ಶುಕ್ರವಾರ, ಜನವರಿ 24, 2020
28 °C

ಅದಾಲತ್: ಶಿಕ್ಷಕರಿಂದ ಅಹವಾಲು ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಅನುದಾನಿತ ಶಾಲೆಯಲ್ಲಿ ಹದಿನಾರು ತಿಂಗಳಿಂದ ವೇತನ ನೀಡಿಲ್ಲ. ಜಿಲ್ಲೆಯಲ್ಲಿನ ಶಿಕ್ಷಕರ ವೈದ್ಯಕೀಯ ಮರುಪಾವತಿ ಆಗಿಲ್ಲ ಮುಂತಾದ ಸಮಸ್ಯೆಗಳನ್ನು ಶಿಕ್ಷಕರ ಅದಾಲತ್‌ನಲ್ಲಿ ಶಿಕ್ಷಕರು ಮಂಡಿಸಿದರು.ನಗರದ ಗುರುಭವನದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ನಿರ್ದೆಶಕ ಜಿ.ವಿ. ದಿವಾಕರ ಸಮ್ಮುಖದಲ್ಲಿ ಬೆಂಗಳೂರು ಮತ್ತು ಮೈಸೂರು ವಿಭಾಗದ ಶಿಕ್ಷಕರು ತಮ್ಮ ಅಹವಾಲುಗಳನ್ನು ತೋಡಿಕೊಂಡರು.ಶಿಕ್ಷಕರ ಸೇವಾ ಮಾಹಿತಿಯನ್ನು ಇಲಾಖೆಯಿಂದಲ್ಲೇ ನಿರ್ವಹಿಸಬೇಕು. ಸಿಆರ್‌ಸಿ ಮತ್ತು ಬಿಆರ್‌ಸಿ ಹುದ್ದೆಗಳಿಗೆ ಬಡ್ತಿ ನೀಡಬೇಕು ಎಂದು ಶಿಕ್ಷಕರು ಕೋರಿದರು.ಚಿತ್ರದುರ್ಗ ನಗರದ ಗುಮಾಸ್ತ ಕಾಲೊನಿಯ ಶರಣ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಉಷಾರಾಣಿಗೆ ಆಡಳಿತ ಮಂಡಳಿ ಕಳೆದ 16 ತಿಂಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಇಲಾಖೆಯ ಗಮನಕ್ಕೆ ತಂದಿದ್ದರೂ, ಆಡಳಿತ ಮಂಡಳಿ ಯಾವುದೇ ರೀತಿಯ ಮಾನ್ಯತೆ ನೀಡಿಲ್ಲ ಎಂದು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.ಶಿಕ್ಷಕಿಯ ಸಮಸ್ಯೆ ಆಲಿಸಿದ ಅಧಿಕಾರಿಗಳ ವರ್ಗ ಈ ಸಂಬಂಧ ಆಡಳಿತ ಮಂಡಳಿಗೆ ಮತ್ತೊಮ್ಮೆ ನೋಟಿಸ್ ನೀಡಿ ಆಗಲೂ ಸಮಸ್ಯೆ ಪರಿಹಾರವಾಗದಿದ್ದರೆ, ಶಾಲೆಗೆ ನೀಡುವ ಅನುದಾನವನ್ನು ನಿಲ್ಲಿಸುವ ಬಗ್ಗೆ ಚಿಂತಿಸಲಾಗುವುದೆಂದು ದಿವಾಕರ್ ತಿಳಿಸಿದರು.ಸರ್ಕಾರ 2008- 09ರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಆಯ್ಕೆ ಮಾಡಿದ್ದರೂ ಈವರೆಗೂ ನೇಮಕಾತಿ ನೀಡಿಲ್ಲ. ಈ ಸಂಬಂಧ ಸುಮಾರು 99 ಅಂಗವಿಕಲರು ಇದ್ದಾರೆ. ಅವರು ಬೇರೆ ಸ್ಥಳದಲ್ಲಿ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲದೆ, ಸರ್ಕಾರದಿಂದ ನೇಮಕಾತಿಯ ಆದೇಶವೂ ಬಾರದೇ ತ್ರಿಶಂಕು ಸ್ಥಿತಿಯನ್ನು ಅನುಭವಿಸುವಂತಾಗಿದೆ ಎಂದು ಮನವಿ ಮಾಡಿದರು.ಹೊಸದುರ್ಗ ತಾಲ್ಲೂಕಿನ ದೇವಿಗೆರೆ ಗ್ರಾಮದಲ್ಲಿ ನಡೆಯುತ್ತಿರುವ ಲಕ್ಷ್ಮೀ ನರಸಿಂಹ ಸ್ವಾಮಿ ವಿದ್ಯಾಸಂಸ್ಥೆಯಲ್ಲಿ ಆಡಳಿತ ಮಂಡಳಿ ಸರಿಯಾದ ರೀತಿಯಲ್ಲಿ ಶಾಲೆ ನಡೆಸುತ್ತಿಲ್ಲ ಎಂದು ಸರ್ಕಾರ ಕಳೆದ 4 ವರ್ಷಗಳಿಂದಲೇ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ ಅವರನ್ನು ಹಿಂಪಡೆಯದೆ ಮುಂದುವರಿಸುವಂತೆ ಶಿಕ್ಷಕ ಕರಿಯಪ್ಪ ಕೋರಿದರು.ಶಿಕ್ಷಣ ಇಲಾಖೆಯ ನಿರ್ದೇಶಕ ಹನುಮಂತರಾಯಪ್ಪ, ಪ್ರಾಥಮಿಕ ನಿರ್ದೇಶಕ ದೇವ ಪ್ರಕಾಶ್ ಮತ್ತು ಸಹ ನಿರ್ದೇಶಕ ಚಾರಣ್, ಉಪ ನಿರ್ದೇಶಕ ಮಂಜುನಾಥ್ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)