ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಮದ್ಯಪಾನ ಪರಂಪರೆಯ ಇಣುಕು ನೋಟ

Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಅಕ್ಷರ ಗಾತ್ರ

ಮದ್ಯಕ್ಕೂ ಒಂದು ಇತಿಹಾಸ, ಪರಂಪರೆಯಿದೆ. ಅದರ ಜಾಡು ಹಿಡಿದು ಹೊರಟವರು ಅಬಕಾರಿ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ ಹುದ್ದೆಯಲ್ಲಿರುವ ರಾಜೀವ್‌ ಬಾಬು. ವೃತ್ತಿಯೊಳಗೆ ತಮ್ಮ ಸಂಶೋಧನಾ ಪ್ರವೃತ್ತಿಯನ್ನು ಹರಿಬಿಟ್ಟು ಈ ಕೃತಿಯನ್ನು ಅವರು ತಂದಿದ್ದಾರೆ. 

ಇಲಾಖೆಯಲ್ಲಿನ ಕಾಯ್ದೆ, ನಿಯಮಗಳ ಇತಿಹಾಸ ಕೆದಕುತ್ತಾ, ಬ್ರಿಟಿಷರ ಪೂರ್ವದಲ್ಲಿ ಇದ್ದ ಮದ್ಯ ವಹಿವಾಟಿನ ಬೆನ್ಹತ್ತಿ ಈ ಕೃತಿಯನ್ನು ರಾಜೀವ್‌ ಸಿದ್ಧಪಡಿಸಿದ್ದಾರೆ. ಒಟ್ಟು ಹನ್ನೊಂದು ಅಧ್ಯಾಯಗಳಲ್ಲಿ ಇಲ್ಲಿನ ಲೇಖನಗಳಿವೆ. ಸೋಮರಸದ ಹಿನ್ನೆಲೆ, ಪ್ರಾಚೀನ ಕಾಲದ ಮದ್ಯ ಉತ್ಪಾದಕ ಯಂತ್ರಗಳತ್ತ ಇಣುಕು ನೋಟ, ಶಿಲ್ಪಕಲೆಗಳಲ್ಲಿ ಮದ್ಯಪಾನದ ಕುರುಹುಗಳು, ಪ್ರಾಚೀನ ಸಾಹಿತ್ಯದಲ್ಲಿ ಮದ್ಯಪಾನದ ಘಟನಾವಳಿಗಳು, ಬ್ರಿಟಿಷ್‌ ಆಳ್ವಿಕೆಯಲ್ಲಿ ಮದ್ಯದ ವಹಿವಾಟುಗಳಲ್ಲಿ ಆದ ಮಾರ್ಪಾಡು- ಹೀಗೆ ಭಿನ್ನ ಆಯಾಮಗಳಲ್ಲಿ ಮದ್ಯದ ಪರಂಪರೆಯನ್ನು ಲೇಖಕರು ಇಲ್ಲಿ ವಿಶ್ಲೇಷಿಸಿದ್ದಾರೆ. ಚಿತ್ರಸಹಿತ ವಿವರಣೆ ಓದಿಗೆ ಪೂರಕವಾಗಿದೆ. ಬ್ರಿಟಿಷ್‌ ಸರ್ಕಾರದಿಂದ ಪ್ರಮುಖ ನಗರಗಳಲ್ಲಿ ಡಿಸ್ಟಿಲರಿಗಳ ಆರಂಭದ ಹೆಜ್ಜೆಗಳು, ದಕ್ಷಿಣ ಭಾರತದಲ್ಲಿ ಫ್ರಾನ್ಸಿಸ್‌ ಬುಕಾನನ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಸಂಗ್ರಹಿಸಿ ಮಾಹಿತಿಗಳನ್ನು ಲೇಖಕರು ವಿಸ್ತೃತವಾಗಿ ಇಲ್ಲಿ ವಿವರಿಸಿದ್ದಾರೆ.   

ಮದ್ಯಪಾನ, ಅಬಕಾರಿ ನೀತಿ ಬಗ್ಗೆ ಗಾಂಧೀಜಿ, ಅಂಬೇಡ್ಕರ್‌ ಅವರ ಅಭಿಪ್ರಾಯಗಳು, ರಾಜ್ಯದಲ್ಲಿ ನಡೆದ ಕಳ್ಳಭಟ್ಟಿ ದುರಂತಗಳ ವಿವರ, ಅಬಕಾರಿ ಇಲಾಖೆ ಬಜೆಟ್‌ಗಳು, ಇಲಾಖೆಯನ್ನು ನಿಭಾಯಿಸಿದ ಸಚಿವರ ವಿವರ ಹಾಗೂ ಇಲಾಖೆಯ ಪ್ರಮುಖಾಂಶಗಳನ್ನೂ ಈ ಕೃತಿಯಲ್ಲಿ ಕ್ರೋಡೀಕರಿಸಿ ನೀಡಲಾಗಿದೆ.          

ಭಾರತದಲ್ಲಿ ಮದ್ಯಪಾನ ಪರಂಪರೆ 

ಲೇ: ರಾಜೀವ್‌ ಬಾಬು 

ಪ್ರ: ಶ್ರೀರಾಮ ಪ್ರಕಾಶನ 

ಸಂ: 8553667306 ಪುಟ: 176   ದರ: 250

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT