ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹ ಲೋಕ

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

1) ನಿಸರ್ಗದಲ್ಲಿನ ಎಲ್ಲ `ಮೂಲವಸ್ತು' ಗಳನ್ನೂ ಲೋಹ ಮತ್ತು ಅಲೋಹಗಳೆಂದು ವಿಂಗಡಿಸಲಾಗಿದೆ - ಹೌದಲ್ಲ? ಲೋಹಗಳ ಒಟ್ಟು ಸಂಖ್ಯೆ ಇವುಗಳಲ್ಲಿ ಯಾವುದಕ್ಕೆ ಅತ್ಯಂತ ಸಮೀಪ?

ಅ) 46 ಬ) 61 ಕ) 70 ಡ) 93

2) ಹವಳದ ರಾಶಿಯೊಂದು (ಚಿತ್ರ -1) ರಲ್ಲಿದೆ. ಹವಳದಲ್ಲಿನ ಪ್ರಮುಖ ಲೋಹಾಂಶ ಇವುಗಳಲ್ಲಿ ಯಾವುದು?
ಅ) ಕ್ಯಾಲ್ಸಿಯಂ ಬ) ಸೋಡಿಯಂ
ಕ) ಮೆಗ್ನೀಸಿಯಂ ಡ) ಪೊಟಾಸಿಯಂ

3) `ರಾಜಲೋಹ - ಲೋಹರಾಜ' ಎಂದೇ ಪ್ರಸಿದ್ಧವಾಗಿರುವ ಬಂಗಾರದ ಗಟ್ಟಿಯೊಂದು (ಚಿತ್ರ - 2) ರಲ್ಲಿದೆ. ಚಿನ್ನ ಮತ್ತಿತರ ಕೆಲ ಲೋಹಗಳನ್ನೂ, ಅವು ಗರಿಷ್ಠ ಪ್ರಮಾಣದಲ್ಲಿ ಲಭಿಸುತ್ತಿರುವ ರಾಷ್ಟ್ರಗಳ ಹೆಸರುಗಳನ್ನೂ ಇಲ್ಲಿ ಪಟ್ಟಿ ಮಾಡಿದೆ. ಅವುಗಳನ್ನು ಸರಿಹೊಂದಿಸಬಲ್ಲಿರಾ?
1) ಬಂಗಾರ ಅ) ಕೆನಡ
2) ಬೆಳ್ಳಿ ಬ) ಬ್ರೆಜಿಲ್
3) ತಾಮ್ರ ಕ) ದಕ್ಷಿಣ ಆಫ್ರಿಕ
4) ಕಬ್ಬಿಣ ಡ) ಯು.ಎಸ್.ಎ.
5) ಅಲ್ಯೂಮಿನಿಯಂ ಇ) ಮೆಲ್ಸಿಕೋ
6) ನಿಕ್ಕಲ್ ಈ) ಆಸ್ಟ್ರೇಲಿಯ
7) ಸತು

4) ವಿದ್ಯುದುಪಕರಣಗಳ - ಸಾಧನಗಳ ತಯಾರಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಕೆಯಲ್ಲಿರುವ ಲೋಹ,( ಚಿತ್ರ - 3) ರಲ್ಲಿದೆ. ಈ ಲೋಹ ಯಾವುದು?
ಅ) ತವಕ ಬ) ತಾಮ್ರಕ) ಕ್ರೋಮಿಯಂ ಡ) ಸೀಸ

5) ರತ್ನಗಳ ವರ್ಣಗಳಿಗೆ ಅವುಗಳಲ್ಲಿ ಬೆರೆತ ಲೋಹ ಅಥವಾ ಅಲೋಹ ಅಂಶಗಳೇ ಕಾರಣ. ಹಾಗಾದರೆ ಅಮೂಲ್ಯ ರತ್ನಗಳಾದ `ಪಚ್ಚೆ'ಯ ಹಸಿರು (ಚಿತ್ರ - 4) ಮತ್ತು ಕೆಂಪಿನ ಕೆಂಪು (ಚಿತ್ರ - 7) ಈ ಬಣ್ಣಗಳಿಗೆ ಕಾರಣವಾದ ಲೋಹಾಂಶಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ:
ಅ) ಪ್ಲಾಟಿನಂ ಬ) ಕೋಬಾಲ್ಟ್
ಕ) ಇಂಡಿಯಾ ಡ) ಮ್ಯಾಂಗನೀಸ್
ಇ) ಕ್ರೋಮಿಯಂ

6) ಕೆಲವಾರು ಶಿಲೆಗಳಲ್ಲಿ ಅವುಗಳಲ್ಲಿನ ಲೋಹಾಂಶ - ಖನಿಜಾಂಶಗಳು ವಿಧ ವಿಧ ನಿರ್ದಿಷ್ಟ ವರ್ಣಗಳ ಗೆರೆ, ಮಚ್ಚೆ, ಪಚ್ಚೆಗಳ ಗಾಢ ಚಿತ್ತಾರಗಳನ್ನು ಮೂಡಿಸುತ್ತವೆ (ಚಿತ್ರ - 5) ಇಂತಹ ಚಿತ್ತಾರಗಳಲ್ಲಿ ಕೆಂಪು ಬಣ್ಣದ ಚಿತ್ತಾರ ಮೂಡಿಸುವ ಲೋಹ ಯಾವುದು?
ಅ) ಅಐಟಾನಿಯಂ ಬ) ಅಲ್ಯೂಮಿನಿಯಂ
ಕ) ಕಬ್ಬಿಣ ಡ) ತಾಮ್ರ

7) ಬೈಜಿಕ ವಿದ್ಯುತ್ ಸ್ಥಾವರವೊಂದರ ದೃಶ್ಯ (ಚಿತ್ರ - 6) ರಲ್ಲಿದೆ. ಇಂತಹ ಸ್ಥಾವರಗಳಲ್ಲಿ ಬಳಸುವ `ಇಂಧನ' ಲೋಹ ಯಾವುದು?
ಅ) ರೇಡಿಯಂ ಬ) ಸೀಸಿಯಂ
ಕ) ಥೋರಿಯಂ ಡ) ಯುರೇನಿಯಂ

8) ವ್ಯೊಮ ನೌಕೆಗಳಲ್ಲಿ ವಿದ್ಯುದುತ್ಪಾದನೆಗೆ (ಚಿತ್ರ - 8) ಇರಿಸಲಾಗುವ `ಆರ್.ಟಿ.ಜಿ.' ಗಳಲ್ಲಿ (ರೇಡಿಯೋ ಆ್ಯಕ್ಟಿವ್ ಥರ್ಮೋ ಎಲೆಕ್ಟ್ರಿಕ್ ಜನರೇಟರ್) ವಿಶಿಷ್ಟ ವಿಕಿರಣ ಪಟು ಲೋಹವೊಂದನ್ನು ಬಳಸಲಾಗುತ್ತದೆ. ಆ ಲೋಹ ಯಾವುದು ಗೊತ್ತೇ?
ಅ) ಪ್ಲುಟೋನಿಯಂ ಬ) ಯುರೇನಿಯಂ
ಕ) ರೇಡಿಯಂ ಡ) ಥೋರಿಯಂ

9) ಬಾಣ - ಬಿರುಸುಗಳಲ್ಲಿ ನಾನಾ ವಿಧಗಳ ಉಜ್ವಲ ಮನಮೋಹಕ ಬಣ್ಣಗಳನ್ನು (ಚಿತ್ರ - 9) ಹೊಮ್ಮಿಸಲು ಬೇರೆ ಬೇರೆ ನಿರ್ದಿಷ್ಟ ಲೋಹಗಳ ಪುಟಿ ಮತ್ತು ತುಣುಕುಗಳನ್ನು ಮದ್ದಿನ ಜೊತೆಗೆ ಬಳಸಲಾಗುತ್ತದೆ - ಅದು ನಿಮಗೂ ಗೊತ್ತು ತಾನೇ? ಹಾಗಾದರೆ ಈ ಕೆಳಗಿನ ವರ್ಣಗಳಿಗಾಗಿ ಉಪಯೋಗಿಸುವ ಲೋಹಗಳು ಯಾವುವು?
ಅ) ಉಜ್ಜಲ ಬಿಳಿ ಬಣ್ಣಬ) ಬಂಗಾರ ಹಳದಿ

10) ನಮ್ಮ ಭೂಮಿಯ ಒಳ ರಚನೆಯನ್ನು - ಪದರ ಸ್ವರೂಪವನ್ನು - ತೋರಿಸುವ ಚಿತ್ರವನ್ನು (ಚಿತ್ರ - 10) ಗಮನಿಸಿ. ಇಲ್ಲಿ ಹೆಸರಿಸಿರುವ ಪದರಗಳಲ್ಲಿ ಅತ್ಯಂತ ಅಧಿಕ ಪ್ರಮಾಣದಲ್ಲಿರುವ ಲೋಹಗಳು ಗೊತ್ತೇ?
ಅ) ತೊಗಟೆ  ಬ) ಭೂಗರ್ಭ

11) ಎಲ್ಲೆಲ್ಲೂ ಜನಪ್ರಿಯವಾಗಿರುವ ಬಳಕೆಯಲ್ಲಿರುವ ವಿದ್ಯುದ್ದೀಪಗಳಾದ`ಬಲ್ಬ್' ಮತ್ತು `ಸಿ.ಎಫ್.ಎಲ್.'(ಚಿತ್ರ - 11) ರಲ್ಲಿವೆ.
ಅ) ವಿದ್ಯುತ್ ಬಲ್ಬ್‌ನ ಬೆಳಕು ಕೊಡುವ ಲೋಹ ಯಾವುದು?
ಬ) ಸಿ.ಎಫ್.ಎಲ್. ನಲ್ಲಿರುವ ಅಪಾಯಕರ ಲೋಹ ಯಾವುದು?

12) ವಿಶಿಷ್ಟ ಲೋಹ `ಪಾದರಸ' ಮತ್ತು ಅದರ ಅದಿರು `ಸಿನಬಾರ್' (ಚಿತ್ರ - 12) ರಲ್ಲಿವೆ. ಈ ಕೆಳಗಿನ `ಲೋಹಗಳು - ಅದಿರುಗಳು' - ಸರಿ ಹೊಂದಿಸಬಲ್ಲಿರಾ?
1) ತಾಮ್ರ ಅ) ಬಾಕ್ಸೈಟ್
2) ಸೀಸ ಬ) ಪಿಚ್‌ಬ್ಲೆಂಡ್
3) ಅಲ್ಯೂಮಿನಿಯಂ ಕ) ಕ್ಯಾಸಿಟರೈಟ್
4) ತವರ ಡ) ಮ್ಯಾಲಕೈಟ್
5) ಯುರೇನಿಯಂ ಇ) ಗೆಲೀನಾ

13) ಅಮೂಲ್ಯ ಲೋಹ `ಬೆಳ್ಳಿ'ಯ ಒಂದು ಶುದ್ಧ ಗಟ್ಟಿ (ಚಿತ್ರ - 13) ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಬೆಳ್ಳಿಯ ಗುಣ ಅಲ್ಲ?
ಅ) ಅದು ಸರ್ವೋತ್ತಮ ವಿದ್ತುದ್ವಾಹಕ
ಬ) ಅದು ಸಮರ್ಥ ಜಲಶುದ್ಧಿಕಾರಕ
ಕ) - ಇದು ಬೆಳ್ಳಿಯ ಗುಣ ಅಲ್ಲ.

ಉತ್ತರಗಳು:-
1) ಕ - 70
2) ಅ - ಕ್ಯಾಲ್ಸಿಯಂ
3) 1 - ಕ; 2 - ಇ; 3 - ಡ; 4 - ಬ;5 - ಕ; 6 - ಅ; 7 - ಅ
4) ಬ - ತಾಮ್ರ
5) ಹಸಿರು - ಕೋಬಾಲ್ಟ್; ಕೆಂಪು - ಕ್ರೋಮಿಯಂ
6) ಕ - ಕಬ್ಬಿಣ
7) ಡ - ಯುರೇನಿಯಂ
8) ಅ - ಪ್ಲುಟೋನಿಯಂ
9) ಅ - ಮೆಗ್ನೀಸಿಯಂ; ಬ - ಕಬ್ಬಿಣ
10) ಅ - ಅಲ್ಯೂಮಿನಿಯಂ; ಬ - ಕಬ್ಬಿಣ
11) ಅ - ಟಂಗ್‌ಸ್ಟನ್; ಬ - ಪಾದರಸ
12) 1 - ಡ; 2 - ಇ; 3 - ಅ; 4 - ಕ; 5 - ಬ
13) `ಕ' - ಇದು ಬೆಳ್ಳಿಯ ಗುಣ ಅಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT