ಮೈಸೂರು: ಎರಡು ದಶಕಗಳ ಹಿಂದೆ ಅರಮನೆ ನಗರಿಯಲ್ಲಿ `ಸಿವಿಲ್ ಎಂಜಿನಿಯರಿಂಗ್~ ಓದುತ್ತಿದ್ದ ಯುವಕ ಇವತ್ತು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ `ಭದ್ರಕೋಟೆ~ಯನ್ನು ಕಟ್ಟಿದ್ದಾರೆ!

ಹೌದು: ಅವರ ಹೆಸರೇ ಅಖಿಲೇಶ್ ಯಾದವ್. ಮಂಗಳವಾರ ಪ್ರಕಟವಾದ ಅಲ್ಲಿಯ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಸಮಾಜವಾದಿ ಪಕ್ಷ ಭರ್ಜರಿ ಜಯಭೇರಿ ಬಾರಿಸುವಲ್ಲಿ ಅಖಿಲೇಶ್ ಮುಖ್ಯ ಪಾತ್ರಧಾರಿ.
1990 ಮತ್ತು 1994ರ ಅವಧಿಯಲ್ಲಿ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ಪದವಿ ಓದಿರುವ ಅಖಿಲೇಶ್ ಇವತ್ತು ರಾಷ್ಟ್ರ ರಾಜಕಾರಣದ `ನವನಾಯಕ~ನಾಗಿ ಉದಯಿಸಿದ್ದಾರೆ.

ಅಂದು ಅರಮನೆ ನಗರಿಯಲ್ಲಿ ರಸ್ತೆಗಳಲ್ಲಿ ತಮ್ಮ ಗೆಳೆಯರೊಂದಿಗೆ ಜಿಪ್ಸಿ ಜೀಪ್ನಲ್ಲಿ ಓಡಾಡುತ್ತಿದ್ದ ಅಖಿಲೇಶ್ ಬಗ್ಗೆ ಬಹಳಷ್ಟು ಜನರಿಗೆ ಗೊತ್ತೇ ಇರಲಿಲ್ಲ. ಉತ್ತರಪ್ರದೇಶದ ಪ್ರಭಾವಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಮಗ ಎಂಬ ಗತ್ತನ್ನು ಅವರು ಎಂದೂ ತೋರಿಸಿರಲಿಲ್ಲ. ಸ್ನೇಹಿತರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಅದೆಷ್ಟು ಬಾರಿ ಹೋಗಿ ಬಂದಿದ್ದರೋ ಲೆಕ್ಕವೇ ಇಲ್ಲ. ಅಂದು ಅಖಿಲೇಶ್ಗೆ ಕೌನ್ಸಿಲಿಂಗ್ ಮಾಡಿದ್ದ, ಈಗ ಉಪಪ್ರಾಚಾರ್ಯರಾಗಿರುವ ಶಕೀಬ್-ಉರ್-ರೆಹಮಾನ್~ಆ ದಿನಗಳ~ ನೆನಪಿನ ಸುರುಳಿಯನ್ನು ಬಿಚ್ಚುತ್ತಾರೆ.

`ಆಗ ಕೇಂದ್ರ ಸಚಿವರಾಗಿದ್ದ ಮುಲಾಯಂ ಅವರ ಮಗ ಅಖಿಲೇಶ್ ಎನ್ನುವುದು ಗೊತ್ತೇ ಇರಲಿಲ್ಲ. ಸಭ್ಯ ವಿದ್ಯಾರ್ಥಿಯಾಗಿದ್ದ ಅವರು ಕೆಲವೇ ಕೆಲವು ಆತ್ಮೀಯ ಗೆಳೆಯರ ಬಳಗದಲ್ಲಿ ಇರುತ್ತಿದ್ದರು~ ಎಂದು ಸ್ಮರಿಸುತ್ತಾರೆ.
ಮೈಸೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಜಿಪ್ಸಿಯಲ್ಲಿ `ಲಾಂಗ್ ಡ್ರೈವ್~ ಹೋಗುತ್ತಿದ್ದ ಅವರಿಗೆ ಕಾಳಿದಾಸ ರಸ್ತೆಯ `ಸ್ವೀಟ್ ಎನ್ ಸ್ಪೈಸ್~ನ ಕಾಫಿಯೆಂದರೆ ಅಚ್ಚುಮೆಚ್ಚು. ವಿದ್ಯಾರ್ಥಿಜೀವನದ ಅಮೂಲ್ಯ ಸಮಯವನ್ನು ಇಲ್ಲಿ ಅನುಭವಿಸಿದ ನಂತರ ಅವರು, ಪರಿಸರ ತಂತ್ರಜ್ಞಾನದಲ್ಲಿ ಎಂಎಸ್. ಪದವಿ ಅಧ್ಯಯನಕ್ಕಾಗಿ ಆಸ್ಟ್ರೇಲಿಯಕ್ಕೆ ತೆರಳಿದ್ದರು.

ಅಖಿಲೇಶ್ ಆತ್ಮೀಯ ಸ್ನೇಹಿತರಾಗಿದ್ದ ಮೊಹಮ್ಮದ ಅಶ್ರಫ್ ಗಿಲಾನಿ ಅವರ ತಾಯಿ ಹಸೀನಾ ಶರೀಫ್ ಕೂಡ ಹತ್ತಿರದಿಂದ ಬಲ್ಲವರು. `ಬಹಳ ಸರಳ ವ್ಯಕ್ತಿತ್ವದ ಹುಡುಗನಾಗಿದ್ದ. ವಿಜಯನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಆತನ ವಾಸ. ಯಾವಾಗಲೂ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ನಮ್ಮ ಮನೆಯಲ್ಲಿ ಯಾರಾದರೂ ನೆಂಟರು ಬಂದಾಗ ಆತ ಇಲ್ಲಿಯ ಗ್ಯಾರೇಜಿನಲ್ಲಿ ನನ್ನ ಮಗನೊಂದಿಗೆ ಓದಲು ಕುಳಿತುಬಿಡುತ್ತಿದ್ದ. ಗ್ಯಾರೇಜ್ನ ಕಸವನ್ನು ತಾನೇ ಗುಡಿಸುತ್ತಿದ್ದ. ಒಂದಿಷ್ಟು ಕನ್ನಡ ಮಾತನಾಡುವುದನ್ನು ಕಲಿತಿದ್ದ. ದೊಡ್ಡ ರಾಜಕಾರಣಿಯ ಮಗನೆಂಬ ಗತ್ತನ್ನು ಯಾವಾಗಲೂ ಪ್ರದರ್ಶಿಸಲಿಲ್ಲ. ಇಲ್ಲಿಯೇ ಇರುವ ನಮ್ಮ ಹೊಟೇಲ್ ಗಲ್ಲಾಪೆಟ್ಟಿಗೆಯನ್ನು ಕೆಲವು ಬಾರಿ ಅವರೇ ನಿರ್ವಹಿಸಿದ್ದರು~ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಹಸೀನಾ ನೆನಪಿಸಿಕೊಳ್ಳುತ್ತಾರೆ.

ಆಗ ಸಂಜೆ ಹೊತ್ತಿನಲ್ಲಿ ಅವರೊಂದಿಗೆ ಚಹಾ ಕುಡಿಯಲು ಬರುತ್ತಿದ್ದ ನ್ಯಾಷನಲ್ ಜಿಯಾಗ್ರಫಿಕ್ ಛಾಯಾಗ್ರಾಹಕ ಎನ್.ಸಿ. ಆದರ್ಶ್, `ಈಗಲೂ ಆತ ಅದೇ ಅತ್ಮೀಯ ಸ್ನೇಹಿತ. ಅದೇ ಸರಳತೆ ಈಗಲೂ ಇದೆ. ಆಗ ಮೊದಲ ಎರಡು ವರ್ಷ ಮುಲಾಯಂ ಅವರ ಮಗ ಎಂಬುದೇ ಗೊತ್ತಿರಲಿಲ್ಲ. ಆದರೆ ಅವರ ತಂದೆಗೆ ಜೀವಬೆದರಿಕೆ ಬಂದಾಗ, ಇಲ್ಲಿದ್ದ ಅಖಿಲೇಶ್ಗೂ ವಿಶೇಷ ಭದ್ರತೆ ಒದಗಿಸಿದಾಗಲೇ ನಮಗೆ ಗೋತ್ತಾಗಿದ್ದು. ಅಖಿಲೇಶ್ ಗೆದ್ದಿರುವುದು ಅಪಾರ ಸಂತಸದ ಸುದ್ದಿ~ ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಅಂದು ಮೈಸೂರು ಪಾಕ್ ಮೆಲ್ಲುತ್ತ ಓಡಾಡುತ್ತಿದ್ದ ಹುಡುಗ ಈಗ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷದವರಿಗೆ ಗೆಲುವಿನ ಸಿಹಿ ಉಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.