ಚೆನ್ನೈ: ಆರಂಭ ಆಟಗಾರ ಟಿಮ್ ಸೀಫರ್ಟ್ (65 42 ಎಸೆತ) ಅವರ ಬಿರುಸಿನ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು, ಟಿ29 ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡದ ಮೇಲೆ ಐದು ವಿಕೆಟ್ಗಳ ಗೆಲುವು ಪಡೆಯಿತು.

ಭಾನುವಾರ ನಡೆದ ಡಿ ಗುಂಪಿನ ಪಂದ್ಯದಲ್ಲಿ ಅಫ್ಗಾನಿಸ್ತಾನ 6 ವಿಕೆಟ್ಗೆ 182 ರನ್ ಹೊಡೆಯಿತು. ಸೀಫರ್ಟ್ ಮತ್ತು ಗ್ಲೆನ್ ಫಿಲಿಪ್ಸ್ (42) ಅವರ ಆಟದಿಂದ ನ್ಯೂಜಿಲೆಂಡ್ 13 ಎಸೆತಗಳು ಉಳಿದಿರುವಂತೆ 17.5 ಓವರುಗಳಲ್ಲಿ 5 ವಿಕೆಟ್ಗೆ 183 ರನ್ ಹೊಡೆಯಿತು.

ಇದು ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಬೆನ್ನಟ್ಟಿದ ಅತಿ ದೊಡ್ಡ ಮೊತ್ತವಾಗಿದೆ. 2021ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿಪಡಿಸಿದ 167 ರನ್ ಗುರಿಯನ್ನು ತಲುಪಿದ್ದು ಈ ಹಿಂದಿನ ಗರಿಷ್ಠ ಚೇಸ್ ಆಗಿತ್ತು.

ನ್ಯೂಜಿಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆಫ್ ಬ್ರೇಕ್ ಬೌಲರ್ ಮುಜೀಬ್ ಉರ್ ರೆಹಮಾನ್ ಎರಡನೇ ಓವರಿನಲ್ಲೇ ಆರಂಭ ಆಟಗಾರ ಫಿನ್ ಅಲೆನ್ (1) ಮತ್ತು ರಚಿನ್ ರವೀಂದ್ರ (0) ಅವರ ವಿಕೆಟ್ಗಳನ್ನು ಸತತ ಎಸೆತಗಳಲ್ಲಿ ಪಡೆದರು.

ಗ್ಲೆನ್ ಫಿಲಿಪ್ಸ್ ಹ್ಯಾಟ್ರಿಕ್ ತಪ್ಪಿಸಿದರಲ್ಲದೇ, ಎದುರಾಳಿಗಳ ಸ್ಪಿನ್ ದಾಳಿ ನಿಭಾಯಿಸಿ ಮೂರನೇ ವಿಕೆಟ್ಗೆ ಸೀಫರ್ಟ್ ಜೊತೆ 74 ರನ್ ಸೇರಿಸಿ ತಂಡವನ್ನು ಸುರಕ್ಷಿತ ಸ್ಥಿತಿಗೆ ತಲುಪಿಸಿದರು. 48ರಲ್ಲಿದ್ದಾಗ ಅನುಭವಿ ಸ್ಪಿನ್ನರ್ ರಶೀದ್ ಖಾನ್ ತಮ್ಮದೇ ಬೌಲಿಂಗ್ನಲ್ಲಿ ಸೀಫರ್ಟ್ಗೆ ಜೀವದಾನ ನೀಡಿದರು. ಮೊಹಮ್ಮದ್ ನಬಿ ಬೌಲಿಂಗ್ನಲ್ಲಿ ಸಿಕ್ಸರ್ ಎತ್ತುವ ಮೂಲಕ ಸೀಫರ್ಟ್ ಅರ್ಧ ಶತಕ ದಾಟಿದರು. ಮಾರ್ಕ್ ಚಾಪ್ಮನ್ (28, 17ಎ) ಮತ್ತು ಡೇರಿಲ್ ಮಿಚೆಲ್ (ಅಜೇಯ 25, 14ಎ) ಅವರು ತಂಡವು ಬೇಗನೇ ಗುರಿ ತಲುಪಲು ನೆರವಾದರು.

ಇದಕ್ಕೆ ಮೊದಲು ಟಾಸ್ ಗೆದ್ದು ಬ್ಯಾಟಿಂಗ ಮಾಡಿದ ಅಫ್ಗಾನಿಸ್ತಾನ ತಂಡದ ಪರ ಗುಲ್ಬದ್ದಿನ್ ನೈಬ್ (63, 35ಎ, 4x3, 6x4) ಅವರು ಆಕ್ರಮಣಕಾರಿ ಅರ್ಧ ಶತಕದ ಮೂಲಕ ಸವಾಲಿನ ಮೊತ್ತ ತಲುಪಲು ನೆರವಾದರು.

ಸಂಕ್ಷಿಪ್ತ ಸ್ಕೋರು:

ಅಫ್ಗಾನಿಸ್ತಾನ: 20 ಓವರುಗಳಲ್ಲಿ 6 ವಿಕೆಟ್ಗೆ 182 (ರಹಮಾನುಲ್ಲಾ ಗುರ್ಬಾಝ್ 27, ಗುಲ್ಬದ್ದಿನ್ ನೈಬ್ 63, ಸೇದಿಕುಲ್ಲಾ ಅಟಲ್ 29, ಲಾಕಿ ಫರ್ಗ್ಯೂಸನ್ 40ಕ್ಕೆ2)

ನ್ಯೂಜಿಲೆಂಡ್: 17.5 ಓವರುಗಳಲ್ಲಿ 5 ವಿಕೆಟ್ಗೆ 183 (ಟಿಮ್ ಸೀಫರ್ಟ್ 65, ಗ್ಲೆನ್ ಫಿಲಿಪ್ಸ್ 42, ಮಾರ್ಕ್ ಚಾಪ್ಮನ್ 28, ಡೇರಿಲ್ ಮಿಚೆಲ್ ಔಟಾಗದೇ 25; ಮುಜೀಬ್ ಉರ್ ರೆಹಮಾನ್ 31ಕ್ಕೆ2).

ಪಂದ್ಯದ ಆಟಗಾರ: ಟಿಮ್ ಸೀಫರ್ಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.