ಅಮ್ಮ, ಬಾಲ್ಯದಲ್ಲಿ ನನ್ನ ತಲೆಯ ನಿನ್ನ ಕೈಗಳಲ್ಲಿ ಸವರುತ್ತಿದ್ದೆಯಲ್ಲ ಹಾಗೆ ಇಂದೂ ನನ್ನ ತಲೆ, ಕುತ್ತಿಗೆ ಮತ್ತು ಎದೆಯನ್ನು ಮೃದುವಾಗಿ ಮುಟ್ಟುವೆಯಾ... ನನಗೆಂದು ಉಳಿದಿರುವುದು ಇಂದು ನೀನು ಮಾತ್ರ. ನನ್ನ ಬದುಕಿನ ಈ ಕೊನೆ ಗಳಿಗೆಯಲ್ಲಿ ನಾನು ನೋಡಲು ಬಯಸುವ ಏಕೈಕ ಮುಖ ನಿನ್ನದು. ಕಳೆದ ಕೆಲ ವರ್ಷಗಳಲ್ಲಿ ನನ್ನ ಮನೆ, ಮಡದಿ, ಸ್ನೇಹಿತರು ಎಂದು ಯಾರನ್ನೂ ನನ್ನಿಂದ ನೋಡಲಾಗಲಿಲ್ಲ; ಅಷ್ಟೇ ಯಾಕೆ, ನನ್ನನ್ನೇ ನಾನು ಸರಿಯಾಗಿ ನೋಡಿಕೊಳ್ಳಲಾಗಿರಲಿಲ್ಲ.

ನನಗೆ ಗಾಲ್ಫ್ ಆಡುವುದೆಷ್ಟು ಇಷ್ಟ ಎಂದು ನೀವು ಬಲ್ಲಿರಿ. ಆದರೆ ಕಳೆದ ಐದು ವರ್ಷಗಳಲ್ಲಿ ನಾ ಒಮ್ಮೆಯೂ ಗಾಲ್ಫ್ ಆಡಲಾಗಲಿಲ್ಲ! ನನ್ನ ಮುಖವ ನೋಡಿಕೊಳ್ಳಲೂ ನನಗೆ ಸಮಯವಿರಲಿಲ್ಲ. ಹೊರಡುವ ಆತುರದಲ್ಲಿ ಕನ್ನಡಿಯ ಮುಂದೆ ನಿಂತು ಟೈ ಸರಿಪಡಿಸುತ್ತ ಪ್ಯಾಂಟಿಗೂ ಶರ್ಟಿಗೂ ಹೊಂದಾಣಿಕೆಯಾಗುತ್ತಿದೆಯೆ ಎಂದು ನೋಡಿಕೊಳ್ಳುತ್ತಿದ್ದೆ, ಅಷ್ಟೆ. ನನ್ನ ಮುಖವನ್ನು ನೋಡಿಕೊಂಡಿದ್ದರೂ, ನೋಡು ಪದದ ನಿಜ ಅರ್ಥದಲ್ಲಲ್ಲ. ನನ್ನ ಮುಖವನ್ನು ಮಾತ್ರವಲ್ಲ, ದಾರಿಯಲ್ಲಿ ಸಿಗುವ ಮುಖಗಳಿಗೂ ಇದೇ ಗತಿ.

ಜನ ನನ್ನೊಂದಿಗೆ ಮಾತನಾಡುತ್ತಿದ್ದರೂ ಆ ಮಾತುಗಳ ಕೇಳಿಸಿಕೊಂಡಿಲ್ಲ; ಅವರುಗಳ ಧ್ವನಿ ಎಷ್ಟೇ ಗಾಢವಾಗಿದ್ದರೂ ಸರಿಯೇ. ನಿಜ ಹೇಳಬೇಕೆಂದರೆ, ಕಾರಿನ ದೀರ್ಘ ಹಾರನ್ ಸದ್ದನ್ನೂ ಕೇಳಿಸಿಕೊಂಡ ನೆನಪಿಲ್ಲ. ಈ ಕಾರಣಕ್ಕೆ ನಾ ವಾಕಿಂಗ್ ಹೋಗುವುದನ್ನೂ ಕೈಬಿಟ್ಟೆ. ಆ ಹಾರ್ನ್ ಸದ್ದು ಕೇಳಿಸದ್ದರಿಂದ ಎಷ್ಟೋ ಬಾರಿ ಕಾರು ನನ್ನನ್ನು ಹಾಯಿಸಿ ಬೀಳಿಸುವಂತಾಗಿತ್ತು.

ಅಮ್ಮೋ, ಕಿವಿಕಣ್ಣುಗಳಿಲ್ಲದ ಮನುಷ್ಯನಂತೆ ನಾ ಬದಲಾದೆ; ಈ ಜಗತ್ತಿನಲ್ಲೇ ನಾನು ಇಲ್ಲ ಎನ್ನುವಷ್ಟು. ಹಾಗಾದರೆ ನಾನೆಲ್ಲಿ ಬದುಕುತ್ತಿದ್ದೇನೆ? ನಾನೇನೂ ಸತ್ತು ಹೋಗಿಲ್ಲ. ನನ್ನ ಕುರಿತಾದ ಸಾವಿನ ಸುದ್ದಿಗಳು ಪತ್ರಿಕೆಗಳಲ್ಲಿ ಬಂದಿಲ್ಲ. ನನ್ನಂತಹ ಉನ್ನತ ಸ್ಥಾನದಲ್ಲಿರುವಾತನ ಸಾವು ಹೀಗೆ ಸದ್ದು ಹೊರಡಿಸದೆ ಬರಿದೇ ಹೋಗುವುದಿಲ್ಲ. ಪತ್ರಿಕೆಗಳ ಮುಖಪುಟದಲ್ಲಿ ಅಚ್ಚಾಗದೆ, ದೇಶದ ಪ್ರಧಾನಮಂತ್ರಿ ಮೊದಲ್ಗೊಂಡು ಪ್ರತಿಯೊಬ್ಬ ನಾಯಕರೂ ಸಾಲಾಗಿ ನಿಂತಂತಹ ಅದ್ದೂರಿ ಪ್ರದರ್ಶನಕ್ಕೆ ಚಾಲೂ ನೀಡದೆ ನನ್ನಂತಹವನೊಬ್ಬ ಮರಣ ಹೊಂದಲು ಸಾಧ್ಯವೆ? ಇಂತಹ ಮರಣ ಪ್ರದರ್ಶನಗಳ ಕಂಡು ಆ ಶವಪೆಟ್ಟಿಗೆಯೊಳಗಿನ ಮನುಷ್ಯ ನಾನಾಗಬಾರದಿತ್ತೆ ಎಂದು ಹಪಹಪಿಸಿದ್ದೇನೆ.

ಈ ಮುಂಚೆ ನಾ ಶವಪೆಟ್ಟಿಗೆಯೊಳಗೆ ಇದ್ದಿಲ್ಲವಾದ್ದರಿಂದ, ನಾನಿನ್ನೂ ನಿಮ್ಮ ಲೋಕದಲ್ಲೇ ಬದುಕಿದ್ದೇನೆ ಎಂದಾಯ್ತು. ಆದರೆ ಇವೆಲ್ಲವುಗಳಿಗಿಂತ ಮುಖ್ಯವಾದ ಕೆಲವು ವಿಷಯಗಳ ಹೇಳಲು ನಾ ಆಸಕ್ತನಾಗಿದ್ದೆ. ಕೆಲವು ಸಮಯಗಳಲ್ಲಿ ನಾ ಕೈಕಾಲುಗಳ ಚಲಿಸಲಾಗದಷ್ಟು ನಿತ್ರಾಣಗೊಂಡಿರುತ್ತೇನೆ; ಆದರೆ ಆಗ ನನ್ನ ಮಿದುಳು ಕೆಲಸ ಮಾಡುತ್ತಿರುತ್ತದೆ. ಇದಕ್ಕೆ ವಿರುದ್ಧವಾದ ಸಮಯಗಳಲ್ಲಿ ಆಯಾಸಗೊಂಡ ನನ್ನ ಮಿದುಳು ಯೋಚಿಸುವುದನ್ನು ನಿಲ್ಲಿಸಿರುತ್ತದೆ; ಆದರೆ ದೇಹ ತನ್ನ ಕಾರ್ಯವ ನಿರ್ವಹಿಸುತ್ತಿರುತ್ತದೆ- ಅದರ ಪಾಡಿಗೆ ಅದು ಕಚೇರಿಗೆ ಹೋಗುತ್ತದೆ; ಸಭೆ ಉತ್ಸವಗಳಲ್ಲಿ ಭಾಗವಹಿಸುತ್ತದೆ; ಸಮಾರಂಭಗಳ ಅಧ್ಯಕ್ಷತೆ ವಹಿಸುತ್ತದೆ; ವಿಮಾನ ನಿಲ್ದಾಣಕ್ಕೆ ಹೋಗಿ ಸರ್ಕಾರಿ ಅತಿಥಿಗಳ ಸ್ವಾಗತಿಸುತ್ತದೆ; ಕಾರ್ಯ ನಿಮಿತ್ತ ಹೊರದೇಶಗಳಿಗೂ ಹಾರುತ್ತದೆ. ಮಿದುಳಿನ ಕಿಂಚಿತ್ತೂ ಸಹಕಾರವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಗಳಿಗೆಯಲ್ಲಿ ಈ ದೇಹವನ್ನು ನೋಡಿ ನಾ ಅಚ್ಚರಿಪಟ್ಟಿದ್ದೇನೆ.

ಹೌದು ಅಮ್ಮ, ಅಂತಹ ಸಮಯಗಳಲ್ಲಿ ನಾ ತುಸು ಭಯಗೊಂಡಿರುತ್ತೇನೆ; ಮುಖ್ಯವಾಗಿ ಕೆಲವು ಮುಖ್ಯ ಮೀಟಿಂಗುಗಳಲ್ಲಿ, ಗಮನವನ್ನೆಲ್ಲ ಕೇಂದ್ರೀಕರಿಸುವ ಹೊತ್ತಲ್ಲಿ, ಆ ಭಯ ನನ್ನನ್ನಾವರಿಸುತ್ತದೆ. ನನ್ನ ಭಾಷೆಯಲ್ಲಿ, ಮುಖ್ಯ ಮೀಟಿಂಗ್ ಎಂದರೆ ನನ್ನ ಮೇಲಿನ ಮನುಷ್ಯರ ನೇತೃತ್ವದಲ್ಲಿ ಜರುಗುವ ಸಭೆಗಳು. ನಾನು ಮಂತ್ರಿಯಾದ ದಿನದಿಂದಲೂ ನನ್ನ ಮೇಲಿನವರ ಕಂಡರೆ ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಆ ದ್ವೇಷವನ್ನು ಅವರೆದುರು ತೋರಿಸಿಕೊಳ್ಳದೆ ಅವಿತಿಡುವುದನ್ನು; ಅದನ್ನು ನನ್ನ ಮಡದಿಯ ಮೇಲೂ, ಕಚೇರಿಯಲ್ಲಿನ ನನ್ನ ಕೆಳಗಿನವರ ಮೇಲೂ ಪ್ರಯೋಗಿಸಲು ಕಲಿತುಕೊಂಡೆ. ನನ್ನ ತಂದೆಯೂ ಹಾಗೆಯೇ ಅಲ್ಲವೆ ವರ್ತಿಸುತ್ತಿದ್ದುದು! ಆರಂಭದಲ್ಲಿ ಮೇಲಿನ ಮಂತ್ರಿಗಳು ಎಂದಿಲ್ಲದೆ, ಒಬ್ಬ ಸಾಧಾರಣ ಸೆಕ್ಷನ್ ಆಫೀಸರ್ ಆಗಿದ್ದರೂ ಸರಿ ಯಾರ ಮೇಲೂ ನನ್ನ ದ್ವೇಷವನ್ನು ವ್ಯಕ್ತಪಡಿಸಿದ್ದಿಲ್ಲ.

ಹೀಗಿರುವಾಗ, ನನಗಿಂತ ಮೇಲಿನ ಮಂತ್ರಿಯೇ ಈ ನಾಡಿನ ಅಧ್ಯಕ್ಷ ಎಂದಾದಾಗ ನಾನು ಹೇಗೆ ಬದಲಾಗಿರಬಹುದು ಎಂಬುದನ್ನು ಒಂದು ಚಣ ಚಿಂತಿಸಿ. ಕುದಿಯುವ ನನ್ನ ತುಡಿತಗಳ ತಡೆದೂ ತಡೆದು ನಾನು ಯಾವ ಹಂತಕ್ಕೆ ತಲುಪಿರಬಹುದು, ನೀವೇ ಯೋಚಿಸಿನೋಡಿ. ಅಧ್ಯಕ್ಷರ ಮುಂದೆ ನಾನು ನನ್ನ ಗಮನವನ್ನೆಲ್ಲ ಸಾಣೆ ಹಿಡಿದು ಕಣ್ಣ ತೆರೆದು ಕೂತಿರುತ್ತೇನೆ. ನನ್ನಿಂದ ಉತ್ತರಿಸಲಾಗದ್ದನ್ನು ಅವರು ಕೇಳಬಹುದು, ಅಥವ ನಾನು ಸರಿಯಾದ ಉತ್ತರವನ್ನೇ ನೀಡಿದರೂ ಅದು ಅವರು ಬಯಸಿದ ಉತ್ತರವಾಗಿರಲಾರದು.

ಅಮ್ಮ, ಇದೇ ನಾವು ರಾಜಕೀಯದಲ್ಲಿರುವವರು ಕಲಿಯಬೇಕಾದ ಮೊದಲ ಪಾಠ. ಸರಿಯಾದ ಉತ್ತರ ಎನ್ನುವುದು ಸದಾ ನಾಯಕ ಬಯಸಿದ್ದೇ ಆಗಿರಬೇಕೆಂದೇನೂ ಇಲ್ಲ; ಆದರೆ ನಾಯಕ ಬಯಸುವ ಉತ್ತರ ಎಂದಿಗೂ ಸರಿ ಉತ್ತರ ಆಗಿರಲೇಬೇಕು. ಬುದ್ಧಿವಂತನೊಬ್ಬನಿಗೆ ನೈಜ ಸತ್ಯ ಮತ್ತು ಸುಳ್ಳು ಸತ್ಯಗಳ ಬೇರ್ಪಡಿಸುವ ಕಲೆ ಗೊತ್ತಿರಬೇಕು. ಅದೆಷ್ಟು ಕಷ್ಟ ಗೊತ್ತಾ ಅಮ್ಮ? ಈ ಜಗತ್ತಿನಲ್ಲೇ ಅತಿ ಕಷ್ಟದ ಕೆಲಸ ಅಂದರೆ ಅದುವೇ.

ನಾಯಕನನ್ನು ಭೇಟಿಯಾಗುವಾಗಲೆಲ್ಲ ನನ್ನ ಮೈಮನಸ್ಸುಗಳನ್ನೆಲ್ಲ ಅತಿ ಜಾಗೂರಕತೆಯಿಂದ ಇಟ್ಟುಕೊಂಡಿರುತ್ತೇನೆ- ಎಡಗೈ ನನ್ನ ತೊಡೆಯ ಮೇಲಿದ್ದರೆ, ಪೆನ್ನನ್ನು ಹಿಡಿದುಕೊಂಡಿರುವ ಬಲಗೈ ನಾಯಕರ ಒಂದು ಚಿಕ್ಕ ಚಲನವಲನವನ್ನೂ ಅಕ್ಷರ ರೂಪಕ್ಕೆ ಬದಲಾಯಿಸುತ್ತಿರುತ್ತದೆ. ನಾಯಕರ ಬಲಗಣ್ಣು ಎಡಗಣ್ಣುಗಳ ಅದುರುವಿಕೆಗಳಿಗೆ ವಿಶೇಷ ಅರ್ಥಗಳನ್ನು ಕಂಡುಕೊಂಡಿದ್ದೇನೆ. ನನ್ನ ಮಿದುಳು, ಕಣ್ಣು ಕಿವಿಗಳೆಲ್ಲವು ನಾಯಕರ ಪ್ರತಿಯೊಂದು ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ.

ಹೌದು ಅಮ್ಮ, ಅಂತಹ ಕ್ಷಣಗಳಲ್ಲಿ ನನ್ನ ಮೈಮನಗಳೆಲ್ಲ ರಾಡಾರ್ ತಂತಿಯಾಗಿ ಮಾರ್ಪಟ್ಟಿರುತ್ತವೆ. ಅದರಲ್ಲೂ, ನಾಯಕರ ಸನಿಹ ನಿಂತಿರುವಾಗ ನನ್ನ ಕಿಬ್ಬೊಟ್ಟೆಯ ನರಗಳೆಲ್ಲ ಕರೆಂಟ್ ಕಂಬಿಗಳ ಹಿಡಿದಿರುವಂತೆ ಅದುರುತ್ತಿರುತ್ತವೆ. ಬಲಗೈಯ ಬೆರಳುಗಳು ಕಂಪಿಸುತ್ತಿರುತ್ತವೆ. ಎಡಗೈಯಿಂದ ಬಲಗೈಯನ್ನು ಗಟ್ಟಿಯಾಗಿ ಹೊಟ್ಟೆಗೋ ಎದೆಗೋ ಒತ್ತಿ ಹಿಡಿದರೂ ನಡುಕ ನಿಲ್ಲದು. ಕಾಲುಗಳು ಜೋಮು ಹಿಡಿದು ಕಿಸಿದುಕೊಂಡಿರುತ್ತವೆ. ಕ್ಯಾಮೆರಾದ ಬೆಳಕು ನನ್ನ ಮುಖವನ್ನು ಸ್ಪರ್ಶಿಸುವಾಗ ನನ್ನಿಡೀ ದೇಹ ಕ್ಯಾಮೆರಾದೊಳಕ್ಕೆ ಬೀಳುವಂತೆ ನೋಡಿಕೊಳ್ಳುತ್ತೇನೆ. ಆಗ ತಾನೆ, ಜನ ನನ್ನನ್ನು ಸರಿಯಾಗಿ ನೋಡಲು ಸಾಧ್ಯ! ಅಂತಹ ಸಂದರ್ಭಗಳಲ್ಲಿ ನನ್ನ ಎಡಗೈಯನ್ನು ಬಲಗೈಯ ಹಿಡಿತದಿಂದ ಬಿಡಿಸಿಕೊಳ್ಳಬೇಕೆಂದು ಅಂದುಕೊಳ್ಳುತ್ತೇನೆ.

ಹಾಗೆ ಯತ್ನಿಸುವಾಗೆಲ್ಲ ಕೈಗಳು ವಜೆಯೆನಿಸಲು ಶುರುವಾಗುತ್ತವೆ; ಪಾರ್ಶ್ವವಾಯು ಬಡಿದಂತೆ ನಿಶ್ಚಲಗೊಂಡಿರುತ್ತವೆ. ಹೌದಮ್ಮ, ಅದು ದಿನಪತ್ರಿಕೆಗಳಲ್ಲಿ ನೋಡುವ ನನ್ನ ಅವಮಾನಕರ ಫೋಟೊ. ಪತ್ರಿಕೆ ಮನೆಯವರಿಗೆ ಸಿಗದಂತೆ ಜಾಗ್ರತೆ ವಹಿಸುತ್ತೇನೆ- ಮುಖ್ಯವಾಗಿ ನನ್ನ ಮುದ್ದಿನ ಕೊನೆಯ ಮಗಳಿಗೆ. ಅವಳು ತನ್ನ ಮೃದು ಬೆರಳುಗಳ ನನ್ನ ಫೋಟೊ ಮೇಲಿಟ್ಟು, ಮಮ್ಮಿ, ಇದು ಡ್ಯಾಡಿ ಅಲ್ಲ ಎನ್ನುತ್ತಾಳೆ. ಆದರವಳ ಹೆತ್ತವಳು ಸರಿಯಾಗಿ ನೋಡು, ಅದು ನಿನ್ನ ಡ್ಯಾಡಿಯೇ... ದೇಶದ ಅಧ್ಯಕ್ಷರೊಂದಿಗೆ ನಿಂತಿದ್ದಾರೆ. ಎಷ್ಟು ದೊಡ್ಡ ಮನುಷ್ಯ ಗೊತ್ತಾ ನಿಮ್ ಡ್ಯಾಡಿ ಎಂದು ಹೇಳುತ್ತಾಳೆ. ಮಡದಿಯ ಆ ಮಾತುಗಳು ನನ್ನ ಕಿವಿಗಳಲ್ಲಿ ಅನುರಣಿಸುತ್ತಿರುತ್ತದೆ.

ಖಂಡಿತವಾಗಲೂ ಅದು ಅವಳ ಒಳ ದನಿಯಲ್ಲ; ನನ್ನ ಮದುವೆಯಾದ ದಿನದಿಂದಲೇ ಅದನ್ನವಳು ಮರೆಮಾಚಿದ್ದಾಳೆ ಎನ್ನುವುದು ನನಗೆ ಗೊತ್ತು. ಆಕೆ ತನ್ನ ನೈಜತೆಯನ್ನು ಗುರುತಿಲ್ಲದ ಪಾತಾಳದಲ್ಲಿ ಮುಚ್ಚಿಟ್ಟಿದ್ದಾಳೆ. ಕ್ಷಯ ರೋಗದಂತೆ ಅದೃಶ್ಯವಾಗಿ ಅವಳೊಳಗೆ ಅದು ಬೆಳೆಯುತ್ತಿರುವುದನ್ನು ಕೆಲವೊಮ್ಮೆ ಗಮನಿಸಿದ್ದೇನೆ. ನನ್ನ ಪ್ರೀತಿಯ ಅಮ್ಮ, ಇದಕ್ಕೇನಂತೀರಿ? ನನ್ನ ಮುದ್ದಿನ ಮಗಳ ಸೂಕ್ಷ್ಮ ಕಣ್ಣುಗಳೆದುರು ನಾನು ತೀವ್ರ ಅವಮಾನಕ್ಕೀಡಾಗಿದ್ದೇನೆ. ಯಾರಿಂದಲೂ- ಸ್ವತಃ ನನ್ನಿಂದಲೂ- ಪತ್ತೆ ಹಚ್ಚಲಾಗದ ನನ್ನ ನೈಜ ರೂಪವನ್ನು ಅವಳ ಕಣ್ಣುಗಳು ಪಟ್ಟನೆ ಗುರುತು ಹಿಡಿಯುತ್ತವೆ.

ಮಗುವೊಂದರ ಮುಂದೆ ಎಲ್ಲಾ ಪರದೆಗಳು ಕಳಚಿ ಬೀಳುತ್ತವೆ ಎಂದು ಹೇಳುತ್ತಿದ್ದಿರಲ್ಲ, ಅದು ನಿಮಗೆ ನೆನಪಿದೆಯೇ? ನೀವು ಹೇಳುತ್ತಿದ್ದುದನ್ನು ಅಂದು ನಾನು ನಂಬುತ್ತಿರಲಿಲ್ಲ. ಆದರೀಗ ಅವು ನನ್ನ ಕಾಡುತ್ತಿವೆ. ನನ್ನ ಮಗಳು ತನ್ನ ಅಗಲಗಣ್ಣುಗಳ ಅಗಲಿಸಿ ನನ್ನ ದಿಟ್ಟಿಸಿ ನೋಡುವಾಗ, ಅವು ಮಗುವೊಂದರ ಕಣ್ಣುಗಳೇ ಎಂದು ಅದುರುತ್ತೇನೆ. ಅಂತಹ ದೀರ್ಘ, ಕಠಿಣ- ಅದರಲ್ಲೂ ತಾನು ಭಯಪಡಬೇಕಾಗಿರುವ ಹಿರಿಯನೆದುರು ನೋಡುವ- ನೋಟ ಸಾಮಾನ್ಯವಾಗಿ ಯಾವೊಂದು ಮಗುವಿಗೂ ಇರುವುದಿಲ್ಲ ಎಂದು ಭಾವಿಸುತ್ತೇನೆ. ಈ ಕುಟುಂಬದ ಯಜಮಾನ- ನನ್ನ ಮಗಳ ತಂದೆ- ನಾನಲ್ಲವೆ? ನನಗಲ್ಲವೇ ಎಲ್ಲರೂ ಅಂಜಬೇಕು? ಗೌರವದಿಂದ ನಡೆದುಕೊಳ್ಳಬೇಕು? ಹೌದು, ಬಾಲ್ಯದಲ್ಲಿ ಈ ಮಾತುಗಳನ್ನು ನಿಮ್ಮಿಂದ ಕೇಳಿಸಿಕೊಂಡಿದ್ದೇನೆ. ಅವು ನನ್ನ ನೆನಪಿನಾಳದಲ್ಲಿ ಅಚ್ಚೊತ್ತಿವೆ. ಇವುಗಳನ್ನೇ ನನ್ನ ಹೆಂಡತಿಗೆ ಹೇಳುತ್ತಿರುತ್ತೇನೆ.

ಈ ಮಾತುಗಳ ಉಚ್ಚರಿಸುವಾಗ ನನ್ನೊಳಗೆ ಶ್ರೀಮದ್ಗಾಂಭೀರ್ಯ ಮೂಡುತ್ತದೆ. ನನ್ನ ಸುತ್ತಲಿನವರಲ್ಲಿ ಅದು ಪ್ರತಿಬಿಂಬ ಪಡೆಯುವುದನ್ನು ಕಾಣುತ್ತೇನೆ. ನಾನು ಹೇಳುವುದರಲ್ಲಿರುವ ಸತ್ಯದ ಮೇಲಿನ ನನ್ನ ಹಿಡಿತ ಬಲಗೊಳ್ಳುತ್ತಲೇ ಹೋಗಿ, ಒಂದು ಹಂತದಲ್ಲಿ, ನಾನು ಹೇಳುವುದೇ ನಿರಂತರ ಸತ್ಯ ಎಂದೂ ಅದನ್ನು ಒಪ್ಪದವರು ನನ್ನನ್ನು ನಿಂದಿಸುತ್ತಿದ್ದಾರೆಂದು ನಂಬತೊಡಗಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಂದ ಇಂದು ಮಂತ್ರಿಯಾಗಿರುವವರೆಗಿನ ಈ ದೀರ್ಘ ಅನುಭವದಲ್ಲಿ ನನ್ನ ಮಾತುಗಳ ತಿರಸ್ಕರಿಸಿದ ಒಬ್ಬನೇ ಒಬ್ಬ ವ್ಯಕ್ತಿ ಇದುವರೆಗಿರಲಿಲ್ಲ. ಆದ್ದರಿಂದಲೇ ಆ ಯಃಕಶ್ಚಿತ್ ಹೆಣ್ಣು ತಂದಿಟ್ಟ ಕೋಪವ ನನ್ನಿಂದ ಸಹಿಸಿಕೊಳ್ಳಲಾಗಲಿಲ್ಲ. ಅವಳು ನಾನು ಹೇಳಿದ್ದೆಲ್ಲವ ತಿರಸ್ಕರಿಸುವ ಮೂಲಕ ನನ್ನ ಸಹನೆಯ ಪರೀಕ್ಷಿಸಿದಳು.

ಅದನ್ನೇ ನನ್ನಿಂದ ಸಹಿಸಲಾಗಲಿಲ್ಲ. ನಾನು ಹೇಳುವುದನ್ನು ಆಕೆ ತಳ್ಳಿ ಹಾಕಿದ್ದಕ್ಕೋ ಅಥವ ಒಬ್ಬ ಸಾಧಾರಣ ದ್ವಿತೀಯ ದರ್ಜೆ ಗುಮಾಸ್ತನ ಮಟ್ಟದ ನೌಕರಳು ಒಬ್ಬ ಮಂತ್ರಿಯ ಜೊತೆ ವಿವಾದಕ್ಕೆ ಇಳಿದಿದ್ದರಿಂದಲೋ, ಅಥವ ಒಬ್ಬ ಗಂಡಸನ್ನು ಯಃಕಶ್ಚಿತ್ ಹೆಣ್ಣೊಬ್ಬಳು ನೇರವಾಗಿ ವಿರೋಧಿಸಿದ್ದಕ್ಕೋ, ಅಥವ ಎಲ್ಲರೂ ನನ್ನನ್ನು ಸನ್ಮಾನ್ಯ ಸಚಿವರೆ ಎಂದು ಸಂಬೋಧಿಸುವಾಗ ಅವಳು ಮಾತ್ರ ತುಚ್ಛವಾಗಿ ಸರ್ ಎಂದು ಕೂಗುವುದಕ್ಕೊ ನಾನು ಕೋಪಿಸಿಕೊಳ್ಳಲಿಲ್ಲ. ಬದಲಿಗೆ, ನನ್ನೊಂದಿಗೆ ಮಾತನಾಡುವಾಗ ಅವಳ ಕಣ್ಣುಗಳು ನೇರವಾಗಿ ನನ್ನ ಕಣ್ಣುಗಳನ್ನು ದಿಟ್ಟಿಸುತ್ತಿದ್ದವು. ಈ ರೀತಿಯ ಘಟನೆ ನನ್ನ ಬದುಕಿನಲ್ಲಿ ನಡೆದಿದ್ದೇ ಇಲ್ಲ. ಕೆಳಗಿನವರ್ಯಾರೂ ನನ್ನ ಕಣ್ಣುಗಳ ನೋಡುತ್ತ ಮಾತನಾಡಿದವರಲ್ಲ. ಆದರೆ ಅವಳು ನನ್ನ ಕಣ್ಣುಗಳನ್ನು ಸೂಕ್ಷ್ಮವಾಗಿ ನೋಡುತ್ತ ಮಾತನಾಡುತ್ತಿದ್ದಳು. ನನ್ನ ಕೋಪ ಏರಿದ್ದು ಈ ಕಾರಣಕ್ಕಾಗಿಯೇ! ಇಷ್ಟಕ್ಕೇ ಮಾತ್ರವಲ್ಲ, ಅವಳು ಹಾಗೆ ನೋಡಲು ಕಾರಣವೇನಿರಬಹುದು ಎನ್ನುವುದ ನನ್ನಿಂದ ಪತ್ತೆ ಹಚ್ಚಲಾಗಲಿಲ್ಲವಲ್ಲ, ಎನ್ನುವುದಕ್ಕೂ. ಎಷ್ಟು ಪೊಗರು ಅವಳಿಗೆ... ನನ್ನ ಹಾಗೆ ನೋಡಲು?

ಅಮ್ಮೋ, ಯಾಕವಳು ನನ್ನ ಹಾಗೆ ನೋಡಿದ್ದು ಎನ್ನುವುದನ್ನು ಪತ್ತೆ ಹಚ್ಚಬೇಕೆಂಬ ಜಿದ್ದು ನನ್ನನ್ನು ಎಲ್ಲೆಲ್ಲಿಗೋ ಅಟ್ಟಿತು. ಆ ದಿನ ಅವಳನ್ನು ಕಚೇರಿಗೆ ಕರೆಯಿಸಿಕೊಂಡೆ. ಬಂದವಳು ನಿಂತೇ ಇದ್ದಳು. ನಾನೂ ಗಮನಿಸದ ಹಾಗೆ ಏನನ್ನೋ ಬರೆಯುತ್ತಲಿದ್ದೆ. ಅವಳನ್ನು ನಿಲ್ಲಿಸಿಕೊಂಡು ಫೋನಿನಲ್ಲಿ ಯಾರೊಂದಿಗೋ ನಗುತ್ತ ಮಾತನಾಡುತ್ತಿದ್ದೆ. ಆಗ ನಾ ಕಂಡ ಅಚ್ಚರಿಯ ಸಂಗತಿಯೇನೆಂದರೆ, ಅವಳೂ ನನ್ನ ಗಮನಿಸದಂತೆ, ನನ್ನ ದನಿಯ ಕೇಳಿಸಿಕೊಳ್ಳದಂತೆ ಆ ಕೋಣೆಯೊಳಗಿನ ಚಿತ್ರವೊಂದನ್ನು ಬರಿದೇ ನೋಡುತ್ತಿದ್ದಳು. ದೂರವಾಣಿ ಕರೆ ಮುಗಿದ ಮೇಲಾದರೂ ಆಕೆ ನನ್ನತ್ತ ತಿರುಗುತ್ತಾಳೆ ಎಂದುಕೊಂಡೆ; ಆದರವಳು ನನ್ನ ಇರುವಿಕೆಯೇ ಅಲ್ಲಿಲ್ಲವೆನ್ನುವಂತೆ ಆ ಚಿತ್ರವನ್ನು ನೋಡುತ್ತಲೇ ಇದ್ದಳು. ಚಣ ಕಳೆದು ನನ್ನತ್ತ ತಿರುಗಿ ದಿಟ್ಟ ನೋಟ ಬೀರಿದಳು. ನಗ್ನನಾದಂತೆ ನಾನು ನಡುಗಿದೆ.

ಇಂತಹ ಅವಮಾನವನ್ನು ನನ್ನ ಮಗಳು ನನ್ನ ದಿಟ್ಟಿಸಿದಾಗ ಅನುಭವಿಸಿದ್ದೇನೆ. ಮರುಕ್ಷಣ ಅವಮಾನ ಸಿಟ್ಟಾಗಿ ಮಾರ್ಪಟ್ಟು ಅವಳನ್ನು ಹಿಂಸಿಸಬೇಕೆಂದು ಚಡಪಡಿಸಿದೆ. ನಾನು ಕೂಗುತ್ತಿದ್ದೆ ನಿನಗೆಷ್ಟೇ ಪೊಗರು? ನೀನಿಲ್ಲಿ ಸಾಧಾರಣ ಗುಮಾಸ್ತೆ. ನಾನೊಬ್ಬ ಮಂತ್ರಿ ಎನ್ನುವುದು ನಿನಗೆ ಅರಿವಿಲ್ಲವೇ? ಹಾಸಿಗೆಯಲ್ಲಿ ಒಬ್ಬ ಗಂಡಸಿನ ಕೆಳಗೆ ಬಿದ್ದಿರುವುದ ಬಿಟ್ಟರೆ ನಿನ್ನಿಂದ ಮತ್ತೇನು ಸಾಧಿಸಲು ಸಾಧ್ಯ?
ಏನು ಹೇಳುತ್ತೀರಿ, ಅಮ್ಮೋ? ಒಬ್ಬ ಗಂಡಸಿನ ಅಂತಹ ಮಾತುಗಳಿಗೆ ಹೆಣ್ಣೊಬ್ಬಳು ಮೂರ್ಚೆ ಬೀಳದಿರಲು ಸಾಧ್ಯವೇ? ಅದರಲ್ಲೂ ಆ ಗಂಡಸು ಸರ್ಕಾರದ ಶಕ್ತಿಶಾಲಿ ಮಂತ್ರಿ ಎಂದಾದರೆ, ಊಹಿಸಲೇಬೇಕಾಗಿಲ್ಲ ತಾನೆ? ನನ್ನ ಕಚೇರಿಯೇನೂ ಒಂಟಿ ಕೋಣೆಯಲ್ಲ, ಅಲ್ಲಿ ಇತರೆ ಅಧಿಕಾರಿಗಳೂ ಇದ್ದಾರೆ. ಆದರೆ ವಿಚಿತ್ರ ಸಂಗತಿಯೇನು ಗೊತ್ತಾ? ಅವಳು ಇವ್ಯಾವುದನ್ನೂ ಲೆಕ್ಕಕ್ಕೇ ಇಡಲಿಲ್ಲ. ಕನಿಷ್ಠ ತಲೆಯನ್ನೂ ಬಗ್ಗಿಸಲಿಲ್ಲ. ನನ್ನಿಡೀ ಬದುಕಿನಲ್ಲಿ ಇಂಥ ಅವಮಾನವನ್ನು ನಾನೆಂದೂ ಅನುಭವಿಸಿರಲಿಲ್ಲ.ಅದೂ ಇತರರೆದುರು!

ನನ್ನ ಪದವಿ ಅಂತಸ್ತುಗಳಿಗಾಗಿ ಅನೇಕರು ತೋರಿಸುತ್ತಿದ್ದ ಗೌರವ ನನ್ನೊಳಗಿನ ಕೋಪವನ್ನು ದುಪ್ಪಟ್ಟು ಹೆಚ್ಚಿಸಿತು. ಹೆಣ್ಣಾದವಳು ನನಗಿದನ್ನು ಮಾಡಬಹುದಾದರೂ ಹೇಗೆ? ನನ್ನ ಅಧಿಕಾರ, ಗಾಂಭೀರ್ಯ, ಪೌರುಷಗಳ ಅವಳು ಹೇಗೆ ಕ್ಷಣಾರ್ಧದಲ್ಲೇ ಬೀಳಿಸಬಹುದು? ಆ ದಿನ ನನಗೆ 105 ಡಿಗ್ರಿ ಜ್ವರ, ಸಿಡಿದು ಹೋಗುವಷ್ಟು ತಲೆನೋವು. ಮರುದಿನ ಕಚೇರಿಗೆ ಹೋಗಲಾಗಲಿಲ್ಲ. ಅವಳಿಗೆ ನ್ಯಾಯವಾದ ಶಿಕ್ಷೆ ಕೊಡಿಸಿದ ನಂತರವಷ್ಟೇ ನನ್ನ ಕೋಪ, ಜ್ವರಗಳು ತಹಬದಿಗೆ ಬಂದವು.

ಆದರೆ, ಅಮ್ಮೋ, ನೀವು ಊಹಿಸಬಲ್ಲಿರಾ...? ನನ್ನಿಂದ ಅವಳನ್ನು ಏನೂ ಮಾಡಲಾಗಲಿಲ್ಲ. ಆ ಕಚೇರಿಯಲ್ಲೇ ಅವಳಿದ್ದಾಳೆ ಎಂದರು ಕೆಲವರು. ನಾನವಳನ್ನು ರಹಸ್ಯತಂತ್ರಗಳ ಮೂಲಕ ಗೂಢಚರ್ಯೆ ನಡೆಸುತ್ತಿದ್ದೇನೆ ಎಂದೇ ನನಗನ್ನಿಸಿತು. ಅವಳ ಬಗ್ಗೆ ಏನಾದರೂ ಕೆಟ್ಟ- ಅಪಘಾತದಲ್ಲಿ ಅವಳು ತೀರಿಹೋದಳು ಎಂಬಂತಹ- ಸುದ್ದಿ ಬರುತ್ತದೆ ಎಂದು ಸದಾ ಅಪೇಕ್ಷಿಸುತ್ತಿದ್ದೆ. ಆದರೆ ಅವಳಿಗೆ ಏನೊಂದೂ ಸಂಭವಿಸಲಿಲ್ಲ. ಅವಳೂ ನಾನಿರುವ ಜಗತ್ತಿನಲ್ಲಿ ಜೀವಿಸುತ್ತಿದ್ದಳು. ಅವಳನ್ನೊಮ್ಮೆ ನಾ ಭೇಟಿಯಾಗುವಂತಹ ಸಂದರ್ಭ ಬಂತು. ಅವಳಲ್ಲಿ ಯಾವ ಬದಲಾವಣೆಗಳೂ ಕಾಣಲಿಲ್ಲ: ಮತ್ತದೇ ನೇರ, ದೀರ್ಘ ನೋಟ. ಆಗ ನಾನು ಕೊತಕೊತ ಕುದಿಯಲು ಕಾರಣ, ನನ್ನ ಅಧಿಕಾರವ ಬಳಸಿ ಏನೂ ಮಾಡಲಾಗಲಿಲ್ಲವಲ್ಲ ಎನ್ನುವುದು! ಆದರವಳು ಮೌನದಿಂದಿದ್ದಳು. ನಾನೇ ಚಡಪಡಿಸಿದೆ. ಅವಳ ಸನಿಹ ನನ್ನನ್ನು ಚುಚ್ಚಿತು.

ಕೇವಲ ಐದನೇ ಅಥವ ಆರನೇ ದರ್ಜೆಯ ನೌಕರರಿಂದ ಮಂತ್ರಿಯೋರ್ವನನ್ನು ಅಧೀರಗೊಳಿಸಲು ಸಾಧ್ಯವಾದದ್ದಾದರೂ ಹೇಗೆ? ನನ್ನ ಜೀವಿತದಲ್ಲಿ ಮಾಡಲಸದಳವಾದ ಕೆಲಸವೊಂದನ್ನು ಆಕೆ ದಿಟ್ಟತನದಿಂದ ಮಾಡಿದಳು. ನನ್ನ ಮೇಲಿನ ಪದವಿಗಳಲ್ಲಿರುವವರ ನಾನೆಂದೂ ದಿಟ್ಟಿಸಿನೋಡಿದ್ದಿಲ್ಲ. ನೀವೂ ಹಾಗೆ ನಡೆದುಕೊಂಡಿದ್ದನ್ನು ನಾನು ಕಂಡಿಲ್ಲ. ಅಮ್ಮೋ, ನೀವು ಹಾಗೆ ಯಾರನ್ನಾದರೂ ಒಮ್ಮೆ ದಿಟ್ಟಿಸಿದ್ದಿದ್ದರೆ ಸಾಕಿತ್ತು ನಾನು ಆ ಹೆಣ್ಣನ್ನು ಸಹಿಸಿಕೊಳ್ಳುತ್ತಿದ್ದೆ. ಅಪ್ಪನ ಕಣ್ಣುಗಳ ನೀವು ನೇರವಾಗಿ ಒಮ್ಮೆ ದಿಟ್ಟಿಸಿ ನೋಡಿದ್ದರೆ ನಾನೂ ಅವರ ಕಣ್ಣುಗಳ ಎದುರುಗೊಳ್ಳುತ್ತಿದ್ದೆ. ಅಂತೆಯೇ ಎಲ್ಲರನ್ನೂ- ಆಡಳಿತದಲ್ಲಿನ ನನ್ನ ಮೇಲಿನವರನ್ನೂ- ಕಣ್ಣಿಗೆ ಕಣ್ಣಿಟ್ಟು ನೋಡುತ್ತಿದ್ದೆ. ಆದರೆ ನೀವು ಹಾಗೆ ನೋಡಿದ್ದನ್ನು ನಾನು ನೋಡಿಯೇ ಇಲ್ಲ. ನೀವು ಹೇಗಿದ್ದಿರೊ ಹಾಗೆಯೇ ನಾನೂ ಇದ್ದೇನೆ. ನೀವೇ ನನಗೆ ಮಾದರಿ. ಅಮ್ಮೋ, ನೀವ್ಯಾಕೆ ಅಪ್ಪನನ್ನು ದಿಟ್ಟಿಸಲಿಲ್ಲ? ಕೇವಲ ಒಂದು ಸಾರಿ ನೀವು ಹಾಗೆ ಮಾಡಿದ್ದರೆ, ಅವರ ಬಗ್ಗೆ ಇದ್ದ ನನ್ನ ಭಯ ಕಳಚಿಬೀಳುತ್ತಿತ್ತು.

ಅದರಂತೆಯೇ, ನಂತರದ ನನ್ನ ಜೀವನದ ಮಜಲುಗಳಲ್ಲಿ ಉನ್ನತ ಸ್ಥಾನದಲ್ಲಿರುವವರ ಮೇಲಿನ ಭಯವೂ ಕಳಚಿ ಬೀಳುತ್ತಿತ್ತು.
ನನ್ನ ಬಾಲ್ಯದಲ್ಲಿ ನಿಮ್ಮ ಮೃದು, ಅಕ್ಕರೆಯ ಕೈಗಳಿಂದ ನನ್ನ ಮೈದಡವುತ್ತಿದ್ದಿರಲ್ಲ, ಹಾಗೆ ನನಗೀಗ ಮಾಡಿ. ನಿಮ್ಮಂದಿಗೆ ಮಾತ್ರ ನಾ ಮನಸ್ಸು ಬಿಚ್ಚಿ ನನ್ನ ದುಃಖವ ಹೇಳಿಕೊಳ್ಳಲು ಸಾಧ್ಯ. ಮಂತ್ರಿಗಿರಿ ಹೋದದ್ದಕ್ಕಿಂತ, ಅದು ಹೇಗೆ ಹೋಯ್ತು ಎನ್ನುವುದೇ ನೋವಿನ ಸಂಗತಿ. ನ್ಯಾಯವಾದ ಕಾರಣಕ್ಕೆ ಮಂತ್ರಿಗಿರಿ ಹೋಗಿದ್ದಿದ್ದರೂ ಒಂದು ತೆರನಾದ ಸಮಾಧಾನವಿರುತ್ತಿತ್ತು.

ನನಗೆ ಸಂಭವಿಸಿದ್ದು ಯಾವುದೇ ತರ್ಕಕ್ಕೆ ನಿಲುಕದ್ದು, ಸಂಪೂರ್ಣ ಮೂರ್ಖತನದ್ದು. ಆ ದಿನದ ಪತ್ರಿಕೆಗಳಲ್ಲಿ ನನ್ನ ಹೆಸರಿಲ್ಲದ ಮಂತ್ರಿಮಂಡಲದ ಪಟ್ಟಿ ನೋಡಿದೆ. ತಕ್ಷಣವೇ ನನಗೆ ಅಸ್ಮಿತೆ ಇಲ್ಲದಂತೆ, ಹೆಸರಿಲ್ಲದ ಮನುಷ್ಯನಂತೆ ಭಾಸವಾಯ್ತು. ದಿನವೂ ಪತ್ರಿಕೆಗಳಲ್ಲಿ ನನ್ನ ಹೆಸರಿಗಾಗಿ ತಡಕಾಡುತ್ತಿದ್ದೆ. ಎಲ್ಲೂ ನನ್ನ ಸುದ್ದಿಯಿಲ್ಲದ ಕಾರಣ ನನ್ನ ಹೆಸರನ್ನೇ ಕಳೆದುಕೊಂಡೆ ಎನ್ನುವುದು ದಿನದಿನಕ್ಕೆ ಖಾತ್ರಿಯಾಗುತ್ತಿತ್ತು. ಇಷ್ಟು ಮಾತ್ರವಲ್ಲ ಅಮ್ಮ, ಈ ಫೋನ್- ಸದಾ ಗುಂಯ್ ಗುಡುತ್ತಿದ್ದ ಈ ಫೋನ್- ಸಹಾ ನನ್ನಿಂದ ದೂರವಾದಂತೆ ಭಾಸವಾಯ್ತು. ಆಗ... ಆಗಲೇ ನಾನು ಕಳೆದುಕೊಂಡದ್ದು ಏನೇನು ಎನ್ನುವುದು ಅರ್ಥವಾಯ್ತು.

ಆ ನೀರವ ಫೋನಿನ ಬಳಿ ಹೋಗಿ ಕೂತೆ; ಹಾಗೆ ನಾ ಕೂತಿದ್ದನ್ನು ಮನೆಯವರು ಯಾರಾದರೂ ನೋಡಿಬಿಡುವರೋ ಎನ್ನುವ ಆತಂಕದಲ್ಲೇ ಕೂತೆ. ಫೋನ್ ಕರೆಗಾಗಿ ನಾನು ಕಾದು ಕೂತಿಲ್ಲ ಎಂಬ ಭಾವವನ್ನು ತಂದುಕೊಂಡೆ. ಆದರೆ ಆ ಸಂದರ್ಭದಲ್ಲಿ ಹೆಣ್ಣೋ ಗಂಡೋ ಯುವಕನೋ ಮುದುಕನೋ ಮನುಷ್ಯನೋ ಮೃಗವೋ- ಅಷ್ಟೇಕೆ ಒಂದು ಕತ್ತೆ ಫೋನ್ ಮಾಡಿದ್ದರೂ ನಾ ಹಾರಿ ಜಿಗಿದು ಉತ್ತರಿಸುತ್ತಿದ್ದೆ. ಅಮ್ಮೋ, ಆ ಕ್ಷಣದಲ್ಲಿ ನನಗೊಂದು ವಿಷಯ ಸ್ಪಷ್ಟವಾಯ್ತು. ಈ ಫೋನೆಂಬ ಉಪಕರಣವನ್ನು ನಾನು ದ್ವೇಷಿಸುತ್ತೇನೆ ಎಂದೇ ಆ ಹೊತ್ತಿನವರೆವಿಗೂ ಹೇಳುತ್ತಾ ಬಂದಿದ್ದೆ.

ಅದು ಸುಳ್ಳು. ಅದು ನನ್ನ ಪ್ರೀತಿಯ ವಸ್ತು. ಸದ್ದು ಮಾಡುತ್ತಿದ್ದ ಅದರ ರಿಂಗಣ ಸದಾ ನನ್ನೊಳಗೆ ಸಂತಸದ ಬುಗ್ಗೆಗಳ ತಂದದ್ದಿದೆ. ಪ್ರೇಮಕ್ಕಿಂತ, ಕಾಮಕ್ಕಿಂತ, ಊಟಕ್ಕಿಂತ ಅದು ವಿಶಿಷ್ಟವಾದ ಚಟ. ಆ ವ್ಯಸನದ ಮಾಯಾಲೋಕದಲ್ಲಿ ನಮ್ಮ ದಣಿವೆಲ್ಲ ಮಂಗಮಾಯವಾಗುತ್ತವೆ. ಕನಸಿನಲ್ಲೂ ನಮ್ಮ ಮಿದುಳು ಖುಷಿಯಿಂದ ಕೆನೆದು ಓಡುತ್ತಿರುತ್ತದೆ. ಸುಡುವ ಬಿಸಿಲಲ್ಲಿ, ಮುಖದ ತುಂಬ ನಗು ಬರಿಸಿಕೊಂಡು ಅತಿಥಿಗಳ ಸ್ವಾಗತಿಸಲು ವಿಮಾನ ನಿಲ್ದಾಣಗಳಲ್ಲಿ ನಿಲ್ಲಲು- ಎರಡೂ ಕಾಲುಗಳನ್ನು ಜೋಡಿಸಿಕೊಂಡು, ಎಡಗೈಯನ್ನು ಬಲಗೈಯ ಬಳಸಿ ಉದರಕ್ಕೋ ಎದೆಗೋ ಒತ್ತಿ ಹಿಡಿದು ಸಭೆಸಮಾರಂಭಗಳಲ್ಲಿ ಕೂರಲು- ಹೀಗೆ ಎಲ್ಲವಕ್ಕೂ ಮೂಲಕಾರಣ: ಆ ಚಟ ನೀಡಿದ ಅಪರಿಮಿತ ಸಂತೋಷ.

ಹಾಂ... ನನ್ನ ಹೆತ್ತವಳೆ... ಆ ಸಂತೋಷವೆಲ್ಲ ಒಂದು ಸಣ್ಣ ವಿಷಯದಿಂದ ನಿರ್ನಾಮವಾಗಿಹೋಯ್ತು. ಈ ನಷ್ಟ ಸಾವಿಗೆ ಸಮಾನ. ಆ ದಿನ ಮಹತ್ತರ ನಿರೀಕ್ಷೆಯೊಂದಿಗೆ ನನ್ನ ಕುರ್ಚಿಯಲ್ಲಿ ಕೂತಿದ್ದೆ. ಎಂದಿನಂತೆಯೇ ಅಂದೂ ಕೂತಿದ್ದೆ. ಯಾಕೋ ಗೊತ್ತಿಲ್ಲ, ನನ್ನ ಮನಸ್ಸು ವಿನಾಕಾರಣ ಎಲ್ಲೆಲ್ಲೋ ಅಲೆಯುತ್ತಿತ್ತು; ಅದು ನನ್ನ ತೊರೆದಂತೆ ಅನ್ನಿಸಿತು. ಇಂತಹದ್ದು ಬೇರೆಲ್ಲಾದರೂ ಸಂಭವಿಸಿದ್ದರೆ, ಪ್ರಳಯವೇ ಆಗಿರುತ್ತಿತ್ತೇನೊ! ಅಬ್ಬಾ ಬಚಾವಾದೆ... ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಯಾವುದೋ ಸಭೆ. ನಾನಿಲ್ಲಿ ಮಂಡಿಸಬೇಕಾಗಿರುವ ವಾರ್ಷಿಕ ವರದಿಯ ಕುರಿತೋ ಅಥವ ಹೊಸ ಬಜೆಟ್ ಕುರಿತೋ ನಾನಾಗ ಯೋಚಿಸುತ್ತಿರಲಿಲ್ಲ ಎನ್ನುವುದು ನನಗೆ ನಾನೇ ತುಸು ಸಮಾಧಾನಪಡಿಸಿಕೊಳ್ಳುವ ಸಂಗತಿ.ದುರದೃಷ್ಟಕರ ವಿಷಯವೇನೆಂದರೆ, ನಾನು ಆ ಹೆಣ್ಣಿನ ಬಗ್ಗೆಯೇ ಯೋಚಿಸುತ್ತಿದ್ದೆ. ಅವಳ ನೋಡಿದ ಮೊದಲ ಗಳಿಗೆಯನ್ನು ಶಪಿಸುತ್ತಿದ್ದೆ. ಯಾಕೆಂದರೆ, ಅಲ್ಲಿಂದಲ್ಲವೇ ಎಲ್ಲವೂ ಶುರುವಾದದ್ದು!

ಕಡೆಪಕ್ಷ, ಅವಳೊಬ್ಬಳು ಹೆಣ್ಣು ಎಂದು ಯೋಚಿಸಿದ್ದರಾದರೂ ನೆಮ್ಮದಿಯಾಗಿರುತ್ತಿತ್ತು. ಒಬ್ಬ ಗಂಡಸು - ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಒಂದು ಹೆಣ್ಣಿನ ಕುರಿತು ಯೋಚಿಸುವುದು ಸಾಮಾನ್ಯ ಅಲ್ಲವೆ! ಆದರೆ ಈ ವಿಷಯ ಅಷ್ಟು ಸಲೀಸಾದ್ದು ಅಲ್ಲವಲ್ಲ! ನನ್ನ ಕಣ್ಣುಗಳಿಗೆ ಅವಳು ಒಂದು ಹೆಣ್ಣಾಗಿಯೇ ಕಾಣಲಿಲ್ಲ. ಸಚಿವನೊಬ್ಬನ ಕಾರ್ಯಾಲಯದಲ್ಲಿ ಕೆಲಸ ಮಾಡುವ ಕೆಳದರ್ಜೆ ನೌಕರಳು ಅವಳು. ಅಂತೆಯೇ ಆ ಹೆಣ್ಣಿನ ಕುರಿತು ನಾನು ಭಾವಿಸಲು ಸಾಧ್ಯವಾದುದು. ಹಾಗಾದರೆ, ಆ ಅವಮಾನಕರ ಭೇಟಿಯಲ್ಲಿ ಸಚಿವನ ಕುರ್ಚಿಯಲ್ಲಿ ಕೂತಿದ್ದು ಯಾರು? ಖಂಡಿತ ನಾನಾಗಿರಲಿಕ್ಕಿಲ್ಲ! ಆ ಅವಮಾನವನ್ನು ಸಹಿಸಿಕೊಂಡಿದ್ದಿರಲು ನನಗೆ ಸಾಧ್ಯವಾದೀತಾದರೂ ಹೇಗೆ? ಆ ನೆನಪನ್ನು ನನ್ನ ಮಿದುಳಿನಿಂದ ಓಡಿಸಲು ಪ್ರಯತ್ನಿಸುತ್ತಿದ್ದೆ, ಆದರೆ ಆಗಲೇ ಇಲ್ಲ.

ಆ ನೆನಪು ನನ್ನನ್ನು ತೀವ್ರವಾಗಿ ಆಕ್ರಮಿಸಿದ್ದರಿಂದ ಎಡಗೈಯಲ್ಲಿ ಅದನ್ನು ಓಡಿಸಲು ಪ್ರಯತ್ನಿಸಿದೆ. ಬಲಗೈ ವಾಡಿಕೆಯಂತೆ ಪೆನ್ನು ಹಿಡಿದಿತ್ತು. ನನ್ನನ್ನು ಯಾರಾದರೂ ಆಗ ನೋಡಿದ್ದರೆ ನಾನು ನೊಣ ಓಡಿಸುತ್ತಿದ್ದೇನೆ ಎಂದೇ ಭಾವಿಸಿದ್ದಿರಬೇಕು. ಇಡೀ ನಗರದಲ್ಲಿಯೇ ಸಂಪೂರ್ಣ ಸ್ವಚ್ಛ ಸ್ಥಳ ನನ್ನ ಕೋಣೆಯಾದ್ದರಿಂದ ಎಲ್ಲರೂ ಗಮನಿಸಿಯೇ ಬಿಟ್ಟಿದ್ದರು. ಬೇರೊಬ್ಬರ ಗಮನಕ್ಕೆ ಬೀಳಲು ನಾನು ಎಂದೂ ಬಯಸಿದವನೇ ಅಲ್ಲ. ಈ ಕಾರಣಕ್ಕಾಗಿಯೇ ನಾನು ಸಭೆ ಸಮಾರಂಭಗಳಲ್ಲಿ ಯಾರ ಕಣ್ಣಿಗೂ ಬೀಳದಂತೆ ಮೂಲೆಯಲ್ಲಿ ಕೂರುತ್ತಿದ್ದೆ. ಆಗಲೇ ಅಲ್ಲವೆ, ನಾ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ.ಪ್ರಶ್ನೆಗಳ ಕುರಿತು ನನಗೇನೂ ಅಂತಹ ಭಯವಿಲ್ಲ. ಯಾಕೆಂದರೆ, ಉತ್ತರಗಳು ನನಗೆ ಗೊತ್ತಿಲ್ಲ.

1+1 = 2 ಎನ್ನುವ ಉತ್ತರಗಳಿರುವ ಪ್ರಶ್ನೆಗಳಿಗೆ ಮಾತ್ರ ನನ್ನಿಂದ ಉತ್ತರಿಸಲು ಸಾಧ್ಯ. ಆದರೆ ನನ್ನ ಭಯಕ್ಕಿರುವ ಕಾರಣ, ನಿಜವಾದ ಉತ್ತರವನ್ನು ಹೇಳದೆ ಮುಚ್ಚಿಡುವುದರ ಮೇಲಲ್ಲ, ಬದಲಾಗಿ ಉತ್ತರವನ್ನು ಎಲ್ಲಿ ಹೇಳಿಬಿಡುತ್ತೇನೋ ಎನ್ನುವುದೇ.

ಆ ದಿನ ಅದು ಸಂಭವಿಸಿಯೇಬಿಟ್ಟಿತು. ನಾಯಕರು ನನ್ನ ಕೈಯ ನೋಡಿಬಿಟ್ಟರು. ನಂತರ ಅವರ ಗಮನವೆಲ್ಲ ನನ್ನ ಮೇಲೆಯೇ ಇತ್ತು. ಅವರ ಆ ನೋಟ, ಚಿಕ್ಕಂದಿನಲ್ಲಿ ಅಪ್ಪ ನನ್ನ ನೋಡುತ್ತಿದ್ದರಲ್ಲ, ಹಾಗೆಯೇ ಇತ್ತು. ಸ್ಕೂಲಿನಲ್ಲಿ ಮೇಷ್ಟ್ರ ನೋಟದಿಂದ ತಪ್ಪಿಸಿಕೊಳ್ಳಲು ಏನೇನೋ ಮಾಡುತ್ತಿದ್ದ ಆಟಗಳು ಆ ಕ್ಷಣ ನೆನಪಾದವು. ಆದರೆ ಈ ಬಾರಿ, ನನ್ನೊಬ್ಬರು ಗಮನಿಸುತ್ತಿರುವುದನ್ನು ನಾನು ತಡವಾಗಿ ಗಮನಿಸಿದ್ದರಿಂದ ತಪ್ಪಿಸಿಕೊಳ್ಳಲು ಆಗಲೇ ಇಲ್ಲ. ಬಹುಶಃ ಅವತ್ತು ನಾನು ನನ್ನ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಿಲ್ಲವೇನೊ...
ಅಥವ ಜ್ವರ ಬಂದಿರಬಹುದು. ನಾಯಕರ ಆ ನೋಟ ಸಾವಿನ ಯಮಭಾರವನ್ನು ಪರಿಚಯಿಸಿತು. ನಂತರ, ಅವರು ಪ್ರಶ್ನಿಸಿದಾಗ ನನ್ನ ಬಾಯಿ ಯಾರದೋ ಅನ್ಯರ ಬಾಯಿಯಂತೆ- ಮುಟ್ಠಾಳನ ಬಾಯಿಯಂತೆ- ತೆರೆಯಿತು. ಮೂರ್ಖತನದ ಉತ್ತರವನ್ನೇ ಹೇಳಿತು.

ನಾ ಹೇಳಬೇಕಾಗಿದ್ದ ಉತ್ತರ ಅದಲ್ಲ. ಹೇಳಬೇಕಿದ್ದದ್ದು ಸರಿಯಾದ ಉತ್ತರವಲ್ಲ, ನಾಯಕರ ಅಪೇಕ್ಷೆಯ ಉತ್ತರ. ರಾಜಕೀಯದ ಮೊದಲ ಪಾಠ - ನಾ ಕಲಿತಿದ್ದು- ಅದು ತಾನೆ? ಸರಿಯಾದ ಸಮಯಕ್ಕೆ ನಾನದನ್ನು ಮರೆತೆ. ಅದನ್ನಾಗ ಮರೆತು ಹೋದದ್ದರ ಕುರಿತು ನಂತರದ ದಿನಗಳಲ್ಲಿ ತುಂಬಾ ದುಃಖಿಸಿದೆ. ಆ ಕ್ಷಣ ನನ್ನ ಎದೆಯ ದೊಡ್ಡ ಭಾರವ ಇಳಿಸಿದಂತೆ ಅನುಭವವಾಯ್ತು. ಅದು ಎಂತಹ ಭಾರವಾಗಿತ್ತೆಂದರೆ, ಬಲಿಷ್ಠವಾದ ನನ್ನ ಕೈಗಳಿಂದಲೂ ಎತ್ತಿಕೊಳ್ಳಲಾರದಷ್ಟು, ವಶೀಕರಣಕ್ಕೊಳಗಾದಂತೆ ನಿರ್ಲಿಪ್ತಗೊಂಡಿದ್ದ ನನ್ನ ದೇಹ ಹೊರಲಾಗದಂತಹದ್ದು, ನನ್ನ ಹೊತ್ತಿದ್ದ ಭೂಮಿಯಿಂದಲೂ ಸಹಿಸಲಾಗದಂತಹದ್ದು...

ಹೌದು ಅಮ್ಮ, ಎಲ್ಲವೂ ತಣ್ಣಗಾದಂತೆ ಅನುಭವವಾಯ್ತು. ಬದುಕಿನ ನನ್ನೀ ಕೊನೆಯ ಕ್ಷಣಗಳಲ್ಲಿ, ಜಗತ್ತನ್ನು ಬಿಟ್ಟು ಹೊರಡುವ ಈ ಗಳಿಗೆಯಲ್ಲಿ ನಾ ಶಾಂತನಾಗಿದ್ದೇನೆ. ಆದರೆ ಅಮ್ಮ, ಇಂತಹ ಸಮಯದಲ್ಲೂ ಒಂದು ಚಿಂತೆ ನನ್ನನ್ನು ಇಡಿಯಾಗಿ ಅಲ್ಲಾಡಿಸುತ್ತಿದೆ. ಆಂ...! ನನ್ನ ಸನಿಹದಲ್ಲಿರುವ ಈ ಫೋನ್ ಒಂದೇ ಒಂದು ಬಾರಿ ರಿಂಗಣಗೊಂಡು, ಆ ಕಡೆಯಿಂದ ಮಾನ್ಯ ಸಚಿವರೆ... ಎನ್ನುವ ದನಿ ಬಂದರೆ ಸಾಕು, ತೃಪ್ತ. ಆ ಮಾತನ್ನು ಕೇಳಲು ನಾನದೆಷ್ಟು ಆತುರಪಡುತ್ತಿದ್ದೇನೆ, ಗೊತ್ತೆ... ಅಮ್ಮ, ನನ್ನ ಹೆತ್ತವಳೆ, ಒಂದೇ ಒಂದು ಬಾರಿ -ನಾನು ಸಾಯುವ ಮುಂಚೆ- ಮಾನ್ಯ ಸಚಿವರೆ.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.