ಸೋಮವಾರ, ಮೇ 16, 2022
24 °C

ಅಂಗವಿಕಲ ವಿದ್ಯಾರ್ಥಿಗಳಿಗೆ ಬೈಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ 21 ಜನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಂಗವಿಕಲರ ವಿಶೇಷ ಬೈಕ್‌ಗಳನ್ನು ವಿತರಿಸಲಾಗುವುದು~ ಎಂದು ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಹೇಳಿದರು.ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ಶನಿವಾರ ಅಂಗವಿಕಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ಬೈಕ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ವಿದ್ಯುತ್ ಬ್ಯಾಟರಿಯಿಂದ ಚಲಿಸುವ ಪ್ರತಿ ಬೈಕ್‌ನ ಬೆಲೆ 45,500 ರೂಪಾಯಿ. ಯೋಜನೆಯ ಮೊದಲ ಹಂತವಾಗಿ 15 ಬೈಕ್‌ಗಳನ್ನು ಕೊಳ್ಳಲಾಗಿದೆ.ಕೊಯಮತ್ತೂರು ಮೂಲದ ಕಂಪೆನಿಯಿಂದ ಒಟ್ಟು 21 ಬೈಕ್‌ಗಳನ್ನು ಕೊಳ್ಳಲು ಮಾತುಕತೆ ನಡೆಸಲಾಗಿದೆ. ಕಾರ್ಯಕ್ರಮದ ಮುಂದಿನ ಹಂತವಾಗಿ ವಿಶ್ವವಿದ್ಯಾಲಯದ ಎಲ್ಲಾ ಅಂಗವಿಕಲ ವಿದ್ಯಾರ್ಥಿಗಳಿಗೂ ವಿಶೇಷ ಬೈಕ್‌ಗಳನ್ನು ವಿತರಿಸುವ ಚಿಂತನೆ ನಡೆಸಲಾಗಿದೆ~ ಎಂದು ಅವರು ತಿಳಿಸಿದರು.`ಶನಿವಾರ ಇಬ್ಬರು ಅಂಗವಿಕಲ ವಿದ್ಯಾರ್ಥಿಗಳಿಗೆ ವಿಶೇಷ ಬೈಕ್‌ಗಳನ್ನು ವಿತರಿಸಲಾಗಿದೆ. ಮುಂದೆ ಪ್ರತಿ ವಾರ ಇಬ್ಬರಿಗೆ ವಿಶೇಷ ಬೈಕ್‌ಗಳ ವಿತರಣೆ ನಡೆಯಲಿದೆ. ಈ ವಿಶೇಷ ಬೈಕ್‌ಗಳ ಬ್ಯಾಟರಿಯನ್ನು ಆರು ಗಂಟೆ ಚಾರ್ಜ್ ಮಾಡಿದರೆ, ಆರು ಗಂಟೆ ಕಾಲ ಚಾಲನೆ ಮಾಡಬಹುದು~ ಎಂದರು.ಸಂತೋಷ ತಂದಿದೆ : `ಜ್ಞಾನಭಾರತಿ ಆವರಣದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಕಷ್ಟವಾಗುತ್ತಿತ್ತು. ಈಗ ಬೈಕ್ ಸಿಕ್ಕಿರುವುದರಿಂದ ಅನುಕೂಲವಾಗಲಿದೆ. ಬೈಕ್ ಸಿಕ್ಕಿದ್ದು ಸಂತೋಷ ತಂದಿದೆ. ನನ್ನಂಥ ಎಲ್ಲ ಅಂಗವಿಕಲ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯದ ವತಿಯಿಂದ ಬೈಕ್ ವಿತರಣೆ ಆಗಬೇಕು~ ಎಂದಿದ್ದು ಸಮಾಜಶಾಸ್ತ್ರ ವಿಭಾಗದ ಅಂತಿಮ ಎಂ.ಎ ವಿದ್ಯಾರ್ಥಿ ಎನ್.ದಿನೇಶ್. ವಿಶೇಷ ಬೈಕ್ ಪಡೆದ ಇದೇ ಸಂತೋಷ ಮಹಿಳಾ ಅಧ್ಯಯನ ವಿಭಾಗದ ಅಂತಿಮ ಎಂ.ಎ ವಿದ್ಯಾರ್ಥಿ ಜಿ.ನಾಗರಾಜ್ ಅವರ ಮುಖದಲ್ಲೂ ಕಾಣುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.