುತ್ತದೆ. ಕಾರ್ಯಕ್ರಮದ ಯಶಸ್ಸು ಇಲ್ಲವೇ ವೈಫಲ್ಯ ವಾದ್ಯಗಾರರನ್ನು ಅವಲಂಬಿಸಿರುತ್ತದೆ. ಸಂಗೀತ ಕಾರ್ಯಕ್ರಮಗಳಲ್ಲಿ ವಾದ್ಯಗಾರರು ಬಹುತೇಕ ಪುರುಷರೇ ಆಗಿರುತ್ತಾರೆ. ವೀಣೆ, ಗಿಟಾರ್, ವಯೋಲಿನ್, ಕೊಳಲು... ಹೀಗೆ ಕೆಲವೇ ಕೆಲವು ವಾದ್ಯಗಳನ್ನು ಬಿಟ್ಟರೆ ತಬಲ, ಡ್ರಮ್ಸ್, ಕೀಬೋರ್ಡ್ನಂತಹ ವಾದ್ಯಗಳ ನುಡಿಸುವಿಕೆಯಲ್ಲಿ ಹೆಣ್ಮಕ್ಕಳನ್ನು ಕಾಣುವುದು ಅಪರೂಪ. ಈ ವಿಚಾರದಲ್ಲಿ ಹೆಣ್ಮಕ್ಕಳಿಗೆ ಕುಟುಂಬದ ಬೆಂಬಲವೂ ಕಡಿಮೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ವಾದ್ಯ ನುಡಿಸುವಿಕೆಯಲ್ಲೂ ಹೆಣ್ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂದು ಕೂಗಿ ಹೇಳಲು ಹೊರಟಿದೆ ‘ಜನನಿ ಮಹಿಳಾ ಬ್ಯಾಂಡ್’.

ಜನನಿಯ ಜನನ...

ನಾಲ್ಕೈದು ವರ್ಷಗಳ ಹಿಂದೆ ಅಮೆರಿಕದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶಮಿತಾ ಮಲ್ನಾಡ್ ಅವರು ಮಹಿಳಾ ವಾದ್ಯವೃಂದವನ್ನು ಒಳಗೊಂಡ ಸಂಗೀತ ಕಾರ್ಯಕ್ರಮದ ಪರಿಕಲ್ಪನೆ ಕುರಿತು ಅಮೆರಿಕದ ಕನ್ನಡ ಸಂಘಟನೆಗಳಾದ ‘ಕಸ್ತೂರಿ ಮೀಡಿಯಾ’ ಮತ್ತು ‘ಧ್ವನಿ ಮೀಡಿಯಾ’ ಸಂಘಟಕರಾದ ಗೋವರ್ಧನ್ ಮತ್ತು ಜಯಾ ಅವರಿಗೆ ತಿಳಿಸಿದ್ದರು. ‘ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದಾಗ ಭಾರತದಿಂದ ಅಥವಾ ಕರ್ನಾಟಕದಿಂದ ಪುರುಷ ವಾದ್ಯವೃಂದದವರೇ ಬರುತ್ತಾರೆ. ನಾವ್ಯಾಕೆ ವಿಭಿನ್ನವಾದ ಕಾರ್ಯಕ್ರಮವನ್ನು ನಡೆಸಿಕೊಡಬಾರದು? ಹೆಣ್ಮಕ್ಕಳೂ ಸೊಗಸಾಗಿ ವಾದ್ಯಗಳನ್ನು ನುಡಿಸಬಲ್ಲರು. ಅವರಿಗೆ ಅವಕಾಶ ನೀಡಬೇಕಷ್ಟೇ’ ಎಂದು ಕೋರಿದರು.

ಹೆಣ್ಮಕ್ಕಳನ್ನು ವಿದೇಶಕ್ಕೆ ಕರೆದುಕೊಂಡು ಹೋದಾಗ ಸಂಘಟಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಿಭಾಯಿಸುವುದು ಕಷ್ಟ ಎಂಬ ಮಾತು ಕೇಳಿಬಂದಿತು. ಆದರೂ ಪ್ರಾರಂಭದಲ್ಲಿಯೇ ನಕಾರಾತ್ಮಕ ಮಾತೇಕೆ. ಒಮ್ಮೆ ಆಯೋಜಿಸಿ ನೋಡೋಣ ಎಂದು ಶಮಿತಾ ಮಲ್ನಾಡ್ ಒಪ್ಪಿಸಿದರು. ಆದರೆ ಅಷ್ಟರಲ್ಲಾಗಲೇ ಕೊರೊನಾ ಅಪ್ಪಳಿಸಿತು. ಈ ಯೋಜನೆ ನನೆಗುದಿಗೆ ಬಿತ್ತು. ಆದರೆ ಶಮಿತಾ ಮಲ್ನಾಡ್ ಮಾತ್ರ ಪಟ್ಟು ಸಡಿಲಿಸಲಿಲ್ಲ. 2025ರ ನವೆಂಬರ್ನಲ್ಲಿ ಅಮೆರಿಕದ ಐದು ಕಡೆಗಳಲ್ಲಿ ಮಹಿಳಾ ಬ್ಯಾಂಡ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದರು. ಅವರ ಈ ನಿರ್ಧಾರವು ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಯಿತು.

ಅಮೆರಿಕದ ಸಿಯಾಟಲ್ನಲ್ಲಿ ಮೊದಲಿಗೆ ಇಂಥದ್ದೊಂದು ಕಾರ್ಯಕ್ರಮ ಆಯೋಜಿಸಿದಾಗ ಹೆಣ್ಮಕ್ಕಳು ಎಲ್ಲ ತರಹದ ವಾದ್ಯಗಳನ್ನು ನುಡಿಸುತ್ತಾರಾ ಎಂಬ ಅನುಮಾನದಿಂದಲೇ ಜನರು ಬಂದಿದ್ದರು. ಆದರೆ ಕಾರ್ಯಕ್ರಮ ಆರಂಭವಾದ ನಂತರ ಅವರಿಗಿದ್ದ ಅನುಮಾನಗಳು ದೂರವಾದವು. ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿತು. ಬಳಿಕ ರಿಚ್ಮಂಡ್, ಶಾರ್ಲೆಟ್, ರ್ಯಾಲೆ, ಬಾಸ್ಟನ್ನಲ್ಲಿ ‘ಜನನಿ ಮಹಿಳಾ ಬ್ಯಾಂಡ್’ ಸಂಗೀತ ರಸದೌತಣ ಬಡಿಸಿತು.

ಜನರ ಉತ್ಸಾಹ, ಪ್ರೋತ್ಸಾಹದಿಂದಾಗಿ ಶಮಿತಾ ಮಲ್ನಾಡ್ ಮತ್ತು ಅವರ ತಂಡವು ಮತ್ತಷ್ಟು ಹುರುಪಿನಿಂದ ಮುಂದಡಿ ಇಡುತ್ತಿದೆ. ಕರ್ನಾಟಕದಲ್ಲಿಯೂ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದೆ.

ವಿಭಿನ್ನ ಪರಿಕಲ್ಪನೆ

‘ಜನನಿ ಮಹಿಳಾ ಬ್ಯಾಂಡ್’ ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ಟ್ರೆಂಡಿಂಗ್ ಹಾಡುಗಳು, ನಟ–ನಟಿಯರಿಗೆ ಸಮರ್ಪಣೆ ಮಾಡುವ ಹಾಡುಗಳು, ಜನಪದ, ತತ್ವಪದ, ಭಾವಗೀತೆ, ಹಳೆಯ ಜನಪ್ರಿಯ ಮತ್ತು ಸುಮಧುರ ಹಾಡುಗಳ ಮೂಲಕ ಕೇಳುಗರನ್ನು ರಂಜಿಸಲಾಗುತ್ತಿದೆ. ಈ ಬ್ಯಾಂಡ್ನಲ್ಲಿ ಇಂತಿಷ್ಟೇ ವಾದ್ಯಗಾರರು ಎಂದಿಲ್ಲ. ಅಗತ್ಯಕ್ಕೆ ತಕ್ಕಂತೆ ಇರುತ್ತಾರೆ. ಅಮೆರಿಕ ಪ್ರವಾಸ ಸಂದರ್ಭದಲ್ಲಿ ಮೂವರು ವಾದ್ಯಗಾರರು ಮತ್ತು ಇಬ್ಬರು ಗಾಯಕರು ಇದ್ದರು. ಕರ್ನಾಟಕದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹತ್ತು ಮಂದಿ ವಾದ್ಯಗಾರ್ತಿಯರು ಇದ್ದರು.

‘ಯಾವುದೇ ಕೆಲಸಕ್ಕೂ ಮನೆಯಿಂದ ಮೊದಲು ಬೆಂಬಲ ಸಿಗಬೇಕು. ನನ್ನ ಈ ಪರಿಕಲ್ಪನೆಯನ್ನು ಮೊದಲು ತಿಳಿಸಿದ್ದು ಪತಿ ಅರುಣ್ ಅವರಿಗೆ. ಅವರು ಮರು ಯೋಚಿಸದೇ ಪ್ರೋತ್ಸಾಹ ನೀಡಿ, ಕೆಲವು ಸಲಹೆಯನ್ನೂ ನೀಡಿದರು. ಹೀಗಾಗಿ ಜನನಿ ಮಹಿಳಾ ಬ್ಯಾಂಡ್ ಹುಟ್ಟಿಕೊಂಡಿತು. ಹೆಣ್ಮಕ್ಕಳಿಗೆ ಮನೆಯಲ್ಲಿ ಬೆಂಬಲ ಸಿಕ್ಕರೆ ಗೆಲ್ಲುವ ಹುರುಪು ಬರುತ್ತದೆ. ತಂದೆ–ತಾಯಿ, ಮಕ್ಕಳು, ಸ್ನೇಹಿತರ ಬೆಂಬಲವೂ ಅಗತ್ಯ. ಅವರೆಲ್ಲರ ಪ್ರೋತ್ಸಾಹದಿಂದ ನನಗೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಯಿತು’ ಎನ್ನುತ್ತಾರೆ ಶಮಿತಾ.

ಕೆಲವೊಂದು ಆಲೋಚನೆಗಳು, ಕನಸುಗಳು ಕಾರ್ಯರೂಪಕ್ಕೆ ಬರುವವರೆಗೂ ಯಾರಿಗೂ ನಂಬಿಕೆ ಇರುವುದಿಲ್ಲ. ಅವುಗಳು ಸಾಕಾರವಾದಾಗಲೇ ನಂಬಿಕೆ, ಮೆಚ್ಚುಗೆ, ಅಭಿಮಾನ ಮೂಡುವುದು. ಈ ವಿಷಯದಲ್ಲಿ ಅಲ್ಪಕಾಲದಲ್ಲೇ ಜನನಿ ಮಹಿಳಾ ಬ್ಯಾಂಡ್ ಜನಪ್ರಿಯವಾಗುತ್ತಿರುವುದು ಇದಕ್ಕೆ ಸಾಕ್ಷಿ.

ಜನನಿ ಎಂದರೆ...

ಇಂಥದ್ದೊಂದು ಪರಿಕಲ್ಪನೆಯನ್ನು ಆಸ್ಥೆ ವಹಿಸಿ ಕಾರ್ಯರೂಪಕ್ಕೆ ತಂದಿರುವುದು ದಂತ ವೈದ್ಯೆ, ಗಾಯಕಿ ಶಮಿತಾ ಮಲ್ನಾಡ್. ಮಹಿಳಾ ಬ್ಯಾಂಡ್ನ ಈ ತಂಡಕ್ಕೆ ಅವರು ‘ಜನನಿ ಮಹಿಳಾ ಬ್ಯಾಂಡ್’ ಎಂಬ ಹೆಸರಿಟ್ಟಿದ್ದಾರೆ. ಜನನಿ ಎಂದರೆ ಸೃಷ್ಟಿಕರ್ತೆ, ತಾಯಿ ಅಥವಾ ಹೆಣ್ಣು ಎಂದರ್ಥ.

ಈ ಬ್ಯಾಂಡ್ನಲ್ಲಿ ಕೀಬೋರ್ಡ್ (ಭುವನೇಶ್ವರಿ ಬಲರಾಮ್), ಕೊಳಲು (ವರ್ಷಾ ಆಚಾರ್ಯ) ಲೀಡ್ ಗಿಟಾರ್ (ಗೀತಾ), ಬೇಸ್ ಗಿಟಾರ್(ಕುಶಲಾ), ಪ್ಯಾಡ್ (ಪಲ್ಲವಿ ಕಿಣಿ), ಡ್ರಮರ್ (ಪ್ರಿಯಾ ಆ್ಯಂಡ್ರೂ), ತಬಲ, ತಾಳವಾದ್ಯ (ಪೂರ್ಣಿಮಾ, ವೈಷ್ಣವಿ) ವಯೋಲಿನ್ (ರಮ್ಯಾ ಚೇತನ್), ಕಿಬೋರ್ಡ್ (ವಿನೋನಾ ಜೆನ್ಸಿ) ಇದ್ದಾರೆ.

ದೇಶ–ವಿದೇಶಗಳಿಗೆ ಹೋಗಿ ಎಲ್ಲಾತರಹದ ಕಾರ್ಯಕ್ರಮಗಳನ್ನು ನಡೆಸಿಕೊಡಬೇಕು. ಜನರನ್ನು ರಂಜಿಸಬೇಕು. ಅದನ್ನು ನೋಡಿ ಮತ್ತಷ್ಟು ಮಹಿಳಾ ಬ್ಯಾಂಡ್ಗಳು ಹುಟ್ಟಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಹೆಣ್ಮಕ್ಕಳಿಗೆ ಅವಕಾಶ ಮತ್ತು ಪ್ರೋತ್ಸಾಹ ಲಭಿಸಬೇಕು
ಶಮಿತಾ ಮಲ್ನಾಡ್ ಗಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.