ಬಾಗೇಪಲ್ಲಿ: ದಲಿತ, ಶೋಷಿತ ಹಾಗೂ ಹಿಂದುಳಿದ ವರ್ಗಗಳ ಜನತೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶಗಳನ್ನು ಪಾಲಿಸಬೇಕಾಗಿದೆ ಎಂದು ದಲಿತ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ವಿ.ವಿಜಯ್ಕುಮಾರ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ದಲಿತ ಸಂರಕ್ಷಣಾ ವೇದಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಜನ್ಮದಿನಾಚರಣೆ ಕೇವಲ ರಾಜಕೀಯ ಪ್ರೇರಿತವಾಗಬಾರದು ಎಂದು ತಿಳಿಸಿದರು.

ಮುಖಂಡ ಪಾಜೇನಹಳ್ಳಿ ನಾಗರಾಜರೆಡ್ಡಿ ಆಟೊ ಚಾಲಕರಿಗೆ ಸಮವಸ್ತ್ರ ವಿತರಿಸಿದರು. ಕಾರ್ಯಕರ್ತರು ದಲಿತ ಕ್ರಾಂತಿಗೀತೆಗಳನ್ನು ಹಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ.ವಿ.ನಾಗಪ್ಪ, ಮಾಜಿ ಯೋಧ ಚೌಡಪ್ಪ, ವಕೀಲ ಎ.ನಂಜುಂಡಪ್ಪ, ಪರೇಸಂದ್ರ ಗ್ರಾಮ ಪಂಚಾಯಿತಿ ಸದಸ್ಯರಾದ ಚೆನ್ನಕೃಷ್ಣಾರೆಡ್ಡಿ, ಎಸ್ಪಿ.ಶ್ರೀನಿವಾಸ್, ವೇದಿಕೆಯ ಪದಾಧಿಕಾರಿಗಳಾದ ಗಂಗಮ್ಮ, ಮಂಜುನಾಥ್, ಶಂಕರ, ಪಿ.ಶಿವಕುಮಾರ್, ನರಸಿಂಹಮೂರ್ತಿ, ಬಿ.ಸೋಮಶೇಖರ್, ಶಿವಪ್ಪ, ಆಂಜನಪ್ಪ, ಎನ್.ಕಿರಣ್ಕುಮಾರ್, ಕೆ.ಗೋಪಿ, ಎಂ.ಜಿ.ಶಿವ, ಗೂಳೂರುಶಿವ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.