ಭಾನುವಾರ, ಜೂನ್ 20, 2021
28 °C

ಅಖಿಲೇಶ್ ಆಯ್ಕೆ: ವಿವಿಧ ಪಕ್ಷಗಳಿಂದ ಅಭಿನಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ಲಖನೌ (ಪಿಟಿಐ): ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಅಖಿಲೇಶ್ ಸಿಂಗ್ ಯಾದವ್ ಅವರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಅಭಿನಂದಿಸಿವೆ.ಅಖಿಲೇಶ್ ಅವರು ಮತದಾರರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತಾರೆ ಹಾಗೂ ಅನುಭವಗಳಿಂದ ಪಾಠ ಕಲಿಯುತ್ತಾರೆ ಎಂದು ನಂಬಿರುವುದಾಗಿ ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ದೆಹಲಿಯಲ್ಲಿ ಹೇಳಿದ್ದಾರೆ.ಹಿಂದೆ ಎಸ್‌ಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಅಪರಾಧಿಗಳು ಮೇಲುಗೈ ಸಾಧಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ. ಭ್ರಷ್ಟಾಚಾರ ಮಟ್ಟ ಹಾಕಿ ಜನರ ಆಶೋತ್ತರಗಳಿಗೆ ಯುವ ನಾಯಕ ಸ್ಪಂದಿಸಲಿ ಎಂದು ಬಿಜೆಪಿ ವಕ್ತಾರ ವಿಜಯ್ ಪಾಠಕ್ ಹೇಳಿದ್ದಾರೆ.ಮುಂದುವರಿದ ಹಿಂಸಾಚಾರ

ಲಖನೌ (ಐಎಎನ್‌ಎಸ್): ನಿಯೋಜಿತ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರ ಮನವಿ ಮತ್ತು ಎಚ್ಚರಿಕೆಯ ಮಧ್ಯೆಯೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ಉತ್ತರ ಪ್ರದೇಶದಾದ್ಯಂತ ಹಿಂಸಾಚಾರ ಮುಂದುವರಿಸಿದ್ದಾರೆ. ಹರ್ದೋಯಿ ಜಿಲ್ಲೆಯಲ್ಲಿ ಶನಿವಾರ        ಬಿಎಸ್‌ಪಿ ಕಾರ್ಯಕರ್ತನೊಬ್ಬನನ್ನು ಕೊಂದು ಹಾಕಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.