ಶನಿವಾರ, ಅಕ್ಟೋಬರ್ 16, 2021
22 °C

ಎಚ್‌.ಆರ್‌.ಲೀಲಾವತಿ ಬರೆದ ಕವಿತೆ: ಕನಸು ಮೊಟ್ಟೆ ಇಡುವುದಿಲ್ಲ

ಎಚ್‌.ಆರ್‌. ಲೀಲಾವತಿ Updated:

ಅಕ್ಷರ ಗಾತ್ರ : | |

Prajavani

ರಾತ್ರಿ ಮೊಟ್ಟೆಯಿಟ್ಟ
ಕನಸುಗಳೆಲ್ಲ
ಹಗಲು ಚಿಟ್ಟೆಯಾಗಿ
ಹಾರಿಹೋಗುವಾಗ
ನಿನ್ನದೇ ನೆನಪು

ಎದೆತುಂಬ ಬೆಚ್ಚನೆಯ
ಸಾವಿರದ ಪ್ರೇಮದುಸಿರ
ಮಲ್ಲಿಗೆಯ ಕಂಪು
ಅಕಾಲದಲ್ಲೂ

ನಿಜದ ನಡತೆಯ ನಂಬಿ
ಮುಡಿಗೆ ಏರಿಸುವ ವೇಳೆ
ಕೈ ಬರಿದು ಮುಡಿ ಬರಿದು
ಹಾರಿಹೋಗಿತ್ತು ಚಿಟ್ಟೆ

ಆಟಗಳ ಬೇಟಕ್ಕೆ
ಬಲಿಯಾದ ಮುಗ್ಧತೆ
ಉಸಿರುಸಿರು ಬೆರೆವಾಗ
ಎದ್ದ ಅಪರಿಚಿತ ಗೋಡೆ

ನೆನಪಿನಂಗಳ ತುಂಬ
ಅಗ್ನಿ ಜ್ವಾಲೆಯ ಕುಣಿತ
ಶೃತಿ ಇರದ ರಾಗಗಳು
ಬಿಕ್ಕುತಿಹ ಭಾವಗಳು

ಪಾಳುಬಿದ್ದ ಹೃದಯ
ಬರಡು ಬಂಜರು ಭೂಮಿ
ಕನಸು ಮೊಟ್ಟೆ ಇಡುವುದಿಲ್ಲ
ಚಿಟ್ಟೆ ಹಾರುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.