ಶುಕ್ರವಾರ, ಮೇ 27, 2022
27 °C

`ಅಕ್ಕನ ವಚನಗಳನ್ನು ಅಧ್ಯಯನ ಮಾಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಕನ್ನಡ ಸಾಹಿತ್ಯ ಪರಂಪರೆ ಯಲ್ಲಿ 12ನೆಯ ಶತಮಾನದ ವಚನ ಸಾಹಿತ್ಯ  ಹೊಸ ಕ್ರಾಂತಿಯನ್ನೆ ಮಾಡಿದೆ. ವಚನಕಾರರಲ್ಲಿ ವಚನ ಕಾರ್ತಿ ಮತ್ತು ಕನ್ನಡದ ಮೊಟ್ಟ ಮೊದಲ ಕವಯಿತ್ರಿ ಅಕ್ಕನ ವಚನ ಗಳು ಅನುಭಾವದ ವಚನಗಳು ಕನ್ನಡ ಸಾಹಿತ್ಯಕ್ಕೆ ಹಿರಿಮೆಯನ್ನು ತಂದಿವೆ. ಅಕ್ಕನ ವಚನಗಳ ಅಧ್ಯಯನ ಮಾಡಿ ಎಂದು ಹುನ್ನೂರ- ಮಧುರಖಂಡಿ ಬಸವ ಜ್ಞಾನ ಗುರು ಕುಲದ ಶರಣ ಈಶ್ವರ ಮಂಟೂರ ಹೇಳಿದರು.

ಇಲ್ಲಿನ ಅಕ್ಕನ ಬಳಗ ಮಹಿಳಾ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಶನಿವಾರ ಅಕ್ಕಮಹಾ ದೇವಿ ಕಲ್ಯಾಣ ಮಂಟಪದಲ್ಲಿ ಅಕ್ಕನ ವಚನಗಳ ನವಮಿ ಉಪನ್ಯಾಸ ಸಮಾ ರಂಭದಲ್ಲಿ ಅವರು ಅಕ್ಕನ ವಚನಗಳ ಕುರಿತು ಉಪನ್ಯಾಸ ನೀಡಿದರು.

`ವಿದೇಶಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಕಾರ್ಯಕ್ರಮ ಸಂಘಟಿಸುವರು. ಜರ್ಮನಿ, ಜಪಾನ್ ಮತ್ತು ಯುಗೋಸ್ಲಾವಿಕಿಯಾ ವಿದೇಶಗಳಲ್ಲಿ ಅಕ್ಕನ ಬಳಗವನ್ನು ರಚಿಸಿ ವಚನ ಸಾಹಿತ್ಯದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸುತ್ತಾರೆ ಎಂದು ಹೇಳಿದ ಅವರು ದೇಶದಲ್ಲಿ ಜನಿಸಿದ ವಚನಕಾ ರರ ವಚನಗಳನ್ನು ಅರಿತುಕೊಳ್ಳ ಬೇಕು ಎಂದು ಸಲಹೆ ಮಾಡಿದರು.

ಅಕ್ಕನ ಬಳಗದ ಅಧ್ಯಕ್ಷೆ ರತ್ನಮ್ಮ ಪಟ್ಟಣದ ಸಮಾರಂಭವನ್ನು ಉದ್ಘಾ ಟಿಸಿದರು. ಕಸ್ತೂರಿಬಾಯಿ ಮಮದಾ ಪುರ, ಕಮಲಮ್ಮ ಜಿಗಬಡ್ಡಿ, ಶರಣಮ್ಮ ಕಾಚಟ್ಟಿ, ಸಂಗಮ್ಮ ಚೌಕಿ ಮಠ, ಲಲಿತಾ ಮಟ್ಟಿ, ಸರೋಜಿನಿ ಪೂಜಾರ, ಕಾಶಮ್ಮ ಬಂಗಾರಶೆಟ್ಟಿ, ಶಾರದಾ ಮೇಟಿ ಇತರರು ಹಾಜ ರಿದ್ದರು. ಉಮಾದೇವಿ ಪಟ್ಟಣಶೆಟ್ಟಿ ಸ್ವಾಗತಿಸಿದರು.

ನೇಕಾರರ ಸಭೆ ಇಂದು

ಇಳಕಲ್: ನಗರದ ನೀಲಕಂಠೇಶ್ವರ ಸಾಂಸ್ಕೃತಿಕ ಭವನದಲ್ಲಿ ಇದೇ 8 ರಂದು ಸಂಜೆ 5 ಗಂಟೆಗೆ ನೇಕಾರರ ಬೇಡಿಕೆ ಕುರಿತು ಸಭೆ ಕರೆಯಲಾಗಿದೆ ಎಂದು ಅಶೋಕ ಶ್ಯಾವಿ ಪ್ರಕಟಣೆ ಯಲ್ಲಿ ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.