ಸೋಮವಾರ, ಜುಲೈ 13, 2020
29 °C

ಮಕ್ಕಳ ಪದ್ಯ: ಬೆಕ್ಕಿನ ಬೇಟೆ

ಅಕ್ಬರ್‌ ಸಿ. ಕಾಲಿಮಿರ್ಚಿ Updated:

ಅಕ್ಷರ ಗಾತ್ರ : | |

ಬೆಳ್ಳನೆ ಬೆಕ್ಕು 
ಒಳಬಂದಿತ್ತು 
ಚಿಲಕದ ಸಂದಿಲಿ 
ನಡೆದಾಡಿತ್ತು

 ಹಾಲಿನ ವಾಸನೆ 
ಮೊಸರಿನ ನೆನಪು 
ಬೆಣ್ಣೆಯ ಕದಿಯಲು
ಹೊಂಚ್ಹಾಕಿತ್ತು

 ಕಿಟಕಿಯ ತೂತನು 
ಬಿರಿಬಿರಿ ನೋಡಿ 
ಹೊರಡಲು ಕಾಲು 
ಮುಂದಾಗಿತ್ತು

 ಅಪ್ಪನ ಸದ್ದಿಗೆ 
ಪೆಚ್ಚಾಗಿತ್ತು 
ಅವ್ವನ ಗೊರಕೆಗೆ 
ಬೆದರಿತ್ತು

 ಮೆಲ್ಲನೆ ಎಲ್ಲೆಡೆ 
ತಿರುಗಿ ನೋಡಿ 
ಹುಳ ಹುಪ್ಪಡಿಗಳ 
ಆಸೆಯ ಮಾಡಿ

 ಇಲಿಯೂ ಕಾಣದ 
ಕೋಣೆಯಲಿ 
ಹಸಿದಾ ಹೊಟ್ಟೆಗೆ ಮರುಗಿತ್ತು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.