ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಪರೇಷನ್ ಬಾರ್ಬರೋಸಾ

Last Updated 27 ಜುಲೈ 2019, 19:45 IST
ಅಕ್ಷರ ಗಾತ್ರ

ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ರಷ್ಯಾ ದೇಶವನ್ನು ವಶಪಡಿಸಿಕೊಳ್ಳಬೇಕು ಎಂಬ ಹಂಬಲ ಹೊಂದಿದ್ದ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ‘ಆಪರೇಷನ್ ಬಾರ್ಬರೋಸಾ’ ಎನ್ನುವ ಕಾರ್ಯಾಚರಣೆಗೆ 1941ರ ಜೂನ್‌ 22ರಂದು ಆದೇಶ ನೀಡಿದ. ಈ ಕಾರ್ಯಾಚರಣೆ ಆರಂಭವಾಗುವ ಒಂದು ಗಂಟೆ ಮೊದಲು ಹಿಟ್ಲರ್, ‘ಮೂರು ತಿಂಗಳು ಕಳೆಯುವ ಮುನ್ನವೇ ರಷ್ಯಾ ದೇಶ ಪತನಗೊಳುತ್ತದೆ. ಹಿಂದೆಂದೂ ಕಾಣದಿದ್ದಂತಹ ಪತನ ಅದಾಗಿರಲಿದೆ’ ಎಂದು ಹೇಳಿದ್ದ.

ಈ ಕಾರ್ಯಾಚರಣೆಯ ಆರಂಭದಲ್ಲಿ ಜರ್ಮನ್ ಪಡೆಗಳಿಗೆ ಜಯ ಸಿಕ್ಕಿತಾದರೂ, ಸೋವಿಯತ್ ರಷ್ಯಾದ ಸೈನಿಕರು ನಂತರ ದೃಢವಾಗಿ ಹೋರಾಟ ನಡೆಸಿದರು. ನಂತರ, ಜರ್ಮನ್ ಪಡೆಗಳಿಗೆ ಭಾರಿ ಸೋಲು ಎದುರಾಯಿತು. ಇದು ಮಹಾಯುದ್ಧದ ಗತಿಯನ್ನು ಬದಲಿಸಿತು. ಹಿಟ್ಲರನ ಸೋಲಿಗೆ ದಾರಿ ಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT