ಬಟ್ಟೆಗಳನ್ನೆಲ್ಲಾ ರಾಶಿ ಹಾಕಿಕೊಂಡು ಕಲ್ಲಿನ ಮೇಲೆ ತೊಳೆಯುವ ಕಾಲ ಈಗಿಲ್ಲ. ಎಲ್ಲರ ಮನೆಯಲ್ಲೂ ಮಷಿನ್ಗಳದ್ದೇ ಕಾರುಬಾರು. ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮಷಿನ್ ಈಗ ಸಾಮಾನ್ಯ ಎನ್ನುವಂತಾಗಿದೆ.

ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮಷಿನ್ಗೆ ಹಾಕುತ್ತೇವೆ. ಆದರೆ ವಾಷಿಂಗ್ ಮಷಿನ್ ಅನ್ನೂ ಆಗಾಗ ತೊಳೆಯುವುದನ್ನು ಮರೆಯಬಾರದು.
.ತೊಳೆದ ಬಟ್ಟೆಯಲಿ ಕಮಟು ವಾಸನೆಯೇ? ಹಾಗಾದರೆ ಮನೆಯಲ್ಲೇ ಇದೆ ಪರಿಹಾರ!.ಬಾಲ್ಕನಿ ಎಂಬ ಆಪ್ತ ಸ್ಥಳ....
ನಾವು ಪ್ರತಿ ಸಲ ಬಳಸುವ ಡಿಟರ್ಜಂಟ್ಗಳು, ಬಟ್ಟೆ ಸುವಾಸನೆ ಬೀರಲೆಂದು ಬಳಸುವ ಲಿಕ್ವಿಡ್ಗಳು ವಾಷಿಂಗ್ ಮಷಿನ್ನಲ್ಲಿ ಸಿಲುಕಿ ಗಲೀಜಾಗಿರುತ್ತದೆ. ಇದಲ್ಲದೆ ಬಟ್ಟೆಯ ವಾಸನೆಯ ಜತೆಗೆ ಡಿಟರ್ಜಂಟ್ಗಳ ಘಮದೊಂದಿಗೆ ಬೆರೆತು ಮಷಿನ್ನಿಂದ ದುರ್ನಾತ ಬರುವ ಸಾಧ್ಯತೆಯು ಇರುತ್ತದೆ. ಹೀಗಾಗಿ ಕಾಲಕಾಲಕ್ಕೆ ವಾಷಿಂಗ್ ಮಷಿನ್ ಶುಚಿಗೊಳಿಸುವುದು ಅಗತ್ಯ.

ವಾಷಿಂಗ್ ಮಷಿನ್ ಶುಚಿಗೊಳಿಸಲು ಇವುಗಳನ್ನು ಬಳಸಿ

ಟೂತ್ಬ್ರಷ್

ಸ್ವಚ್ಛವಾದ ಬಟ್ಟೆ

ವಿನೆಗರ್

ಅಡುಗೆ ಸೋಡ

ಹೀಗೆ ಮಾಡಿ

ವಾಷಿಂಗ್ ಮಷಿನ್ ಹೊರಭಾಗದಲ್ಲಿ ಕಾಣುವ ಧೂಳನ್ನು ಬ್ರಷ್ ಸಹಾಯದಿಂದ ಶುಚಿಗೊಳಿಸಿಕೊಳ್ಳಿ. ಡ್ರಮ್ ಒಳಗಡೆ ಇರುವ ಫಿಲ್ಟರ್ಅನ್ನು ತೆಗೆದು ಅದರಲ್ಲಿರುವ ಧೂಳು, ಕೊಳೆಯನ್ನು ಒರೆಸಿಕೊಳ್ಳಿ. ಇನ್ನು ಮುಖ್ಯವಾಗಿ ಪೌಡರ್ ಅಥವಾ ಸೋಪು ಹಾಕುವ ಬಾಕ್ಸ್ಅನ್ನು ಬ್ರಷ್ ಮತ್ತು ಬಟ್ಟೆಯ ಮೂಲಕ ಶುಚಿಗೊಳಿಸಿ.

ನಂತರ ಒಳಭಾಗದಲ್ಲಿ ಸ್ವಚ್ಛಗೊಳಿಸಿ, ವಿನೆಗರ್ ಮತ್ತು ಅಡುಗೆ ಸೋಡ (ಬೇಕಿಂಗ್ ಸೋಡ) ಬಳಸುವುದು ಬಜೆಟ್ ಸ್ನೇಹಿಯೂ ಆಗಿದೆ. ಇವುಗಳು ವಾಷಿಂಗ್ ಮಷಿನ್ನ ದುರ್ಗಂಧವನ್ನೂ ಹೋಗಲಾಡಿಸುತ್ತದೆ.
.ಮನೆಯ ಅಲಂಕಾರವೂ, ಮನದ ಉಲ್ಲಾಸವೂ.ಅಮ್ಮ ಹೇಳ್ತಾಳೆ– ಲೋಹದ ಡಬ್ಬಿಗಳಲ್ಲಿ ಉಪ್ಪು ಇಡಬಾರದು: ಯಾಕೆ?.
ವಾಷಿಂಗ್ ಮಷಿನ್ ಖಾಲಿಯಾಗಿ ಮತ್ತು ಒಣಗಿರುವಂತೆ ನೋಡಿಕೊಳ್ಳಿ. ವಾಷಿಂಗ್ ಟೈಮ್ ಅನ್ನು ಬಿಸಿ ನೀರಿಗೆ ಅಥವಾ ಅತಿ ಹೆಚ್ಚು ಸಮಯಕ್ಕೆ ನಿಗದಿಪಡಿಸಿಕೊಳ್ಳಿ. ಟಬ್ನಲ್ಲಿ ನೀರನ್ನು ತುಂಬಿಸಿಕೊಳ್ಳಿ. ನಂತರ ಅದಕ್ಕೆ 3 ರಿಂದ 4 ಸಣ್ಣ ಕಪ್ ಬಿಳಿ ವಿನೆಗರ್ ಸೇರಿಸಿ. ನಂತರ ಒಮ್ಮೆ ಮಷಿನ್ ಆನ್ ಮಾಡಿ 2 ನಿಮಿಷಗಳ ಬಳಿಕ ನಿಲ್ಲಿಸಿ. ಒಂದೆರಡು ನಿಮಿಷಗಳ ಕಾಲ ವಿನೆಗರ್ ಮಿಶ್ರಿತ ನೀರನ್ನು ಹಾಗೆಯೇ ಇರಲು ಬಿಡಿ. ನಂತರ ಅದಕ್ಕೆ ಅರ್ಧ ಕಪ್ ಬೇಕಿಂಗ್ ಸೋಡ ಸೇರಿಸಿ ಸ್ವಿಚ್ ಆನ್ ಮಾಡಿ, 2 ನಿಮಿಷಗಳ ನಂತರ ಸ್ವಿಚ್ ಆಫ್ ಮಾಡಿ. ಬಳಿಕ ಅರ್ಧ ಅಥವಾ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಮತ್ತೆ ಆನ್ ಮಾಡಿ ಮುಗಿಯುವವರೆಗೆ ಇಟ್ಟು, ನೀರು ಹೊರ ಹೋಗುವವರೆಗೆ ಕಾಯಿರಿ. ನಂತರ ಇನ್ನೊಮ್ಮೆ ನೀರನ್ನು ಮಾತ್ರ ಹಾಕಿ ರನ್ ಮಾಡಿ, ನೀರನ್ನು ಹೊರಹಾಕಿಕೊಳ್ಳಿ. ಕೊನೆಯಲ್ಲಿ ಒಣ ಬಟ್ಟೆಯಿಂದ ಒರೆಸಿಕೊಳ್ಳಿ.

ನೆನಪಿಡಿ, ವಾಷಿಂಗ್ ಮಷಿನ್ ಫ್ರಂಟ್ ಲೋಡ್ ಆದರೆ ಡಿಟರ್ಜೆಂಟ್ ಡಿಸ್ಪೆನ್ಸರ್ನಲ್ಲಿ 2 ಕಪ್ ಬಿಳಿ ವಿನೆಗರ್ ಹಾಕಿ. ಟಾಪ್ ಲೋಡ್ಗೆ 4 ಕಪ್ ವಿನೆಗರ್ ನೇರವಾಗಿ ಡ್ರಮ್ಗೆ ಹಾಕಿ.
.ಮನೆಯೆಂದ ಮೇಲೆ ನೀಟಾಗಿರಬೇಡವೇ? ಇಲ್ಲಿವೆ ಸರಳ ಸಲಹೆಗಳು!.ಅಮ್ಮ ಹೇಳ್ತಾರೆ...