*
ಧ್ರುವ ಪ್ರಭೆ
ಉತ್ತರ ಹಾಗೂ ದಕ್ಷಿಣ ಧ್ರುವಗಳಲ್ಲಿ ಆಗಾಗ ಬೆಳಕಿನ ಪ್ರಭೆ ಮೂಡುತ್ತದೆ. ಆರ್ಕ್ಟಿಕ್ ಭಾಗದಲ್ಲಿ ಉತ್ತರ ಪ್ರಭೆ ಮೂಡಿದರೆ, ಅಂಟಾರ್ಟಿಕ್ನಲ್ಲಿ ದಕ್ಷಿಣ ಪ್ರಭೆ ಚಿತ್ತಾಪಹರಿಸುತ್ತದೆ. ಆರ್ಕ್ಟಿಕ್ ಭಾಗದಲ್ಲೇ ಹೆಚ್ಚು ಸಂದರ್ಭಗಳಲ್ಲಿ ಪ್ರಭೆ ಕಾಣಬಹುದು. ಸೂರ್ಯರಶ್ಮಿಯ ಅಯಾನ್ ಕಣಗಳು ಭೂಮಿಯ ಅಯಸ್ಕಾಂತ ಕ್ಷೇತ್ರಕ್ಕೆ ಸಿಲುಕಿದಾಗ ಈ ರೀತಿ ಬಣ್ಣದ ಪ್ರಭೆ ಉಂಟಾಗುತ್ತದೆ. ಭೂಮಂಡಲದ ಅನಿಲಗಳ ಜತೆಗಿನ ರಾಸಾಯನಿಕ ಕ್ರಿಯೆಯ ಫಲವಿದು. ಭೂಮಿ ರಮಣೀಯ ಎನ್ನುವುದು ಇದಕ್ಕೇ ಇರಬೇಕು.