ಅಂಚೆಯಣ್ಣ ಚಿತ್ರದಣ್ಣ ಸೇರಿ ಕೂಡಿ ಹಲವು ಬಣ್ಣ... ಇಬ್ಬರೂ ಮನೆಗೆ, ಮನಸ್ಸಿಗೆ ಹತ್ತಿರದವರೇ. ಈ ಅಣ್ಣಂದಿರು ವಯಸ್ಸಿನಲ್ಲೂ ಹಿರೀಕರು; ಹುಟ್ಟಿ ನೂರಕ್ಕೂ ಹೆಚ್ಚು ವರ್ಷಗಳು ಗತಿಸಿವೆ. ಒಬ್ಬಾತ ಸಂವಹನವನ್ನೇ ಬದುಕಿನ ಧ್ಯೇಯವಾಗಿಸಿಕೊಂಡಾತ. ಮತ್ತೊಬ್ಬ ಸಂವಹನದ ಜತೆಗೆ ರಂಜನೆಯನ್ನೂ ಬೆರೆಸಿಕೊಂಡಾತ.

ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಇಬ್ಬರನ್ನೂ ಒಟ್ಟಿಗೆ ಬೆಸೆಯಲು ಹೊರಟಿದೆ. ಇದೇ ಶನಿವಾರದಿಂದ ಎರಡು ದಿನಗಳ ಕಾಲ ಅಕಾಡೆಮಿ `ಅಂಚೆ ಚಲನಚಿತ್ರ~ ಅಂಚೆ ಚೀಟಿಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಚಲನಚಿತ್ರ ಉದ್ಯಮವನ್ನು ಕುರಿತ ಸುಮಾರು 600ರಿಂದ 700 ಅಂಚೆ ಚೀಟಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಅಕಾಡೆಮಿಯ ರಿಜಿಸ್ಟ್ರಾರ್ ಆಗಿರುವ ಜಗನ್ನಾಥ್ ಪ್ರಕಾಶ್ 25 ವರ್ಷಗಳಿಗೂ ಹೆಚ್ಚು ಕಾಲ ಸಂಗ್ರಹಿಸಿದ ಅಂಚೆಚೀಟಿಗಳು ಇವು.

ಕರ್ನಾಟಕ ಗ್ರಾಮೀಣ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಎಂ.ಆರ್.ಪ್ರಭಾಕರ್ ಅವರು ಜಗನ್ನಾಥ್ ಪ್ರಕಾಶ್ ಅವರ ಸಂಗ್ರಹವನ್ನು ಪ್ರದರ್ಶಿಸುವ ಹೊಣೆ ಹೊತ್ತಿದ್ದಾರೆ.

ಭಾರತೀಯ ಚಿತ್ರರಂಗದ ಭೀಷ್ಮ ನಂತಿರುವ ದಾದಾಸಾಹೇಬ್ ಫಾಲ್ಕೆ ಅವರ ಅಂಚೆಚೀಟಿಯಿಂದ ಹಿಡಿದು 2011ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ಹಿಂದಿ ನಟಿಯರ ಅಂಚೆ ಚೀಟಿಯವರೆಗೆ ಭಾರತೀಯ ಚಲನಚಿತ್ರದ ಇತಿಹಾಸವನ್ನೇ ಬಿಂಬಿಸುವ ಯತ್ನ ಪ್ರದರ್ಶನದಲ್ಲಿದೆ. ಅಲ್ಲದೆ ವಿಶ್ವದೆಲ್ಲೆಡೆ ಮೂಡಿ ಬಂದ ಸಿನಿಮಾ ಕುರಿತ ಅಂಚೆಚೀಟಿಗಳೂ ಪ್ರದರ್ಶನದಲ್ಲಿವೆ.

ಹಾಲಿವುಡ್ ಸಿನಿಮಾ, ವಿಶ್ವ ಸಿನಿಮಾದ ದಿಗ್ಗಜರ ಅಂಚೆಚೀಟಿಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಸುಮಾರು 60 ದೇಸಿ ಅಂಚೆಚೀಟಿ ಹಾಗೂ ಐನೂರಕ್ಕೂ ಹೆಚ್ಚು ವಿದೇಶಿ ಅಂಚೆ ಚೀಟಿಗಳನ್ನು ಕಾಣಬಹುದು. ಕೇವಲ ನಟ ನಟಿಯರಲ್ಲದೆ ಸಿನಿಮಾ ರಂಗಕ್ಕೆ ಶ್ರಮಿಸಿದ ಅನೇಕರ `ಮೆರವಣಿಗೆ~ ಇಲ್ಲಿದೆ.

ಪ್ರದರ್ಶನದ ಪ್ರಮುಖ ಆಕರ್ಷಣೆ ಮರ್ಲಿನ್ ಮನ್ರೋಳ ಅಂಚೆ ಚೀಟಿ. ಬಂಗಾರದ ಲೇಪವಿರುವ ಇದು ಹಲವು ಸಹಸ್ರ ರೂಪಾಯಿ ಬೆಲೆ ಬಾಳುವ ಸಂಗ್ರಹ. ಭಾರತೀಯ ಅಂಚೆ ಇಲಾಖೆ ತಂದ ಏಕೈಕ ವಿದೇಶಿ ಕಲಾವಿದನ ಅಂಚೆ ಚೀಟಿ ಚಾರ್ಲಿ ಚಾಪ್ಲಿನ್ನದು. ಜಗದ್ವಿಖ್ಯಾತ ಕಲಾವಿದನಿಗೆ ಭಾರತ ಸಲ್ಲಿಸಿದ ಗೌರವ ಇದು. ಆ ಅಪರೂಪದ ಅಂಚೆ ಚೀಟಿಯೂ ಇಲ್ಲಿ ಲಭ್ಯ.

`ಸತ್ಯ ಹರಿಶ್ಚಂದ್ರ~ ಚಿತ್ರದ ದೃಶ್ಯವಿರುವ ಅಪರೂಪದ ಚೀಟಿಯೂ ಈ ಸಂಗ್ರಹದಲ್ಲಿದೆ. ಅಂಚೆ ಇಲಾಖೆ ಇದುವರೆಗೆ ಕೇವಲ ಒಬ್ಬ ಕನ್ನಡ ನಟನ ಅಂಚೆ ಚೀಟಿಯನ್ನು ಮಾತ್ರ ಹೊರತಂದಿದೆ. ಅದು ಬೇರಾರೂ ಅಲ್ಲ ಡಾ. ರಾಜ್ಕುಮಾರ್. 2009ರಲ್ಲಿ ಬಿಡುಗಡೆಯಾದ ಈ ಅಂಚೆಚೀಟಿ ಕನ್ನಡಿಗರ ಪಾಲಿಗೆ ಅಮೂಲ್ಯ ಆಸ್ತಿ.

ಎಂಜಿಆರ್, ಸತ್ಯಜಿತ್ ರೇ, ನರ್ಗೀಸ್ ದತ್, ವಿ.ಶಾಂತಾರಾಂ, ಪು.ಲ.ದೇಶಪಾಂಡೆ, ಘಂಟಸಾಲ, ಹಿಚ್ಕಾಕ್, ಬ್ರೂಸ್ಲಿ, ದೇವಿಕಾರಾಣಿ, ರೂಮಿ, ಮಧುಬಾಲಾ, ಮೀನಾಕುಮಾರಿ, ಎನ್ಟಿಆರ್, ಎಸ್.ಡಿ.ಬರ್ಮನ್, ಕಿಶೋರ್ ಕುಮಾರ್ ಮುಂತಾದವರನ್ನು ಕಾಣಬಹುದು. ಅಲ್ಲದೆ ಧ್ವನಿಗ್ರಹಣ ಶತಮಾನ, ಮಕ್ಕಳ ಸಿನಿಮಾ ಸಮಾಜ 50 ವರ್ಷ, ಭಾರತೀಯ ಸಿನಿಮಾದ 75ನೇ ವರ್ಷ, ವಿಶ್ವ ಸಿನಿಮಾದ ಶತಮಾನೋತ್ಸವ ಸಂದರ್ಭದಲ್ಲಿ ಹೊರತಂದ ಚೀಟಿಗಳು ಕೂಡ ಪ್ರದರ್ಶನದಲ್ಲಿವೆ. ಕೆಲ ಇ- ಸ್ಟಾಂಪ್ಗಳನ್ನೂ ನೋಡಬಹುದು.

ಶನಿವಾರ ಬೆಳಿಗ್ಗೆ 10ಗಂಟೆಗೆ ನಗರದ ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು ಉದ್ಘಾಟಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಹಿರಿಯ ನಟಿ ಜಯಂತಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರದರ್ಶನದ ಅಂಗವಾಗಿ ಹಿರಿಯ ಅಂಚೆಚೀಟಿ ಸಂಗ್ರಹಕಾರರಿಗೆ ವಿಶೇಷ ಆಮಂತ್ರಣ ನೀಡಲಾಗಿದೆ. `ನೀವೂ ಬನ್ನಿ~ ಎಂಬ ಆಹ್ವಾನ ಅಕಾಡೆಮಿಯಿಂದ.

ಅಂಚೆಚೀಟಿ ಸಂಗ್ರಹ ಹೇಗೆ?
ಇದು ವಿಶಿಷ್ಟ ಹಾಗೂ ದುಬಾರಿ ಹವ್ಯಾಸ. ಆದರೆ ಹುಚ್ಚಿಗೆ ಹಣದ ಎಲ್ಲೆ ಎಲ್ಲಿದೆ? ಎಷ್ಟು ದುಡ್ಡು ಸುರಿದಾದರೂ ಅಂಚೆ ಚೀಟಿ ಸಂಗ್ರಹಿಸುವವರ ದೊಡ್ಡ ಪಡೆಯೇ ಹುಟ್ಟಿಕೊಂಡಿದೆ. ಸಂಗ್ರಹಕಾರರ ಸಂಘಗಳೂ ಇವೆ. ಅಂಚೆ ಇಲಾಖೆಗೆ ಒಂದಿಷ್ಟು ಹಣ ಠೇವಣಿ ರೂಪದಲ್ಲಿಟ್ಟರೆ, ನೂತನ ಅಂಚೆ ಚೀಟಿ ಬಿಡುಗಡೆಯಾದಾಗ ಸ್ವತಃ ಅಂಚೆ ಇಲಾಖೆಯೇ ಚೀಟಿಗಳನ್ನು ಮನೆಗೆ ಕಳುಹಿಸಿಕೊಡುತ್ತದೆ. ಅಪರೂಪದ ಅಂಚೆ ಚೀಟಿಗಳನ್ನು ಸಂಗ್ರಹಕಾರರು ದುಬಾರಿ ಬೆಲೆಗೆ ಮಾರುವುದಿದೆ. ಪರಸ್ಪರ ವಿನಿಮಯ ಮಾಡಿಕೊಳ್ಳುವುದೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.