1) ವಿಚಿತ್ರ ಉಡುಗೆಯ ಸುಪ್ರಸಿದ್ಧ ಪ್ರಾಣಿ ‘ಜೀಬ್ರಾ’ ಜೋಡಿಯೊಂದು (ಚಿತ್ರ – 1) ರಲ್ಲಿದೆ. ಜೀಬ್ರಾದ ನೈಸರ್ಗಿಕ ನೆಲೆ ಇವುಗಳಲ್ಲಿ ಯಾವುದು?
ಅ) ಯೂರೋಪ್
ಬ) ಆಫ್ರಿಕ
ಕ) ಉತ್ತರ ಅಮೆರಿಕ
ಡ) ಆಸ್ಟ್ರೇಲಿಯಾ
2) ನಕ್ಷತ್ರಗಳು ವಿಧ ವಿಧ ಬಣ್ಣ; ನೀಲಿ, ಬಿಳಿ, ಹಳದಿ, ಕೆಂಪು ಇತ್ಯಾದಿ, ಹೌದಲ್ಲ? ನಕ್ಷತ್ರಗಳ ಬಣ್ಣ (ಚಿತ್ರ – 2) ಇವುಗಳಲ್ಲಿ ಯಾವ ಅಂಶವನ್ನು ಅವಲಂಬಿಸಿವೆ?
ಅ) ಅವುಗಳ ದ್ರವ್ಯರಾಶಿ
ಬ) ಅವುಗಳ ಆಂತರಿಕ ಉಷ್ಣತೆ
ಕ) ಅವುಗಳ ವಯಸ್ಸು
ಡ) ಅವುಗಳ ಮೇಲ್ಮೈ ಉಷ್ಣತೆ
3) ಸಾಗರಗಳಲ್ಲಿ ಅಲೆಗಳು ಅವಿರತ (ಚಿತ್ರ – 3) ಕಡಲಲ್ಲಿ ಅಲೆಗಳ ನಿರಂತರ ಹುಟ್ಟಿಗೆ ಅತ್ಯಂತ ಪ್ರಮುಖ ಕಾರಣ ಯಾವುದು?
ಅ) ಚಲಿಸುವ ಗಾಳಿ
ಬ) ಭೂ ಸ್ವಭ್ರಮಣ
ಕ) ಸೂರ್ಯ – ಚಂದ್ರರ ಆಕರ್ಷಣೆ
ಡ) ಸಾಗರ ಪ್ರವಾಹಗಳು
4) ಶಬ್ದದ ವೇಗಕ್ಕಿಂತ ಅಧಿಕ ವೇಗದಲ್ಲಿ ಹಾರಬಲ್ಲ ವಿಮಾನ, ಎಂದರೆ ಸೂಪರ್ ಸಾನಿಕ್ ವಿಮಾನವೊಂದು (ಚಿತ್ರ – 4) ರಲ್ಲಿದೆ. ಸಮುದ್ರಮಟ್ಟದಲ್ಲಿ ಶಬ್ದದ ವೇಗ ಎಷ್ಟು?
ಅ) ಸಕೆಂಡ್ಗೆ 241 ಮೀ.
ಬ) ಸಕೆಂಡ್ಗೆ 330 ಮೀ.
ಕ) ಸಕೆಂಡ್ಗೆ 11 ಕಿ. ಮೀ.
ಡ) ಸಕೆಂಡ್ಗೆ 29 ಕಿ.ಮೀ.
5) ಹಕ್ಕಿಯಂತೆ ಕೊಕ್ಕು, ಮೊಟ್ಟೆ ಇಡುವ ಸಂತಾನ ಕ್ರಮ – ಹಾಗಿದ್ದೂ ಸ್ತನಿ ವರ್ಗಕ್ಕೆ ಸೇರಿದ ವಿಚಿತ್ರ, ವಿಶಿಷ್ಟ, ವಿಖ್ಯಾತ ಪ್ರಾಣಿ (ಚಿತ್ರ – 5) ರಲ್ಲಿದೆ.
ಅ) ಈ ಪ್ರಾಣಿ ಯಾವುದು?
ಬ) ಇದರ ವಾಸ ಯಾವ ಭೂ ಖಂಡಕ್ಕೆ ಸೀಮಿತ?
6) ಕೃಷಿ ಬೆಳೆಗೆ ಕೀಟನಾಶಕ ವಿಷವನ್ನು ಸಿಂಪಡಿಸುತ್ತಿರುವ ದೃಶ್ಯ (ಚಿತ್ರ – 6) ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಕೀಟನಾಶಕ ವಿಷ ಅಲ್ಲ?
ಅ) ಮೆಟಾಸಿಡ್
ಬ) ಅಮೋನಿಯಂ ನೈಟ್ರೇಟ್
ಕ) ಎಂಡೋ ಸಲ್ಫಾನ್
ಡ) ರೋಗರ್
7) ಶುದ್ಧ ಧವಳ ವರ್ಣದ, ಸುಂದರ ರೂಪದ ಹಕ್ಕಿಯೊಂದು (ಚಿತ್ರ – 7) ರಲ್ಲಿದೆ. ಈ ಕೆಳಗೆ ಪಟ್ಟಿ ಮಾಡಿರುವ ಪ್ರಾಣಿಗಳನ್ನೂ, ಅವುಗಳ ವರ್ಗಗಳನ್ನೂ ಸರಿಹೊಂದಿಸಬಲ್ಲಿರಾ?
1) ಹಸಿರು ಮಾಂಬಾ ಅ) ಮೀನು
2) ಬೂಬಿ ಬ) ಜೇಡ
3) ಸಾರ್ಡ್ವೆನ್ ಕ) ಹಕ್ಕಿ
4) ಬ್ಲ್ಯಾಕ್ ವಿಡೋ ಡ) ಕೀಟ
5) ಬೆಲ್ಯಾಗಾ ಇ) ಸರ್ಪ
6) ಮೋನಾರ್ಕ್ ಈ) ಸ್ತನಿ
8) ಆದಿ ಮಾನವ ಕಲಾವಿದರು ರಚಿಸಿದ ಚಿತ್ರ ಕಲೆಯ ದೃಶ್ಯವೊಂದು (ಚಿತ್ರ – 8) ರಲ್ಲಿದೆ. ಈ ವರೆಗೆ ಪತ್ತೆಯಾಗಿರುವ ಚಿತ್ರ ಕಲಾಕೃತಿಯ ಅತ್ಯಂತ ಪ್ರಾಚೀನ ಕಾಲ ಯಾವುದು?
ಅ) 30 ಸಾವಿರ ವರ್ಷ ಹಿಂದೆ
ಬ) 50 ಸಾವಿರ ವರ್ಷ ಹಿಂದೆ
ಕ) ಒಂದು ಲಕ್ಷ ವರ್ಷ ಹಿಂದೆ
ಡ) ಒಂದೂವರೆ ಲಕ್ಷ ವರ್ಷ ಹಿಂದೆ
9) ಧರೆಯ ಭೂಖಂಡಗಳು ನಿಶ್ಚಲವಲ್ಲ; ಅವುಗಳ ನೆಲೆ ಬದಲಾಗುತ್ತಲೇ ಇದೆ (ಚಿತ್ರ – 9) ಈ ವಿದ್ಯಮಾನವನ್ನು ಗುರುತಿಸಿದ ವಿಜ್ಞಾನಿ ಯಾರು?
ಅ) ಐಸಾಕ್ ನ್ಯೂಟನ್
ಬ) ಆಲ್ಫ್ರೆಡ್ ವಿಜೆನರ್
ಕ) ಥಾಮಸ್ ಎಡಿಸನ್
ಡ) ಆಲ್ಬರ್ಟ್ ಐನ್ಸ್ಟೀನ್
10) ಮೃದ್ವಂಗಿ ನಿರ್ಮಿತ ಕಡಲ ಚಿಪ್ಪೊಂದು (ಚಿತ್ರ – 10) ರಲ್ಲಿದೆ. ಮೃದ್ವಂಗಿಗಳು ನಿರ್ಮಿಸುವ ಚಿಪ್ಪಿನ ದ್ರವ್ಯ ಯಾವುದು?
ಅ) ಕ್ಯಾಲ್ಸಿಯಂ ಕಾರ್ಬನೇಟ್
ಬ) ಕ್ಯಾಲ್ಸಿಯಂ ಬೈಕಾರ್ಬನೇಟ್
ಕ) ಕ್ಯಾಲ್ಸಿಯಂ ಸಲ್ಫೇಟ್
ಡ) ಸೋಡಿಯಂ ಕಾರ್ಬನೇಟ್
11) ಎಲ್ಲ ಸರ್ಪಗಳೂ ‘ಸೀಳು ನಾಲಿಗೆ’ ಪಡೆದಿವೆ, ಹೌದಲ್ಲ? (ಚಿತ್ರ – 11) ಸರ್ಪಗಳಂತೆಯೇ ಸೀಳು ನಾಲಿಗೆಯನ್ನು ಹೊಂದಿರುವ ಪ್ರಾಣಿಗಳನ್ನು ಈ ಪಟ್ಟಿಯಲ್ಲಿ ಗುರುತಿಸಿ:
ಅ) ಇಗ್ಬಾನಾ
ಬ) ಥಾರ್ನೀ ಡೆವಿಲ್
ಕ) ಮಾನಿಟರ್ ಲಿಜಾರ್ಡ್
ಡ) ಊಸರವಳ್ಳಿ
ಇ) ಕೊಮೊಡೋ ಡ್ರಾಗನ್
ಈ) ಲ್ಯೆಬಿಗೇಟರ್
12) ಕೆಲವಾರು ಉತ್ತಮ ‘ಶಿಲಾಯುಧ, ಶಿಲಾಸಲಕರಣೆ’ಗಳನ್ನು ಮೊದಲಿಗೆ ತಯಾರಿಸಿದ ಪ್ರಾಚೀನ ಮಾನವ ಪ್ರಭೇದ (ಚಿತ್ರ – 12) ರಲ್ಲಿದೆ. ಈ ಪ್ರಭೇದದ ಹೆಸರೇನು?
ಅ) ಹೋಮೋ ನಿಯಾಂಡರ್ ಥಾಲೆನ್ಸಿಸ್
ಬ) ಹೋಮೋ ಇರೆಕ್ಟರ್
ಕ) ಹೋಮೋ ಸೇಪಿಯನ್್ಸ
ಡ) ಹೋಮೋ ಹ್ಯಾಬಿಲಿಸ್
13) ವಿಚಿತ್ರ, ವಿಸ್ಮಯಕರ ರೂಪಗಳನ್ನು ಪಡೆದಿರುವ ದ್ವಿವಿಧ ಮತ್ಸ್ಯಗಳು (ಚಿತ್ರ – 13 ಮತ್ತು 14) ರಲ್ಲಿವೆ. ಈ ಕೆಳಗಿನ ಪಟ್ಟಿಯಲ್ಲಿ ಚಿತ್ರ – 13 ರಲ್ಲಿರುವ ಮೀನು ಯಾವುದು ಮತ್ತು ಯಾವುವು ಮತ್ಸ್ಯಗಳಲ್ಲ?
ಅ) ವ್ಹೇಲ್ ಶಾರ್ಕ್
ಬ) ಚಿಕ್ಲಿಡ್
ಕ) ಸಾಲ್ಮನ್
ಡ) ಮುಳ್ಳು ಹಂದಿ ಮೀನು
ಇ) ಕಟ್ಲ್ ಮೀನು
ಈ) ಬಾವಲಿ ಮೀನು
ಉ) ನಕ್ಷತ್ರ ಮೀನು.

ಉತ್ತರಗಳು
1. ಬ) ಆಫ್ರಿಕ
2. ಡ) ಮೇಲ್ಮೈ ಉಷ್ಣತೆ
3. ಅ) ಬೀಸುವ ಗಾಳಿ
4. ಬ) 330 ಮೀಸಕೆಂಡ್
5. ಅ) ‘ಪ್ಲಾಟಿಪಸ್’;
ಬ) ಆಸ್ಟ್ರೇಲಿಯಾ
6. ಬ) ಅಮೋನಿಯಂ ನೈಟ್ರೇಟ್
7. 1–ಇ; 2–ಕ; 3–ಅ; 4–ಬ;
5–ಈ; 6–ಡ
8. ಕ) 1 ಲಕ್ಷ ವರ್ಷ
9. ಬ) ವಿಜೆನರ್
10. ಅ) ಕ್ಯಾಲ್ಷಿಯಂ ಕಾರ್ಬನೇಟ್
11. ಕ ಮತ್ತು ಇ
12. ಬ) ಹೋಮೋ ಇರೆಕ್ಟಸ್
13. ಚಿತ್ರ – 13; ಮುಳ್ಳು ಹಂದಿ ಮೀನು, ಇ) ಮತ್ತು ಉ) ಮತ್ಸ್ಯಗಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.